ಡಾ. ಸತ್ಯಪಾಲ್ ಸಿಂಗ್ ಐಪಿಎಸ್ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿ. ತಮ್ಮ ಪೊಲೀಸ್ ಸೇವೆಯನ್ನು ಮುಂಬೈನ ಪೊಲೀಸ್ ಆಯುಕ್ತರಾಗುವ ಮೂಲಕ ಆರಂಭಿಸಿದರು. ನಿವೃತ್ತಿ ನಂತರ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸೇರ್ಪಡೆಗೊಂಡರು. 2014ರಲ್ಲಿ ಉತ್ತರಪ್ರದೇಶದ ಭಾಘಪತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ರಾಷ್ಟ್ರೀಯ ಲೋಕ ದಳ ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಅವರನ್ನು 2.06 ಲಕ್ಷ ಮತಗಳಿಂದ ತಮ್ಮ ಮೊದಲ ಚುನಾವಣೆಯಲ್ಲೇ ಸೋಲಿಸಿ ಅತ್ಯಧಿಕ ಮತಗಳಿಂದ ಜಯಿಸಿದರು. ಮಾನವ ಸಂಪನ್ಮೂಲ ಅಭಿವೃದ್ಧಿ, ಜಲಸಂಪನ್ಮೂಲ ಸಚಿವಾಲಯ, ನದಿ ಅಭಿವೃದ್ಧಿ ಮತ್ತು ಗಂಗಾ ನದಿ ಪುನರುಜ್ಜೀವನ, ಉನ್ನತ ಶಿಕ್ಷಣದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆರ್.ಎಲ್.ಡಿ.ಯ ಜಯಂತ್ ಚೌಧರಿ ಅವರನ್ನು 23ಸಾವಿರ ಮತಗಳಿಂದ ಸೋಲಿಸಿ ಪುನರಾಯ್ಕೆಯಾದರು.
| ಪೂರ್ಣ ಹೆಸರು | ಡಾ. ಸತ್ಯಪಾಲ್ ಸಿಂಗ್ Singh |
| ಜನ್ಮ ದಿನಾಂಕ | 29 Nov 1955 (ವಯಸ್ಸು 70) |
| ಹುಟ್ಟಿದ ಸ್ಥಳ | ಬಸೌಲಿ, ಬಾಘಪತ್ (ಉತ್ತರಪ್ರದೇಶ) |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Doctorate |
| ಉದ್ಯೋಗ | ನಿವೃತ್ತ ಐಪಿಎಸ್ ಅಧಿಕಾರಿ |
| ತಂದೆಯ ಹೆಸರು | ರಾಮಕಿಶನ್ |
| ತಾಯಿಯ ಹೆಸರು | ಶ್ರೀಮತಿ ಹುಕ್ಮಾವತಿ |
| ಅವಲಂಬಿತರ ಹೆಸರು | ಅಲ್ಕಾ ಸಿಂಗ್ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 1 ಪುತ್ರ(ರು) 2 ಪುತ್ರಿ(ಯರು) |
| ವೆಬ್‌ಸೈಟ್ | https://t.co/UJNJdBRNYU |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.