ಗಿರಿರಾಜ ಸಿಂಗ್ ಭಾರತದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ನವಾಡಾ ಲೋಕಸಭಾ ಮತಕ್ಷೇತ್ರದಿಂದ 16ನೇ ಲೋಕಸಭೆಯ ಸದಸ್ಯರಾಗಿದ್ದಾರೆ. ಪ್ರಸ್ತುತ ಇವರು ಕೇಂದ್ರ ಸರಕಾರದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಖಾತೆಯ (ಸ್ವತಂತ್ರ ಖಾತೆ) ಸಚಿವರಾಗಿದ್ದಾರೆ. ಈ ಹಿಂದೆ ಇವರು ನಿತೀಶಕುಮಾರ ಅವರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಇವರು ಬಿಹಾರ ಸರಕಾರದ ಸಹಕಾರ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಗಿರಿರಾಜ ಸಿಂಗ್ ಸೆಪ್ಟೆಂಬರ್ 8, 1952 ರಂದು ಬಿಹಾರದ ಲಖಿಸರಾಯ್ ಜಿಲ್ಲೆಯ ಬರಾಹಿಯಾದಲ್ಲಿ ಜನಿಸಿದರು. ಬರಾಹಿಯಾದ ಸರಕಾರಿ ಶಾಲೆಯಲ್ಲಿ ಆರಂಭಿಕ ಹಂತದ ಶಿಕ್ಷಣ ಪಡೆದ ಇವರು, 1971 ರಲ್ಲಿ ಮಗಧ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಇವರು ಭೂಮಿಹಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಪತ್ನಿಯ ಹೆಸರು ಉಮಾ ಸಿನ್ಹಾ. ಗಿರಿರಾಜ ಸಿಂಗ್ ದಂಪತಿಗೆ ಓರ್ವ ಪುತ್ರಿ ಇದ್ದಾಳೆ.
| ಪೂರ್ಣ ಹೆಸರು | ಗಿರಿರಾಜ ಸಿಂಗ್ |
| ಜನ್ಮ ದಿನಾಂಕ | 08 Sep 1952 (ವಯಸ್ಸು 73) |
| ಹುಟ್ಟಿದ ಸ್ಥಳ | ಬರಾಹಿಯಾ, ಲಖಿಸರಾಯ್ ಜಿಲ್ಲೆ, ಬಿಹಾರ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate |
| ಉದ್ಯೋಗ | ಕೃಷಿಕ |
| ತಂದೆಯ ಹೆಸರು | ಶ್ರೀ ರಾಮ ಅವತಾರ ಸಿಂಗ್ |
| ತಾಯಿಯ ಹೆಸರು | ದಿವಂಗತ ಶ್ರೀಮತಿ ತಾರಾ ದೇವಿ |
| ಅವಲಂಬಿತರ ಹೆಸರು | ಶ್ರೀಮತಿ ಉಮಾ ಸಿನ್ಹಾ |
| ಮಕ್ಕಳು | 1 ಪುತ್ರಿ(ಯರು) |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.