Get Updates
Get notified of breaking news, exclusive insights, and must-see stories!

ಡಾ. ಜಿ. ಪರಮೇಶ್ವರ

ಡಾ. ಜಿ. ಪರಮೇಶ್ವರ
ಡಾ. ಜಿ.
By Rashmi | Monday, April 29, 2019, 06:14:14 PM [IST]

ಡಾ. ಜಿ. ಪರಮೇಶ್ವರ ಜೀವನ ಚರಿತ್ರೆ

ಡಾ. ಜಿ. ಪರಮೇಶ್ವರ ಪ್ರಸ್ತುತ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇವರು ಕರ್ನಾಟಕದ 8ನೇ ಉಪಮುಖ್ಯಮಂತ್ರಿ. 1993 ರಿಂದ ವಿವಿಧ ಸರಕಾರಗಳ ಆಡಳಿತಗಳಲ್ಲಿ ಹಲವಾರು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ಮುಖಂಡರಾಗಿರುವ ಇವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1989, 1999 ಮತ್ತು 2004 ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರಗಳು ಹಾಗೂ ಕ್ಷೇತ್ರ ಪುನರ್ವಿಂಗಡಣೆಯ ನಂತರ 2008 ರಲ್ಲಿ ಕೊರಟಗೆರೆ ಕ್ಷೇತ್ರವನ್ನು ಪರಮೇಶ್ವರ ಪ್ರತಿನಿಧಿಸಿದ್ದಾರೆ. ರಾಜ್ಯದ ದಲಿತ, ಇತರ ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿದ್ದಾರೆ. ಸತತ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇವರು ಅತಿ ದೀರ್ಘ ಕಾಲ ಈ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಮತ್ತಷ್ಟು ಓದು

ಡಾ. ಜಿ. ಪರಮೇಶ್ವರ ವಯಕ್ತಿಕ ಜೀವನ

ಪೂರ್ಣ ಹೆಸರು ಡಾ. ಜಿ. ಪರಮೇಶ್ವರ
ಜನ್ಮ ದಿನಾಂಕ 06 Aug 1951 (ವಯಸ್ಸು 74)
ಹುಟ್ಟಿದ ಸ್ಥಳ ಗೊಲ್ಲಹಳ್ಳಿ, ತುಮಕೂರು, ಕರ್ನಾಟಕ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Doctorate
ಉದ್ಯೋಗ ಎಲ್.ಐ.ಸಿ. ಏಜೆಂಟ್, ಕೃಷಿ ಸಲಹಾಗಾರ
ತಂದೆಯ ಹೆಸರು ಎಚ್.ಎಂ. ಗಂಗಾಧರಯ್ಯ
ತಾಯಿಯ ಹೆಸರು ಗಂಗಮಾಳಮ್ಮ ಸಿ.
ಅವಲಂಬಿತರ ಹೆಸರು ಕನ್ನಿಕಾ ಪರಮೇಶ್ವರಿ
ಅವಲಂಬಿತರ ಉದ್ಯೋಗ ಕಲಾ ಪ್ರವೀಣೆ
ಮಕ್ಕಳು 1 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ http://www.karnatakapcc.com/kpcc-president/

ಡಾ. ಜಿ. ಪರಮೇಶ್ವರ ಒಟ್ಟು ಆಸ್ತಿ

ಒಟ್ಟು ಆಸ್ತಿ
₹5.88 CRORE
ಆಸ್ತಿ
₹21.27 CRORE
ಸಾಲಸೋಲ
₹15.39 CRORE

ಡಾ. ಜಿ. ಪರಮೇಶ್ವರ ಕುರಿತು ಆಸಕ್ತಿದಾಯಕ ಸಂಗತಿಗಳು

ಚಿಕ್ಕ ವಯಸ್ಸಿನಲ್ಲಿಯೇ ಎನ್‌ಸಿಸಿ ಸೇರಿದರು. ಇವರೊಬ್ಬ ಉತ್ತಮ ಕ್ರೀಡಾಪಟುವಾಗಿದ್ದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 100 ಮೀಟರ್ ರೇಸ್ 10.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ದಾಖಲೆ ಹೊಂದಿದ್ದಾರೆ. ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
ಆಸ್ಟ್ರೇಲಿಯಾದಿಂದ ಮರಳಿದ ನಂತರ ಸಿದ್ಧಾರ್ಥ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಾವಿದ್ಯಾಲಯದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ಜಿ. ಪರಮೇಶ್ವರ ಸಾಧನೆಗಳು

1978 ರಲ್ಲಿ ಭಾರತ ಸರಕಾರದ ಸ್ನಾತಕೋತ್ತರ ಪದವಿ ಸ್ಕಾಲರಶಿಪ್, 1980 ರಲ್ಲಿ ಭಾರತ ಸರಕಾರದ ಓವರಸೀಸ್ ಸ್ಕಾಲರಶಿಪ್, 1984-85 ರಲ್ಲಿ ಮೆಲ್ಬೋರ್ನ ವಿಶ್ವವಿದ್ಯಾಲಯದ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಪಡೆದುಕೊಂಡಿದ್ದಾರೆ. ಸಮಾಜದಲ್ಲಿ ಉನ್ನತ ಸೇವೆ ಸಲ್ಲಿಸಿದ ಕಾರಣಕ್ಕಾಗಿ 1993 ರಲ್ಲಿ ರಾಷ್ಟ್ರೀಯ ಏಕತಾ ಪ್ರಶಸ್ತಿ ಪಡೆದಿದ್ದಾರೆ. ವಿಶಿಷ್ಟ ಸೇವಾ ನಾಯಕತ್ವ ಪ್ರಶಸ್ತಿ ಪಡೆದಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+