Get Updates
Get notified of breaking news, exclusive insights, and must-see stories!

ಡಾ. ಕಂಭಂಪಾಟಿ ಹರಿಬಾಬು

ಡಾ. ಕಂಭಂಪಾಟಿ ಹರಿಬಾಬು
ಡಾ. ಕಂಭಂಪಾಟಿ ಹರಿಬಾಬು ಆಂಧ್ರ ಪ್ರದೇಶದ ಜನಪ್ರಿಯ ರಾಜಕೀಯ ಮುಖಂಡರಲ್ಲೊಬ್ಬರಾಗಿದ್ದು, ವಿಶಾಖ ಪಟ್ಟಣ ಲೋಕಸಭಾ ಕ್ಷೇತ್ರದಿಂದ 16ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದಾರೆ.
By Ajay M V | Monday, April 29, 2019, 06:14:14 PM [IST]

ಡಾ. ಕಂಭಂಪಾಟಿ ಹರಿಬಾಬು ಜೀವನ ಚರಿತ್ರೆ

ಡಾ. ಕಂಭಂಪಾಟಿ ಹರಿಬಾಬು ಆಂಧ್ರ ಪ್ರದೇಶದ ಜನಪ್ರಿಯ ರಾಜಕೀಯ ಮುಖಂಡರಲ್ಲೊಬ್ಬರಾಗಿದ್ದು, ವಿಶಾಖ ಪಟ್ಟಣ ಲೋಕಸಭಾ ಕ್ಷೇತ್ರದಿಂದ 16ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 2014 ರಲ್ಲಿ ಇವರು ಭಾರತೀಯ ಜನತಾ ಪಕ್ಷದ ವತಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆಂಧ್ರ ಪ್ರದೇಶ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಪ್ರತ್ಯೇಕ ಆಂಧ್ರ ರಾಜ್ಯಕ್ಕಾಗಿ ನಡೆದ ಜೈ ಆಂಧ್ರ ಆಂದೋಲನದಲ್ಲಿ ಇತರ ಮುಖಂಡರಾದ ತೆನ್ನೇಟಿ ವಿಶ್ವನಾಧಂ, ಸರ್ದಾರ ಗೌತು ಲಾಚಣ್ಣ ಹಾಗೂ ವೆಂಕಯ್ಯ ನಾಯ್ಡು ಅವರೊಂದಿಗೆ ವಿದ್ಯಾರ್ಥಿ ನಾಯಕನಾಗಿ ಸಕ್ರಿಯವಾಗಿ ಭಾಗಿಯಾಗಿದ್ದರು.

ಮತ್ತಷ್ಟು ಓದು

ಡಾ. ಕಂಭಂಪಾಟಿ ಹರಿಬಾಬು ವಯಕ್ತಿಕ ಜೀವನ

ಪೂರ್ಣ ಹೆಸರು ಡಾ. ಕಂಭಂಪಾಟಿ ಹರಿಬಾಬು
ಜನ್ಮ ದಿನಾಂಕ 15 Jun 1953 (ವಯಸ್ಸು 72)
ಹುಟ್ಟಿದ ಸ್ಥಳ ಚಿರಾಲ, ಪ್ರಕಾಸಂ, ಆಂಧ್ರ ಪ್ರದೇಶ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Doctorate
ಉದ್ಯೋಗ ಉಪನ್ಯಾಸಕ, ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ದಿ. ವೆಂಕಟೇಶ್ವರಲು
ತಾಯಿಯ ಹೆಸರು ಸೀತಮ್ಮ
ಅವಲಂಬಿತರ ಹೆಸರು ಶ್ರೀಮತಿ ಕಂಭಂಪಾಟಿ ಜಯಶ್ರೀ
ಮಕ್ಕಳು 2 ಪುತ್ರಿ(ಯರು)

