ಎಚ್.ಡಿ. ದೇವೇಗೌಡ

ಎಚ್.ಡಿ. ದೇವೇಗೌಡ

ಎಚ್. ಡಿ.

ಎಚ್.ಡಿ. ದೇವೇಗೌಡ ಜೀವನ ಚರಿತ್ರೆ

ಎಚ್.ಡಿ. ದೇವೇಗೌಡರು ಭಾರತದ 11 ನೇ ಪ್ರಧಾನ ಮಂತ್ರಿಯಾಗಿ ಹಾಗೂ ಕರ್ನಾಟಕದ 14 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1996 ರಿಂದ 97 ರ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಹಾಗೂ 1994 ರಿಂದ 96 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ. 1962 ರಲ್ಲಿ ಇವರು ಪ್ರಥಮ ಬಾರಿಗೆ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದರು. 1996 ರಲ್ಲಿ ಸಂಯುಕ್ತ ರಂಗದ ವತಿಯಿಂದ ಇವರು ಭಾರತದ ಪ್ರಧಾನ ಮಂತ್ರಿಗಳಾದರು. ಇವರು ಹಾಸನ ಲೋಕಸಭಾ ಕ್ಷೇತ್ರದಿಂದ 16ನೇ ಲೋಕಸಭೆಯ ಸದಸ್ಯರೂ ಆಗಿದ್ದಾರೆ. ದೇವೆಗೌಡರು ಜನತಾ ದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಮತ್ತಷ್ಟು ಓದು

ಎಚ್.ಡಿ. ದೇವೇಗೌಡ ವಯಕ್ತಿಕ ಜೀವನ

ಪೂರ್ಣ ಹೆಸರು ಎಚ್.ಡಿ. ದೇವೇಗೌಡ
ಜನ್ಮ ದಿನಾಂಕ 18 May 1933 (ವಯಸ್ಸು 90)
ಹುಟ್ಟಿದ ಸ್ಥಳ ಹೊಳೆನರಸೀಪುರ, ಹಾಸನ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ Others
ಉದ್ಯೋಗ ಕೃಷಿಕ, ಎಂಜಿನಿಯರ್, ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ದಿವಂಗತ ದೊಡ್ಡೇಗೌಡರು
ತಾಯಿಯ ಹೆಸರು ದೇವಮ್ಮ
ಅವಲಂಬಿತರ ಹೆಸರು ಚೆನ್ನಮ್ಮ
ಅವಲಂಬಿತರ ಉದ್ಯೋಗ ಹೌಸ್ ವೈಫ್ ಮತ್ತು ಸಾಮಾಜಿಕ ಕಾರ್ಯ
ಮಕ್ಕಳು 4 ಪುತ್ರ(ರು) 2 ಪುತ್ರಿ(ಯರು)
ಧರ್ಮ ಹಿಂದು
ಖಾಯಂ ವಿಳಾಸ ನಂ.743, ’ಅಮೋಘ’, 2ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಪದ್ಮನಾಭ ನಗರ, ಬೆಂಗಳೂರು-560070, ಕರ್ನಾಟಕ, ಟೆಲಿಫ್ಯಾಕ್ಸ್ : (080) 26891444
ಪ್ರಸ್ತುತ ವಿಳಾಸ ನಂ.5, ಸಫ್ದರ್ ಜಂಗ್ ಲೇನ್, ಹೊಸದಿಲ್ಲಿ - 110011, ದೂ: (011) 23794499, 23794431, ಫ್ಯಾಕ್ಸ್: (011) 23010288
ಸಂಪರ್ಕ ಸಂಖ್ಯೆ 08145273216,08175272156,08026897444,08026798999,08026862222
ಈ ಮೇಲ್ [email protected]
ವೆಬ್‌ಸೈಟ್ http://www.hddevegowda.in/home.htm
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಎಚ್.ಡಿ. ದೇವೇಗೌಡ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹5.03 CRORE
ಆಸ್ತಿ:₹6.01 CRORE
ಸಾಲಸೋಲ: ₹97.98 LAKHS

