Get Updates
Get notified of breaking news, exclusive insights, and must-see stories!

ಎಡಪ್ಪಾಡಿ ಕೆ. ಪಳನಿಸ್ವಾಮಿ

ಎಡಪ್ಪಾಡಿ ಕೆ. ಪಳನಿಸ್ವಾಮಿ
ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು 1974 ರಲ್ಲಿ ಎಐಎಡಿಎಂಕೆ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.
By Rashmi | Wednesday, March 17, 2021, 05:42:01 PM [IST]

ಎಡಪ್ಪಾಡಿ ಕೆ. ಪಳನಿಸ್ವಾಮಿ ಜೀವನ ಚರಿತ್ರೆ

ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು 1974 ರಲ್ಲಿ ಎಐಎಡಿಎಂಕೆ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2017 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ಅವರು ಜಯಲಲಿತಾ ಮತ್ತು ಒ.ಪನ್ನೀರ್‌ಸೆಲ್ವಂ ನೇತೃತ್ವದ ಸರಕಾರದಲ್ಲಿ ಹೆದ್ದಾರಿ ಮತ್ತು ಸಣ್ಣ ಬಂದರುಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ‌ ಮೊದಲು ಇವರು 1989,1991, 2011 ಮತ್ತು 2016 ರಲ್ಲಿ ಎಡಪಡಿ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಮತ್ತಷ್ಟು ಓದು

ಎಡಪ್ಪಾಡಿ ಕೆ. ಪಳನಿಸ್ವಾಮಿ ವಯಕ್ತಿಕ ಜೀವನ

ಪೂರ್ಣ ಹೆಸರು ಎಡಪ್ಪಾಡಿ ಕೆ. ಪಳನಿಸ್ವಾಮಿ
ಜನ್ಮ ದಿನಾಂಕ 12 May 1954 (ವಯಸ್ಸು 71)
ಹುಟ್ಟಿದ ಸ್ಥಳ ಸಿಲುವಂ ಪಾಲಯಂ - ಸೇಲಂ
ಪಕ್ಷದ ಹೆಸರು All India Anna Dravida Munnetra Kazhagam
ವಿದ್ಯಾರ್ಹತೆ 12th Pass
ಉದ್ಯೋಗ ಕೃಷಿಕ
ತಂದೆಯ ಹೆಸರು ಕರುಪ್ಪ ಗೌಂಡರ್
ತಾಯಿಯ ಹೆಸರು ತವಾಸಿ ಅಮ್ಮಲ್
ಅವಲಂಬಿತರ ಹೆಸರು ಪಿ. ರಾಧಾ
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು)
ಧರ್ಮ ಹಿಂದು

ಎಡಪ್ಪಾಡಿ ಕೆ. ಪಳನಿಸ್ವಾಮಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹6.41 CRORE
ಆಸ್ತಿ
₹6.7 CRORE
ಸಾಲಸೋಲ
₹29.75 LAKHS

ಎಡಪ್ಪಾಡಿ ಕೆ. ಪಳನಿಸ್ವಾಮಿ ಕುರಿತು ಆಸಕ್ತಿದಾಯಕ ಸಂಗತಿಗಳು

ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಪಳನಿಸ್ವಾಮಿ ಬೆಲ್ಲದ ವ್ಯಾಪಾರಿಯಾಗಿದ್ದರು. ಹೀಗಾಗಿ ಆ ಸಮಯದಲ್ಲಿ ಇವರನ್ನು 'ಬೆಲ್ಲದ ಪಳನಿಸ್ವಾಮಿ' ಎಂದು ಕರೆಯಲಾಗುತ್ತಿತ್ತು. 1989 ರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಎಐಎಡಿಎಂಕೆ ಎರಡು ಬಣಗಳಾಗಿ ವಿಂಗಡಿಸಲ್ಪಟ್ಟಿತು. ಜಯಲಲಿತಾ ಅವರ ನಾಯಕತ್ವದಲ್ಲಿ ಪಳನಿಸ್ವಾಮಿ ಕೋಳಿ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದರು.

