ಪಿ.ಸಿ. ಗದ್ದಿಗೌಡರ

ಪಿ.ಸಿ. ಗದ್ದಿಗೌಡರ
1987ರ ಅವಧಿಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಜಿಲ್ಲೆಗಳ ಪುನರ್ವಿಂಗಡಣಾ ಸಮಿತಿಯನ್ನು ರಚಿಸಿ ಅದಕ್ಕೆ ಪಿ. ಸಿ.
By Moumi Majumdar | Thursday, May 30, 2019, 03:45:57 PM [IST]

ಪಿ.ಸಿ. ಗದ್ದಿಗೌಡರ ಜೀವನ ಚರಿತ್ರೆ

1987ರ ಅವಧಿಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಜಿಲ್ಲೆಗಳ ಪುನರ್ವಿಂಗಡಣಾ ಸಮಿತಿಯನ್ನು ರಚಿಸಿ ಅದಕ್ಕೆ ಪಿ.ಸಿ. ಗದ್ದಿಗೌಡರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಇದೇ ಕಾರಣದಿಂದ ಗದ್ದಿಗೌಡರ ರಾಜಕಾರಣದಲ್ಲಿ ಮುಂದೆ ಬರಲು ಸಹಕಾರಿಯಾಯಿತು. ಅವಿಭಜಿತ ವಿಜಾಪುರ ಜಿಲ್ಲೆ ವಿಂಗಡಿಸಿ ಬಾಗಲಕೋಟ ಜಿಲ್ಲೆ ರಚನೆಗೆ ಗದ್ದಿಗೌಡರ ಅವರೇ ಪ್ರಮುಖ ಕಾರಣಕರ್ತರಾಗಿದ್ದಾರೆ. 1988 ರಲ್ಲಿ ಗದ್ದಿಗೌಡರ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 1994 ರಲ್ಲಿ ಜೆಡಿಎಸ್ ಟಿಕೆಟ್ ದೊರೆಯದ ಕಾರಣ ಬದಾಮಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಅವರು ಕಾಂಗ್ರೆಸ್‌ನ ಬಿ.ಬಿ. ಚಿಮ್ಮನಕಟ್ಟಿ ಎದುರು ಸೋತರು. ಆಲ್ ಇಂಡಿಯಾ ಪ್ರೊಗ್ರೆಸಿವ್ ಜನತಾ ದಳದ ಸದಸ್ಯರಾಗಿದ್ದ ಇವರು ನಂತರ ಬಿಜೆಪಿ ಸೇರಿ ಬಿಜೆಪಿ ಟಿಕೆಟ್ ಮೇಲೆ 14ನೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. 2004 ರಲ್ಲಿ ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಇವರು ಆಗಿನಿಂದಲೂ ಈ ಕ್ಷೇತ್ರವನ್ನು ಬಿಟ್ಟು ಕೊಟ್ಟಿಲ್ಲ.

ಮತ್ತಷ್ಟು ಓದು

ಪಿ.ಸಿ. ಗದ್ದಿಗೌಡರ ವಯಕ್ತಿಕ ಜೀವನ

ಪೂರ್ಣ ಹೆಸರು ಪಿ.ಸಿ. ಗದ್ದಿಗೌಡರ
ಜನ್ಮ ದಿನಾಂಕ 01 Jun 1951 (ವಯಸ್ಸು 74)
ಹುಟ್ಟಿದ ಸ್ಥಳ ಹೆಬ್ಬಳ್ಳಿ, ಬಾಗಲಕೋಟ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ವಕೀಲ, ಕೃಷಿಕ
ತಂದೆಯ ಹೆಸರು ಶ್ರೀ ಚಂದನಗೌಡ
ತಾಯಿಯ ಹೆಸರು ಶ್ರೀಮತಿ ಬಾಳವ್ವ
ಅವಲಂಬಿತರ ಹೆಸರು ಶ್ರೀಮತಿ ಸಾವಿತ್ರಿ
ಅವಲಂಬಿತರ ಉದ್ಯೋಗ ಹೌಸವೈಫ್
ಮಕ್ಕಳು 2 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು

ಪಿ.ಸಿ. ಗದ್ದಿಗೌಡರ ಒಟ್ಟು ಆಸ್ತಿ

ಒಟ್ಟು ಆಸ್ತಿ
₹3.6 CRORE
ಆಸ್ತಿ
₹4.4 CRORE
ಸಾಲಸೋಲ
₹79.88 LAKHS

ಪಿ.ಸಿ. ಗದ್ದಿಗೌಡರ ಕುರಿತು ಆಸಕ್ತಿದಾಯಕ ಸಂಗತಿಗಳು

ಬಾಗಲಕೋಟ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ.

ಪಿ.ಸಿ. ಗದ್ದಿಗೌಡರ ರಾಜಕೀಯ ಟೈಮ್‌ಲೈನ್

  • 2014 : 2014 ರಲ್ಲಿ ಕಾಂಗ್ರೆಸ್ಸಿನ ಅಜಯಕುಮಾರ ಸರನಾಯಕ ಅವರನ್ನು ಸೋಲಿಸಿ ಮೂರನೇ ಅವಧಿಗೆ ಸಂಸದರಾದರು.
  • 2009 : 2009 ರಲ್ಲಿ ಕಾಂಗ್ರೆಸ್ಸಿನ ಜೆ.ಟಿ. ಪಾಟೀಲ ಅವರನ್ನು 35446 ಮತಗಳ ಅಂತರದಿಂದ ಸೋಲಿಸಿ ಮತ್ತೊಮ್ಮೆ ಸಂಸದರಾದರು.
  • 2004 : ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ಸಿನ ಆರ್.ಎಸ್. ಪಾಟೀಲ ಅವರನ್ನು 167383 ಮತಗಳ ಅಂತರದಿಂದ ಸೋಲಿಸಿ ಸಂಸದರಾದರು.
  • 1994 : 1994 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಶೇ.18 ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದು ಸೋತರು. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ.ಬಿ. ಚಿಮ್ಮನಕಟ್ಟಿ ಶೇ.34 ರಷ್ಟು ಮತಗಳನ್ನು ಪಡೆದು ಜಯಶಾಲಿಯಾದರು.
  • 1988 : ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡರು.

ಹಿಂದಿನ ಇತಿಹಾಸ

  • 1976: ಬದಾಮಿಯಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು.

ಪಿ.ಸಿ. ಗದ್ದಿಗೌಡರ ಸಾಧನೆಗಳು

1986 ರಿಂದ 1987 ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಜಿಲ್ಲೆಗಳ ಪುನರ್ವಿಂಗಡಣಾ ಸಮಿತಿ ಅಧ್ಯಕ್ಷ.
ನೆಹರು ಯುವ ಕೇಂದ್ರ, ಹೆಬ್ಬಳ್ಳಿ, ಬಾಗಲಕೋಟ ಜಿಲ್ಲೆ ಇದರ ಅಧ್ಯಕ್ಷ.
ಬದಾಮಿ ಬಾರ್ ಅಸೋಸಿಯೇಶನ್ ಅಧ್ಯಕ್ಷ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+