• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಹಾಲಪ್ಪ ಬಸಪ್ಪ ಆಚಾರ

ಹಾಲಪ್ಪ ಬಸಪ್ಪ ಆಚಾರ

ಜೀವನ ಚರಿತ್ರೆ

ಹಾಲಪ್ಪ ಬಸಪ್ಪ ಆಚಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಬಿಜೆಪಿ ಶಾಸಕರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರು.

ಲಿಂಗಾಯತ ರೆಡ್ಡಿ ಸಮುದಾಯಕ್ಕೆ ಸೇರಿದ ಹಾಲಪ್ಪ ಆಚಾರ ಬಿಎಸ್‌ಸಿ ಪದವೀಧರರು. ಮೊದಲ ಬಾರಿ ಶಾಸಕರಾಗಿ ಆಯ್ಕೆಗೊಂಡ ಹಾಲಪ್ಪ ಆಚಾರ ಮೊದಲ ಬಾರಿಗೆ ಸಚಿವರಾಗಿದ್ದಾರೆ. 2018ರ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ 79,072 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

2013ರ ಚುನಾವಣೆಯಲ್ಲಿಯೂ ಯಲಬುರ್ಗಾ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 35,488 ಮತಗಳನ್ನು ಪಡೆದು ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ವಿರುದ್ಧ ಸೋಲು ಕಂಡಿದ್ದರು.

ಹಾಲಪ್ಪ ಆಚಾರ 6/1/2010 ರಿಂದ 5/1/2016ರ ತನಕ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ.

ರಾಯಚೂರು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಸಹಕಾರ ಮಹಾಮಂಡಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿಯನ್ನು ಸಹ ಹಾಲಪ್ಪ ಆಚಾರ ಪಡೆದಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ಹಾಲಪ್ಪ ಬಸಪ್ಪ ಆಚಾರ
ಜನ್ಮ ದಿನಾಂಕ 01 Dec 1952 (ವಯಸ್ಸು 70)
ಹುಟ್ಟಿದ ಸ್ಥಳ ಯಲಬುರ್ಗಾ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ B. Sc In Karnataka University in 1975
ಉದ್ಯೋಗ Tenacity
ತಂದೆಯ ಹೆಸರು ಬಸಪ್ಪ ಆಚಾರ
ತಾಯಿಯ ಹೆಸರು Not Known
ಅವಲಂಬಿತರ ಹೆಸರು ರತ್ನಮ್ಮ ಆಚಾರ
ಅವಲಂಬಿತರ ಉದ್ಯೋಗ ಗೃಹಿಣಿ
ಲಿಂಗಾಯತ ರೆಡ್ಡಿ

ವಿಳಾಸ

ಖಾಯಂ ವಿಳಾಸ ಮಸಬ ಹಂಚಿನಾಳ, ಯಲಬುರ್ಗಾ, ತಾಲ್ಲೂಕು, ಕೊಪ್ಪಳ ಜಿಲ್ಲೆ
ಸಂಪರ್ಕ ಸಂಖ್ಯೆ NA
ಈ ಮೇಲ್ acharhalappaoffice@gmail.com
ವೆಬ್‌ಸೈಟ್ https://t.co/IiAZHVeo1Y
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ, ಮೊದಲ ಬಾರಿಗೆ ಸಚಿವರಾಗಿ ಆಯ್ಕೆ

ಸಹಕಾರಿ ಕ್ಷೇತ್ರದಲ್ಲಿ ಅಪಾರವಾದ ಅನುಭವ. ಸಹಕಾರಿ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.

ರಾಜಕೀಯ ಕಾಲಾನುಕ್ರಮ

 • 2021
  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆ. ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ
 • 2018
  ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ
 • 2013
  ವಿಧಾನಸಭೆ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತದಲ್ಲಿ ಸೋಲು
 • 2010
  ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ

ಹಿಂದಿನ ಇತಿಹಾಸ

 • 1970
  ರತ್ಮಮ್ಮ ಆಚಾರ ಜೊತೆ ವಿವಾಹವಾದರು.
ಒಟ್ಟು ಆಸ್ತಿ4.08 CRORE
ಆಸ್ತಿ4.08 CRORE
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.