Get Updates
Get notified of breaking news, exclusive insights, and must-see stories!

ದಿನೇಶ್ ತ್ರಿವೇದಿ

ದಿನೇಶ್ ತ್ರಿವೇದಿ
ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ತಮ್ಮ ರಾಜಕೀಯ ಪ್ರಯಾಣದಲ್ಲಿ ಪಕ್ಷ ಬದಲಾಯಿಸುವುದರಲ್ಲಿ ಪ್ರವೀಣರಾಗಿದ್ದರು. ಹಾಗಾಗಿ ಕಾಲಕಾಲಕ್ಕೆ ಒಂದೊಂದು ಪಕ್ಷಕ್ಕೆ ಜಿಗಿಯುತ ಬಂದರು.
By Briti Roy | Monday, April 5, 2021, 01:02:28 PM [IST]

ದಿನೇಶ್ ತ್ರಿವೇದಿ ಜೀವನ ಚರಿತ್ರೆ

ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ತಮ್ಮ ರಾಜಕೀಯ ಪ್ರಯಾಣದಲ್ಲಿ ಪಕ್ಷ ಬದಲಾಯಿಸುವುದರಲ್ಲಿ ಪ್ರವೀಣರಾಗಿದ್ದರು. ಹಾಗಾಗಿ ಕಾಲಕಾಲಕ್ಕೆ ಒಂದೊಂದು ಪಕ್ಷಕ್ಕೆ ಜಿಗಿಯುತ ಬಂದರು. 80 ರ ದಶಕದಲ್ಲಿ ಅವರ ರಾಜಕೀಯ ನಿಷ್ಠೆ ಕಾಂಗ್ರೆಸ್ ಪಕ್ಷಕ್ಕೆ ಇತ್ತು. ಆದರೆ, 90 ರ ದಶಕದಲ್ಲಿ ಜನತಾದಳಕ್ಕೆ ತಮ್ಮ ನಿಷ್ಠೆಯನ್ನು ಬದಲಾಯಿಸಿದರು. ನಂತರ 90 ರ ದಶಕದ ಉತ್ತರಾರ್ಧದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ರಾಜಕೀಯ ಟೋಪಿ ನೇತು ಹಾಕಿದರು.

ರಾಜಕೀಯ ಕ್ಷೇತ್ರಕ್ಕೆ ಬರುವ ಮೊದಲು ತ್ರಿವೇದಿ ಅವರು 1974 ರಲ್ಲಿ ಎಂಬಿಎ ಪದವಿ ಪೂರೈಸಿದರು. ಬಳಿಕ ಎರಡು ವರ್ಷಗಳ ಕಾಲ ಅಮೆರಿಕಾದ ಚಿಕಾಗೋದ ಡಿಟೆಕ್ಸ್ ಕಂಪನಿಯಲ್ಲಿ ಕೆಲಸ ಮಾಡಿದರು. ಭಾರತಕ್ಕೆ ವಾಪಾಸಾಗುವ ಮೊದಲು
ಅವರು ಲಾಜಿಸ್ಟಿಕ್ಸ್ ಪ್ರೊವೈಡರ್ ಲೀ ಮತ್ತು ಮುಯಿರ್‌ಹೆಡ್‌ ಕಂಪನಿಯಲ್ಲೂ ಕೆಲಸ ಮಾಡಿದರು. 1984 ರಲ್ಲಿ ಈ ಕೆಲಸವನ್ನು ತೊರೆದು ಸ್ವಂತವಾಗಿ ವಾಯು ಸರಕು ಸಾಗಣೆ ಕಂಪನಿಯನ್ನು ಪ್ರಾರಂಭಿಸಿದರು. ಇದರೊಂದಿಗೆ ಗ್ರಾಹಕ ಸಂರಕ್ಷಣಾ ಕೇಂದ್ರವನ್ನೂ ಆರಂಭಿಸಿದರು. ಇವರ ಗಮನಾರ್ಹ ಸಾಧನೆಯೆಂದರೆ, ಭಾರತೀಯ ರಾಜಕೀಯದಲ್ಲಿ ಅಪರಾಧಿಕರಣದ ಬಗ್ಗೆ ನೀಡಿದ ವೋರ್ಹಾ ವರದಿ. ಇದೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬರಲು ದಾರಿ ಮಾಡಿಕೊಟ್ಟಿತು.
೨೦11 ರಲ್ಲಿ ಕೇಂದ್ರ ರೈಲ್ವೇ ಸಚಿವರಾಗಿ ತ್ರಿವೇದಿ ನೇಮಕಗೊಂಡರೂ, ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಸನ್ನಿವೇಶ ಒದಗಿಬಂತು. ಸಚಿವರಾದ ಕೆಲವೇ ದಿನಗಳಲ್ಲಿ, ರೈಲಿನ ದರ ಹೆಚ್ಚಳದ ಕುರಿತು ಪಾರ್ಲಿಮೆಂಟಿನ್ನಲ್ಲಿ ಪ್ರಸ್ತಾಪಿಸಿದ ಇವರು ಪಕ್ಷದ ವರಿಷ್ಠರಾದ ಮಮತಾ ಬ್ಯಾನರ್ಜಿ ಅವರ ಕೋಪಕ್ಕೆ ತುತ್ತಾಗಿದ್ದರು. ಮಮತಾರ ಸಮ್ಮತಿ/ಒಪ್ಪಿಗೆ ಇಲ್ಲದೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮಂತ್ರಿ ಪದವಿ ಕೈತಪ್ಪಿಹೋಯಿತು.

