ಮೂಲತಃ ಕೃಷಿಕ ಹಾಗೂ ನಂತರ ವ್ಯಾಪಾರೋದ್ಯಮಿಯಾಗಿ ಬೆಳೆದ ಡಿ.ಕೆ. ಸುರೇಶ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2013 ರಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಚುನಾಯಿತರಾದರು. ಇದಕ್ಕೂ ಮುನ್ನ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂಸದರಾಗಿದ್ದ ಸಿ.ಪಿ. ಯೋಗೀಶ್ವರ ಅವರನ್ನು ಸೋಲಿಸಿ 2009 ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಸದರಾಗಿ ಚುನಾಯಿತರಾಗಿದ್ದರು. ಆದರೆ ತಮ್ಮ ಸಂಸದ ಸ್ಥಾನಕ್ಕೆ ಕುಮಾರಸ್ವಾಮಿ ರಾಜಿನಾಮೆ ನೀಡಿದ ಕಾರಣ ಇಲ್ಲಿ ಉಪ ಚುನಾವಣೆ ನಡೆದಿದ್ದವು. 2013ರ ಉಪಚುನಾವಣೆಯಲ್ಲಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿ ಸಂಸದರಾದರು. ತದನಂತರ 2014 ರಲ್ಲಿ ನಡೆದ 16ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಸಂಸದರಾಗಿ ಚುನಾಯಿತರಾದರು.
| ಪೂರ್ಣ ಹೆಸರು | ಡಿ.ಕೆ. ಸುರೇಶ |
| ಜನ್ಮ ದಿನಾಂಕ | 08 Mar 1966 (ವಯಸ್ಸು 60) |
| ಹುಟ್ಟಿದ ಸ್ಥಳ | ಕನಕಪುರ, ರಾಮನಗರ ಜಿಲ್ಲೆ, ಕರ್ನಾಟಕ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | 12th Pass |
| ಉದ್ಯೋಗ | ಕೃಷಿಕ, ಕೈಗಾರಿಕೋದ್ಯಮಿ, ವ್ಯಾಪಾರೋದ್ಯಮಿ ಹಾಗೂ ಶಿಕ್ಷಣ ಚಿಂತಕ |
| ತಂದೆಯ ಹೆಸರು | ಶ್ರೀ ದೊಡ್ಡಾಲಹಳ್ಳಿ ಕೆಂಪೇಗೌಡ |
| ತಾಯಿಯ ಹೆಸರು | ಶ್ರೀಮತಿ ಗೌರಮ್ಮ ಕೆಂಪೇಗೌಡ |
| ಅವಲಂಬಿತರ ಹೆಸರು | ವಿಚ್ಛೇದನೆ ಪಡೆದುಕೊಂಡಿದ್ದಾರೆ. |
| ಮಕ್ಕಳು | 1 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.