ಎಡಪ್ಪಾಡಿ ಕೆ. ಪಳನಿಸ್ವಾಮಿ ರಾಜಕೀಯ ಟೈಮ್‌ಲೈನ್

  • 2017 : ಜಯಲಲಿತಾ ಅವರ ನಿಧನದ ನಂತರ, ಆಗಿನ ಸಿಎಂ ಒ. ಪನ್ನೀರ್ ಸೆಲ್ವಂ ಅವರಿಂದ ಅಧಿಕಾರವನ್ನು ಕಸಿದುಕೊಳ್ಳಲು ಶಶಿಕಲಾ ಸಾಕಷ್ಟು ಪ್ರಯತ್ನ ನಡೆಸಿದರು. ಹಲವಾರು ಆರೋಪ ಎದುರಿಸುತ್ತಿದ್ದ ಶಶಿಕಲಾ ಜೈಲು‌ ಪಾಲಾದರು. ಇತ್ತ ಕೊನೆಗೂ ಪನ್ನೀರ್ ಸೆಲ್ವಂ ಅಧಿಕಾರದಿಂದ ಕೆಳಗಿಳಿದರು. ಅಂತಿಮವಾಗಿ ಎಐಎಡಿಎಂಕೆ ಪಳನಿಸ್ವಾಮಿ ಕೆ. ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು
  • 2016 : ಮತ್ತೆ ಎಡಪ್ಪಾಡಿ ಕ್ಷೇತ್ರದಿಂದ ಗೆದ್ದರು. ಪಿಎಂಕೆ ಪಕ್ಷದ ಪ್ರಬಲ ಅಭ್ಯರ್ಥಿಗಳಲ್ಲಿ ಒಬ್ಬರಾದ ಅನ್ನದುರೈ ಅವರನ್ನು 42022 ಮತಗಳ ಅಂತರದೊಂದಿಗೆ ಸೋಲಿಸಿದರು.
  • 2011 : ಸುಮಾರು 20 ವರ್ಷಗಳ ನಂತರ ಪಳನಿಸ್ವಾಮಿ ಮತ್ತೆ ಎಡಪ್ಪಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಮರು. ಅವರು ಪ್ರಬಲ ಪ್ರತಿಸ್ಪರ್ಧಿ ಪಿಎಂಕೆ ಪಕ್ಷದ ಕಾರ್ತೆ ಎಂ. ಎಂಬುವರನ್ನು ಸೋಲಿಸಿದರು.
  • 2006 : 10 ವರ್ಷಗಳ ನಂತರ ಪಳನಿಸ್ವಾಮಿ ಮತ್ತೆ ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿಫಲರಾಗಿ ಕಾವೇರಿ ವಿ. ಎಂಬುವರ ವಿರುದ್ಧ ಸೋತರು.
  • 2001 : ಈ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.
  • 1998 : ತಿರುಚೆಂಗೋಡ್ ಕ್ಷೇತ್ರದಿಂದ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. ಡಾ.ರಾಮಲಿಂಗಂ ಕೆ.ಪಿ. ಅವರನ್ನು 104,809 ಮತಗಳ ಅಂತರದೊಂದಿಗೆ ಸೋಲಿಸಿದರು.
  • 1996 : ಈ ವಿಧಾನಸಭಾ ಚುನಾವಣೆಯಲ್ಲಿ ಪಳನಿಸ್ವಾಮಿ ತಮ್ಮ ಎಡಪ್ಪಾಡಿ ಕ್ಷೇತ್ರವನ್ನು ಕಳೆದುಕೊಂಡರು. ಅಲ್ಲದೆ, ಚುನಾವಣಾ ಫಲಿತಾಂಶದಲ್ಲಿ ಅವರು ಶೇ. 28.3% ರಷ್ಟು ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು.
  • 1991 : ಅದೇ ಕ್ಷೇತ್ರದಿಂದ ಮತ್ತೆ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ಈ ಬಾರಿ ಅವರು ಪಿಎಂಕೆ ಪಕ್ಷದ ಪಿ.ಕೋಲಂಡೈ ಗೌಂಡರ್ ಅವರನ್ನು ಸೋಲಿಸಿದರು.
  • 1989 : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಳನಿಸ್ವಾಮಿ ಮೊದಲ ಬಾರಿಗೆ ಎಡಪ್ಪಾಡಿ ಕ್ಷೇತ್ರದಿಂದ ಗೆದ್ದರು. ಅವರು ಕೇವಲ 1364 ಮತಗಳ ಅಂತರದಿಂದ ಡಿಎಂಕೆ ಅಭ್ಯರ್ಥಿ ಪಳನಿಸ್ವಾಮಿ ಎಲ್. ಅವರನ್ನು ಸೋಲಿಸಿದರು.
  • 1980s : ರಾಜಕೀಯ ಪ್ರವೇಶಿಸಿ ಪಳನಿಸ್ವಾಮಿ ಸ್ವಲ್ಪ ಸಮಯದಲ್ಲೇ ಎಐಎಡಿಎಂಕೆ ಸದಸ್ಯರಾದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+