ಬಹಳ ಹಿಂದಿನಿಂದಲೂ ಮೋದಿ ಸರ್ಕಾರದ ವಿರುದ್ಧ ಮಾತನಾಡುತ್ತಾ ಬಂದಿರುವ ತ್ರಿವೇದಿ ಅವರು, ಆಗಾಗ ಸರ್ಕಾರದ ಕೆಲಸಗಳನ್ನು ನಿಂದಿಸಿದ್ದಾರೆ. ಇತ್ತೀಚಿನ ಇವರ ಹೇಳಿಕೆಗಳಲ್ಲಿ ಒಂದು "ಅಚ್ಚೆ ದಿನ್ ಎಲ್ಲಿಯೂ ಇಲ್ಲದ ಕಾರಣ, ನಮ್ಮ ಹಳೆಯ ಕೆಟ್ಟ ದಿನಗಳನ್ನಾದರೂ ನಮಗೆ ಮತ್ತೆ ಕೊಟ್ಟುಬಿಡಿ" ಎಂಬ ಮಾತು ತುಸು ನೀರಸವಾಗಿದೆ ಎಂದೆನಿಸಿದರೂ ಇವರ ಮಾತಿನ ಚತುರತೆಗೆ ಸಾಕ್ಷಿಯಾಗಿತ್ತು.

ಮತ್ತಷ್ಟು ಓದು

ದಿನೇಶ್ ತ್ರಿವೇದಿ ವಯಕ್ತಿಕ ಜೀವನ

ಪೂರ್ಣ ಹೆಸರು ದಿನೇಶ್ ತ್ರಿವೇದಿ
ಜನ್ಮ ದಿನಾಂಕ 04 Jun 1950 (ವಯಸ್ಸು 75)
ಹುಟ್ಟಿದ ಸ್ಥಳ ನವದೆಹಲಿ
ಪಕ್ಷದ ಹೆಸರು All India Trinamool Congress
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ ಮತ್ತು ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ದಿ. ಹಿರಾಲಾಲ್ ತ್ರಿವೇದಿ
ತಾಯಿಯ ಹೆಸರು ದಿ.‌ ಉರ್ಮಿಲಾಬೆನ್ ತ್ರಿವೇದಿ
ಅವಲಂಬಿತರ ಹೆಸರು ಡಾ. ಮಿನಲ್ ತ್ರಿವೇದಿ
ಮಕ್ಕಳು 1 ಪುತ್ರ(ರು)

