Get Updates
Get notified of breaking news, exclusive insights, and must-see stories!

ಗೋವಿಂದ ಕಾರಜೋಳ

ಗೋವಿಂದ ಕಾರಜೋಳ
ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಎಂ. ಕಾರಜೋಳ.
By Moumi Majumdar | Friday, August 26, 2022, 11:30:25 AM [IST]

ಗೋವಿಂದ ಕಾರಜೋಳ ಜೀವನ ಚರಿತ್ರೆ

ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಎಂ. ಕಾರಜೋಳ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಇವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಲಸಂನ್ಮೂಲ ಸಚಿವರು.

ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೋವಿಂದ ಎಂ. ಕಾರಜೋಳ ಪೂರ್ಣ ಹೆಸರು ಗೋವಿಂದ ಮುಕ್ತಪ್ಪ ಕಾರಜೋಳ. ದಲಿತ ಎಡಗೈ ಸಮುದಾಯದ ಪ್ರಭಾವಿ ನಾಯಕ. ಲೋಕೋಪಯೋಗಿ ಇಲಾಖೆಯ ಮಾಜಿ ನೌಕರರು ನಂತರ ಅದೇ ಇಲಾಖೆ ಸಚಿವರಾಗಿದ್ದು ಆಸಕ್ತಿಕರ ವಿಚಾರ.

ಡಿಪ್ಲೊಮಾ ಪದವೀಧರರಾದ ಗೋವಿಂದ ಎಂ. ಕಾರಜೋಳ ಕೃಷಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 1994ರ ಚುನಾವಣೆಯಲ್ಲಿ ಮೊದಲ ಬಾರಿಗೆ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಗೆಲುವು ದಾಖಲಿಸಿದರು. 1999ರ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದರು. 52,658 ಮತಗಳನ್ನು ಪಡೆದು ಸೋಲು ಕಂಡರು.

ಬಳಿಕ ಗೋವಿಂದ ಎಂ. ಕಾರಜೋಳ ಬಿಜೆಪಿ ಸೇರಿದರು. 2004ರಿಂದ ಮುಧೋಳ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದರು.

2006-2007ರಲ್ಲಿ ಆಹಾರ ಮತ್ತುನಾಗರಿಕ ಸರಬರಾಜು ಖಾತೆ ಸಚಿವರಾದರು. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಣ್ಣ ನೀರಾವರಿ ಖಾತೆ ಸಚಿವರಾದರು. ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಹಾಗೂ ಪ್ರವಾಸೋದ್ಯಮ ಸಚಿವರಾದರು. ಸಮಾಜ ಕಲ್ಯಾಣ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

2018ರ ಚುನಾವಣೆಯಲ್ಲಿ ಗೋವಿಂದ ಕಾರಜೋಳ 64,727 ಮತಗಳನ್ನು ಪಡೆದು ಜಯಗಳಿಸಿದರು. 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉಪ ಮುಖ್ಯಮಂತ್ರಿಯಾದರು. ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದರು.

ಮತ್ತಷ್ಟು ಓದು

ಗೋವಿಂದ ಕಾರಜೋಳ ವಯಕ್ತಿಕ ಜೀವನ

ಪೂರ್ಣ ಹೆಸರು ಗೋವಿಂದ ಕಾರಜೋಳ
ಜನ್ಮ ದಿನಾಂಕ 25 Jan 1951 (ವಯಸ್ಸು 75)
ಹುಟ್ಟಿದ ಸ್ಥಳ ಬಾಗಲಕೋಟೆ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ 10th Pass
ಉದ್ಯೋಗ ಕೃಷಿ
ತಂದೆಯ ಹೆಸರು ಮುಕ್ತಪ್ಪ
ತಾಯಿಯ ಹೆಸರು NA
ಅವಲಂಬಿತರ ಹೆಸರು NA
ಧರ್ಮ ಹಿಂದು
ವೆಬ್‌ಸೈಟ್ NA

ಗೋವಿಂದ ಕಾರಜೋಳ ಒಟ್ಟು ಆಸ್ತಿ

ಒಟ್ಟು ಆಸ್ತಿ
₹2.08 CRORE
ಆಸ್ತಿ
₹2.08 CRORE
ಸಾಲಸೋಲ
N/A

ಗೋವಿಂದ ಕಾರಜೋಳ ರಾಜಕೀಯ ಟೈಮ್‌ಲೈನ್

  • 2018 : 64,727 ಮತಗಳನ್ನು ಪಡೆದು ಮತ್ತೆ ಶಾಸಕರಾಗಿ ಆಯ್ಕೆ. 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಪ ಮುಖ್ಯಮಂತ್ರಿ.
  • 2008 : ಚುನಾವಣೆಯಲ್ಲಿ ಮತ್ತೆ ಗೆಲುವು ಸಣ್ಣ ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಣೆ
  • 2006 : ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿ ಕಾರ್ಯ ನಿರ್ವಹಣೆ
  • 2004 : ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಣೆ
  • 1994 : ಜನತಾದಳದಿಂದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ. ಶಾಸಕರಾಗಿ ಆಯ್ಕೆ

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+