ಡಾ. ಕಂಭಂಪಾಟಿ ಹರಿಬಾಬು ಒಟ್ಟು ಆಸ್ತಿ

ಒಟ್ಟು ಆಸ್ತಿ
₹8.82 CRORE
ಆಸ್ತಿ
₹9.01 CRORE
ಸಾಲಸೋಲ
₹18.55 LAKHS

ಡಾ. ಕಂಭಂಪಾಟಿ ಹರಿಬಾಬು ಕುರಿತು ಆಸಕ್ತಿದಾಯಕ ಸಂಗತಿಗಳು

ಹರಿಬಾಬು ತಮಗೆ ದೊರಕುವ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಮತ್ತು ಕೌಶಲಾಭಿವೃದ್ಧಿ ಕೆಲಸಗಳಿಗೆ ಹೆಚ್ಚಾಗಿ ಬಳಸುತ್ತಾರೆ.
ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆಗೆ ಒತ್ತು ನೀಡಿರುವ ಇವರು ಕ್ಷೇತ್ರದಲ್ಲಿ ಬಹುದಿನಗಳಿಂದ ಇರುವ ಸಮಸ್ಯೆಗಳನ್ನು ಬಗೆಹರಿಸಲು ದೂರದೃಷ್ಟಿಯ ಹಾಗೂ ದೊಡ್ಡ ಪ್ರಮಾಣದ ಯೋಜನೆಗಳ ಬಗ್ಗೆ ಒಲವು ಹೊಂದಿದ್ದಾರೆ.
ಎಲ್ಲ ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಪೀಠೋಪಕರಣ ವ್ಯವಸ್ಥೆ, ಜಿವಿಎಂಸಿ ಯೋಜನೆಯಿಂದ ಹೊರತಾದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಅಭಿವೃದ್ಧಿಯಲ್ಲಿ ಸಮುದಾಯದ ಜನತೆ ಭಾಗವಹಿಸುವಂತಾಗಲು ’ಒನ್ ಎಂಪಿ - ಒನ್ ಐಡಿಯಾ’ಎಂಬ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ.

ಡಾ. ಕಂಭಂಪಾಟಿ ಹರಿಬಾಬು ಸಾಧನೆಗಳು

1972 : ಪ್ರತ್ಯೇಕ ಆಂಧ್ರ ರಾಜ್ಯಕ್ಕಾಗಿ ನಡೆದ ಜೈ ಆಂಧ್ರ ಆಂದೋಲನದಲ್ಲಿ ಇತರ ಮುಖಂಡರಾದ ತೆನ್ನೇಟಿ ವಿಶ್ವನಾಧಂ, ಸರ್ದಾರ ಗೌತು ಲಾಚಣ್ಣ ಹಾಗೂ ವೆಂಕಯ್ಯ ನಾಯ್ಡು ಅವರೊಂದಿಗೆ ವಿದ್ಯಾರ್ಥಿ ನಾಯಕನಾಗಿ ಸಕ್ರಿಯವಾಗಿ ಭಾಗಿಯಾಗಿದ್ದರು.
1972-1973 : ಆಂಧ್ರ ಯುನಿವರ್ಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಯೂನಿಯನ್ ಸೆಕ್ರೆಟರಿಯಾಗಿದ್ದರು.
1974-1975 : ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ನಡೆದ ಲೋಕ ಸಂಘರ್ಷ ಸಮಿತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಆಂತರಿಕ ಸುರಕ್ಷತಾ ಕಾಯ್ದೆಯಡಿ (ಮೀಸಾ) ಬಂಧಿತರಾಗಿ 6 ತಿಂಗಳ ಕಾಲ ವಿಶಾಖ ಪಟ್ಟಣದ ಸೆಂಟ್ರಲ್ ಜೈಲ್ ಹಾಗೂ ಮುಶಿರಾಬಾದ ಜೈಲಿನಲ್ಲಿ ಬಂದಿಯಾಗಿದ್ದರು.
ನ್ಯಾಷನಲ್ ಪ್ಲ್ಯಾಟಫಾರಂ ಫಾರ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ (ಎನ್ಡಿಆರ್ಆರ್)ನ ಹಾಗೂ ಕೋರ್ಟ ಯುನಿವರ್ಸಿಟಿ ಆಫ್ ಹೈದರಾಬಾದ್ನ ನಾಮನಿರ್ದೇಶಿತ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆಂಧ್ರ ಯುನಿವರ್ಸಿಟಿಯ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಸಹಾಯಕ ಉಪನ್ಯಾಸಕರಾಗಿ 24 ವರ್ಷ ಸೇವೆ ಸಲ್ಲಿಸಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+