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಎಚ್.ಡಿ. ದೇವೇಗೌಡ ಕುರಿತು ಆಸಕ್ತಿದಾಯಕ ಸಂಗತಿಗಳು

ಸಮಾಜದ ಎಲ್ಲ ವರ್ಗಗಳ ಜನರ ಅಹವಾಲುಗಳನ್ನು ಸಮಾಧಾನ ಚಿತ್ತದಿಂದ ಆಲಿಸಿ ಪರಿಹಾರ ನೀಡಲು ಯತ್ನಿಸುವ ತಮ್ಮ ಗುಣದಿಂದ ದೇವೇಗೌಡರು ’ಮಣ್ಣಿನ ಮಗ’ ಎಂದು ಹೆಸರುವಾಸಿಯಾಗಿದ್ದಾರೆ.
ಇವರು ತಮ್ಮ ಆರಂಭಿಕ ರಾಜಕೀಯ ಜೀವನದಲ್ಲಿ ವಿಧಾನಸಭೆಯ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದರು.
ಲೋಕಸಭೆಯಲ್ಲಿ ತಮ್ಮ ಉತ್ತಮ ನಡವಳಿಕೆಯಿಂದ ಸದನದ ಘನತೆ ಹಾಗೂ ಗೌರವಗಳನ್ನು ಎತ್ತಿಹಿಡಿದಿರುವ ಗೌರವಕ್ಕೆ ಗೌಡರು ಪಾತ್ರರಾಗಿದ್ದಾರೆ.

