ಕೇರಳ ರಾಜ್ಯದವರಾದ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ಅವರು ಮಾಜಿ ರಾಜತಾಂತ್ರಿಕರೂ ಹೌದು. ಪ್ರಸ್ತುತ ಕೇರಳದ ತಿರುವನಂತಪುರಂ ಕ್ಷೇತ್ರದ ಸಂಸದರಾಗಿದ್ದಾರೆ. ಕಾಂಗ್ರೆಸ್‌ನಿಂದ ಈ ಪ್ರದೇಶದಲ್ಲಿ ಸತತ ಎರಡು ಬಾರಿ ಅವರು ಸಂಸದರಾಗಿ ಚುನಾಯಿತರಾಗಿದ್ದಾರೆ. ಮನಮೋಹನ್ ಸಿಂಗ್ ಅವರ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರೂ ಆಗಿದ್ದರು. 1956 ರಲ್ಲಿ ಲಂಡನ್‌ನಲ್ಲಿ ಹುಟ್ಟಿದ ತರೂರ, ಭಾರತ ಹಾಗೂ ಅಮೆರಿಕಾಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1978 ರಲ್ಲಿ ಫ್ಲೆಚರ್ ಸ್ಕೂಲ್ ಆಫ್ ಲಾ ಆಂಡ್ ಡಿಪ್ಲೊಮಸಿ ಕಾಲೇಜಿನಿಂದ ಪಿಎಚ್‌ಡಿ ಪದವಿ ಪಡೆದರು. ವಿಶ್ವಸಂಸ್ಥೆಯಲ್ಲಿ ಶಾಂತಿದೂತನಾಗಿ, ನಿರಾಶ್ರಿತರ ಕಾರ್ಯಕರ್ತನಾಗಿ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಕೋಫಿ ಅನ್ನಾನ್ ಅವರ ಕಾರ್ಯಾವಧಿಯಲ್ಲಿ ಅಂಡರ್ ಸೆಕ್ರೆಟರಿ ಜನರಲ್ ಆಗಿ ಕೆಲಸ ಮಾಡಿದ್ದಾರೆ.
| ಪೂರ್ಣ ಹೆಸರು | ಡಾ. ಶಶಿ ತರೂರ |
| ಜನ್ಮ ದಿನಾಂಕ | 09 Mar 1956 (ವಯಸ್ಸು 70) |
| ಹುಟ್ಟಿದ ಸ್ಥಳ | ಲಂಡನ್ (ಇಂಗ್ಲೆಂಡ್) |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | Doctorate |
| ಉದ್ಯೋಗ | ರಾಜತಾಂತ್ರಿಕ, ಬರಹಗಾರ, ಅಂತಾರಾಷ್ಟ್ರೀಯ ನಾಗರಿಕ ಸೇವೆ |
| ತಂದೆಯ ಹೆಸರು | ಶ್ರೀ ಚಂದ್ರನ್ ತರೂರ |
| ತಾಯಿಯ ಹೆಸರು | ಶ್ರೀಮತಿ ಲಿಲ್ಲಿ ತರೂರ |
| ಅವಲಂಬಿತರ ಹೆಸರು | ದಿವಂಗತ ಸುನಂದಾ ಪುಷ್ಕರ |
| ಅವಲಂಬಿತರ ಉದ್ಯೋಗ | N/A |
| ಮಕ್ಕಳು | 2 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | http://shashitharoor.in/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.