ಭಾರತದ ಪ್ರಸಿದ್ಧ ನೆಹರು-ಗಾಂಧಿ ಕುಟುಂಬದ ಇನ್ನೊಂದು ಕುಡಿ ಫಿರೋಜ್ ವರುಣ್ ಗಾಂಧಿ. ಆದರೆ ವರುಣ್ ಗಾಂಧಿ ಎಂದೇ ಹೆಸರಾದ ಇವರು ಉತ್ತರಪ್ರದೇಶದ ಫಿಲಿಬಿತ್ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಜಯಿಸಿ ಸಂಸದರಾಗಿದ್ದಾರೆ. ಸಂಜಯ ಗಾಂಧಿ ಮತ್ತು ಮನೇಕಾ ಗಾಂಧಿ ಅವರ ಪುತ್ರನಾಗಿರುವ ವರುಣ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೊಮ್ಮಗ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮರಿಮೊಮ್ಮಗ. ಪ್ರಬಲ ರಾಜಕೀಯ ವಂಶಸ್ಥರ ಸಂತತಿಯಲ್ಲಿ ಜನಿಸಿದ ನಂತರ ರಾಜಕೀಯ ಪ್ರವೇಶ ಅನಿವಾರ್ಯ ಎಂಬಂತೆ ವರುಣ್ ರಾಜಕೀಯವನ್ನು ಪ್ರವೇಶಿಸಿದರು. 1999ರಲ್ಲಿ ಫಿಲಿಬಿತ್ ಕ್ಷೇತ್ರದಲ್ಲಿ ಅವರ ತಾಯಿ ಲೋಕಸಭಾ ಕಣಕ್ಕಿಳಿದಾಗ ಮೊದಲ ಬಾರಿಗೆ ವರುಣ್ ಪ್ರಚಾರಕ್ಕೆ ಆಗಮಿಸಿ ಅಂದಿನಿಂದ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. 2004ರಲ್ಲಿ ಎನ್ಡಿಎ ಭಾಗವಾಗಿದ್ದ ಬಿಜೆಪಿಯನ್ನು ಅಧಿಕೃತವಾಗಿ ಸೇರ್ಪಡೆಗೊಂಡ ಮನೇಕಾ ಗಾಂಧಿ ಜತೆಗೆ ಮಗ ವರುಣ್ ಗಾಂಧಿ ಕೂಡ ಬಿಜೆಪಿ ಭಾಗವಾದರು. ಈ ವೇಳೆ ಬಿಜೆಪಿ ಪರವಾಗಿ 40 ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡು ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಚಿರಪರಿಚಿತರಾದರು. 2009ರಲ್ಲಿ ಫಿಲಿಬಿತ್ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಜಯಗಳಿಸಿದ್ದ ಮನೇಕಾ ಗಾಂಧಿ ಬದಲಾಗಿ ವರುಣ್ ಗಾಂಧಿಯನ್ನೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಳಿಸಲು ಬಿಜೆಪಿ ನಿರ್ಧರಿಸಿತು. ಅದರಂತೆ ಕಾಂಗ್ರೆಸ್ಸಿನ ವಿ.ಎಂ. ಸಿಂಗ್ ಅವರನ್ನು ಸೋಲಿಸಿ ವರುಣ್ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಇದೇ ವೇಳೆಗೆ ನೆರೆಯ ಸುಲ್ತಾನಪುರ ಕ್ಷೇತ್ರದಿಂದ ಮನೇಕಾ ಸ್ಪರ್ಧಿಸಿ, ಗೆದ್ದರು. 2013ರಲ್ಲಿ ಬಿಜೆಪಿಯ ಕಿರಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದರು. 2014ರಲ್ಲಿ ತಾಯಿಯ ಕ್ಷೇತ್ರ ಸುಲ್ತಾನಪುರದಿಂದ ಮತ್ತು 2019ರಲ್ಲಿ ಮತ್ತೆ ಫಿಲಿಬಿತ್ ನಿಂದ ಸ್ಪರ್ಧಿಸಿ ಗೆಲುವು ಕಂಡರು.
| ಪೂರ್ಣ ಹೆಸರು | ಫಿರೋಜ್ ವರುಣ್ ಗಾಂಧಿ |
| ಜನ್ಮ ದಿನಾಂಕ | 13 Mar 1980 (ವಯಸ್ಸು 46) |
| ಹುಟ್ಟಿದ ಸ್ಥಳ | ನವದೆಹಲಿ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Post Graduate |
| ಉದ್ಯೋಗ | ಬರಹಗಾರ, ಕವಿ, ರಾಜಕಾರಣಿ |
| ತಂದೆಯ ಹೆಸರು | ಸಂಜಯ ಗಾಂಧಿ |
| ತಾಯಿಯ ಹೆಸರು | ಮನೇಕಾ ಗಾಂಧಿ |
| ಅವಲಂಬಿತರ ಹೆಸರು | ಯಾಮಿನಿ ಗಾಂಧಿ |
| ಅವಲಂಬಿತರ ಉದ್ಯೋಗ | ಡಿಸೈನರ್ |
| ಮಕ್ಕಳು | 1 ಪುತ್ರಿ(ಯರು) |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.