ಎಚ್.ಡಿ. ದೇವೇಗೌಡ ರಾಜಕೀಯ ಟೈಮ್‌ಲೈನ್

2014
  • ಇವರು 6ನೇ ಅವಧಿಗೆ 2014 ರಲ್ಲಿ ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾದರು. ಇದು ಜನತೆ ಅವರಲ್ಲಿಟ್ಟ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಸೆಪ್ಟೆಂಬರ್ 6, 2014 ರಂದು ಇವರು ರಕ್ಷಣಾ ಖಾತೆ ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
2009
  • 2009 ರಲ್ಲಿ 15 ನೇ ಲೋಕಸಭೆಗೆ ಆಯ್ಕೆಯಾದರು. ಇದು ಲೋಕಸಭೆಗೆ ಅವರ 5ನೇ ಬಾರಿಯ ಗೆಲುವಾಗಿದೆ. ಈ ವರ್ಷದ ಆಗಸ್ಟ್ 31 ರಂದು ರಕ್ಷಣಾ ಖಾತೆ ಸಮಿತಿಯ ಸದಸ್ಯರಾಗಿ ದೇವೇಗೌಡರು ನೇಮಕವಾದರು.
2006
  • 2006 ರಿಂದ 2008 ರವರೆಗೆ ರೈಲ್ವೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು.
2004
  • 14 ನೇ ಲೋಕಸಭೆಗೆ ಮರು ಆಯ್ಕೆಯಾದರು. (4ನೇ ಅವಧಿಗೆ)
1999
  • 1999 ರಲ್ಲಿ ದೇವೇಗೌಡರ ನೇತೃತ್ವದ ಜನತಾ ದಳ (ಎಸ್) ಪಕ್ಷಕ್ಕೆ ಮಧು ದಂಡವತೆ ಸೇರಿದಂತೆ ಇನ್ನೂ ಹಲವಾರು ಪ್ರಮುಖ ನಾಯಕರು ಸೇರ್ಪಡೆಯಾದರು. ಆದರೆ ಇದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದೇವೇಗೌಡರು ಸೋಲನುಭವಿಸಿದರೂ 2002 ರ ಉಪಚುನಾವಣೆಯಲ್ಲಿ ಕನಕಪುರದಿಂದ ಮತ್ತೆ ಜಯಗಳಿಸಿ ಸೋಲನ್ನು ಹಿಮ್ಮೆಟ್ಟಿಸಿದರು.
1996
  • 1996 ರಲ್ಲಿ ದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಪಿ.ವಿ. ನರಸಿಂಹರಾಯರ ನೇತೃತ್ವದ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿತು. ಆದರೆ ಸರಕಾರ ರಚಿಸುವಷ್ಟು ಬಹುಮತವನ್ನು ಇನ್ನಾವುದೇ ಪಕ್ಷ ಪಡೆಯಲಿಲ್ಲ. ಈ ಸಂದರ್ಭದಲ್ಲಿ ಸಂಯುಕ್ತ ರಂಗದ ವತಿಯಿಂದ ದೇವೇಗೌಡರು ಜೂನ್ 1, 1996 ರಂದು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಏಪ್ರಿಲ್ 11, 1997 ರವರೆಗೆ ಇವರು ಪ್ರಧಾನ ಮಂತ್ರಿ ಹುದ್ದೆಯಲ್ಲಿದ್ದರು. ಪ್ರಧಾನಿಯಾಗಿದ್ದಾಗ ಪೆಟ್ರೋಲಿಯಂ ಮತ್ತು ಕೆಮಿಕಲ್ಸ್, ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ, ಅಣುಶಕ್ತಿ, ಗೃಹ ಖಾತೆ, ಕೃಷಿ, ಆಹಾರ ಸಂಸ್ಕರಣಾ ಕೈಗಾರಿಕೆ, ಪೌರಾಡಳಿತ ಮತ್ತು ಉದ್ಯೋಗ, ಅಸಾಂಪ್ರದಾಯಿಕ ಇಂಧನ ಮೂಲಗಳ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
1995
  • 1995 ರ ಜನೆವರಿಯಲ್ಲಿ ಸ್ವಿಟ್ಜರಲೆಂಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಫೋರಂ ಸಮಾವೇಶದಲ್ಲಿ ಇವರು ಭಾಗವಹಿಸಿದರು. ನಂತರ ಇವರು ಸಿಂಗಾಪುರ ಪ್ರವಾಸಕ್ಕೆ ತೆರಳಿ ಕರ್ನಾಟಕಕ್ಕೆ ಸಾಕಷ್ಟು ವಿದೇಶಿ ಬಂಡವಾಳ ಹರಿದು ಬರಲು ಕಾರಣರಾದರು.
1994
  • 1994 ರಲ್ಲಿ ಇವರು ಜನತಾ ದಳ ರಾಜ್ಯ ಘಟಕದ ಅಧ್ಯಕ್ಷರಾದರು ಹಾಗೂ ಅದೇ ವರ್ಷ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಜನತಾ ದಳ ಗೆದ್ದು ಅಧಿಕಾರ ಹಿಡಿಯಲು ದೇವೇಗೌಡರು ಸಹ ಕಾರಣೀಭೂತರಾದರು. ಈ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಜಯಗಳಿಸಿದ ಗೌಡರು ರಾಜ್ಯದ 14 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
1983
  • 1983 ರಿಂದ 1988 ರವರೆಗೆ ಅಸ್ತಿತ್ವದಲ್ಲಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರಕಾರದಲ್ಲಿ ದೇವೇಗೌಡರು ಸಚಿವರಾಗಿ ಕೆಲಸ ಮಾಡಿದರು.
1975
  • ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ (1975 ರಿಂದ 77)ಇವರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಹಾಕಲಾಗಿತ್ತು.
1972
  • ಕಾಂಗ್ರೆಸ್ ಒಡೆದು ಇಬ್ಭಾಗವಾದಾಗ ದೇವೇಗೌಡರು ಕಾಂಗ್ರೆಸ್ (ಓ) ಪಕ್ಷ ಸೇರಿ ಮಾರ್ಚ 1972 ರಿಂದ ಮಾರ್ಚ 1976 ರವರೆಗೆ ಹಾಗೂ ನವೆಂಬರ್ 1976 ರಿಂದ ಡಿಸೆಂಬರ್ 1977 ರವರೆಗೆ ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿದರು.
1962
  • 1962 ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಇವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 1962 ರಿಂದ 1989 ರ ಅವಧಿಯಲ್ಲಿ ಇದೇ ಕ್ಷೇತ್ರದಿಂದ ಸತತ ಆರು ಬಾರಿ ಶಾಸಕರಾಗಿದ್ದು ಇವರ ಹೆಗ್ಗಳಿಕೆಯಾಗಿದೆ.
1953
  • 1953 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರಿದ ದೇವೇಗೌಡರು 1962 ರವರೆಗೂ ಅದರ ಸದಸ್ಯರಾಗಿದ್ದರು.

ಹಿಂದಿನ ಇತಿಹಾಸ

1976
  • 1976 ರಲ್ಲಿ ಮೀಸಾ ಕಾಯ್ದೆಯಡಿ (ಆಂತರಿಕ ಸುರಕ್ಷತಾ ಕಾಯ್ದೆ) ಇವರನ್ನು ಜೈಲಿಗೆ ಹಾಕಲಾಗಿತ್ತು.
1952
  • 1952 ರಿಂದ 1962 ರವರೆಗೆ ಇವರು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾಗಿದ್ದರು.
1950ನೇ ದಶಕದ ದ್ವಿತೀಯಾರ್ಧದಲ್ಲಿ
  • 1950ನೇ ದಶಕದ ದ್ವಿತೀಯಾರ್ಧದ ಅವಧಿಯಲ್ಲಿ ಹಾಸನದ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜಿನಿಂದ ದೇವೇಗೌಡರು ಸಿವಿಲ್ ಎಂಜಿನಿಯರಿಂಗನಲ್ಲಿ ಡಿಪ್ಲೋಮಾ ಪದವಿ ಪಡೆದರು.

ಎಚ್.ಡಿ. ದೇವೇಗೌಡ ಸಾಧನೆಗಳು

ವಿದ್ಯಾರ್ಥಿ ಜೀವನದಲ್ಲಿಯೇ ಇವರು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.
ಇವರು ತಾಲ್ಲೂಕು ಡೆವಲಪಮೆಂಟ್ ಬೋರ್ಡ ಹಾಗೂ ಸಹಕಾರ ಸಂಘಗಳ ಸದಸ್ಯರಾಗಿದ್ದರು.
ಕೃಷಿ ಹಾಗೂ ತೋಟಗಾರಿಕೆ ಇವರ ಮೆಚ್ಚಿನ ಹವ್ಯಾಸಗಳಾಗಿವೆ.
ಇವರು ಸಂಯುಕ್ತ ರಂಗ ಸಂಚಾಲನ ಸಮಿತಿಯ ಅಧ್ಯಕ್ಷರಾಗಿದ್ದರು.
ಹೊಳೆನರಸೀರಪುರದ ಆಂಜನೇಯ ಕೊಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ದೇವೇಗೌಡರು ಸೇವೆ ಸಲ್ಲಿಸಿದ್ದಾರೆ.
ಸಮಾಜದ ತಳವರ್ಗದದ ಜನರನ್ನು, ಅದರಲ್ಲಿಯೂ ವಿಶೇಷವಾಗಿ ಚಿಕ್ಕ ಹಿಡುವಳಿದಾರರ ಜೀವನಮಟ್ಟ ಸುಧಾರಣೆಗೆ ದೇವೇಗೌಡರು ಬಹುವಾಗಿ ಶ್ರಮಿಸಿದ್ದಾರೆ.
ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಮಹಿಳೆಯರು ಹೀಗೆ ಎಲ್ಲರಿಗೂ ಲಾಭ ಸಿಗುವಂತೆ ಮೀಸಲಾತಿ ಯೋಜನೆಯನ್ನು ದೇವೇಗೌಡರು ಜಾರಿಗೆ ತಂದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X