ದಿನೇಶ್ ತ್ರಿವೇದಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹5.03 CRORE
ಆಸ್ತಿ
₹6.62 CRORE
ಸಾಲಸೋಲ
₹1.59 CRORE

ದಿನೇಶ್ ತ್ರಿವೇದಿ ಕುರಿತು ಆಸಕ್ತಿದಾಯಕ ಸಂಗತಿಗಳು

ತ್ರಿವೇದಿ ಅಮೆರಿಕಾದಲ್ಲಿ ನೆಲೆಸಿದ್ದಾಗ ಭಾರತೀಯ ವಾಯುಪಡೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಈ ಸಂಬಂಧ ಪೈಲಟ್ ಆಗಲು ಅವರು ತರಬೇತಿಯನ್ನೂ ಪಡೆದಿದ್ದರು.

ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದಿನೇಶ್ ತ್ರಿವೇದಿ ಅವರು ರೈಲ್ವೆ ಸಚಿವರಾಗಿ ನೇಮಕಗೊಂಡರು.

ದಿನೇಶ್ ತ್ರಿವೇದಿ ರಾಜಕೀಯ ಟೈಮ್‌ಲೈನ್

  • 2017 : ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾದರು.
  • 2014 : ಬರಾಕ್‌ಪೋರ್ ಕ್ಷೇತ್ರದಿಂದ 16 ನೇ ಲೋಕಸಭೆಗೆ (2 ನೇ ಅವಧಿ) ಮರು ಆಯ್ಕೆಯಾದರು. ಈ ಸಮಯದಲ್ಲಿ ಅವರು ಸಿಪಿಎಂನ ಸುಭಾಶಿನಿ ಅಲಿಯನ್ನು 2,06,773 ಮತಗಳ ಅಂತರದಿಂದ ಸೋಲಿಸಿದರು.
  • 2012 : ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
  • 2011 : ರೈಲ್ವೆ ಸಚಿವರಾಗಿ ನೇಮಕಗೊಂಡರು.
  • 2009 : ಪಶ್ಚಿಮ ಬಂಗಾಳದ ಬರಾಕ್‌ಪೋರ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ನಿಂದ ಸ್ಪರ್ಧಿಸಿ ತಾರಿತ್ ಬಾರನ್ ಟೋಪ್ಡಾ ಅವರನ್ನು ಸೋಲಿಸಿ 15 ನೇ ಲೋಕಸಭೆಗೆ ಚುನಾಯಿತರಾದರು.
  • 2002 : ರಾಜ್ಯಸಭೆಗೆ ಎರಡನೇ ಅವಧಿಗೆ ಆಯ್ಕೆಯಾದರು.
  • 1990 : ಗುಜರಾತ್‌ನಿಂದ ರಾಜ್ಯಸಭೆಗೆ ಚುನಾಯಿತರಾದರು. 1996 ರಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುಜರಾತ್‌ನಿಂದ ಸ್ಪರ್ಧಿಸಿದರು. ಆದರೆ ಭಾರಿ ಅಂತರದಿಂದ ಸೋಲನುಭವಿಸಿದರು.

ಹಿಂದಿನ ಇತಿಹಾಸ

  • 1984: ಲೀ ಮತ್ತು ಮುಯಿರ್‌ಹೆಡ್‌ ಕಂಪನಿ ಕೆಲಸ ತ್ಯಜಿಸಿ ಸ್ವಂತ ವಾಯು ಸರಕು ಸಾಗಣೆ ಉದ್ಯಮ ಆರಂಭಿಸಿದರು.
  • 1974: ಚಿಕಾಗೋದಲ್ಲಿ ಎರಡು ವರ್ಷಗಳ ಕಾಲ ಡಿಟೆಕ್ಸ್ ಕಂಪನಿಯಲ್ಲಿ ಕೆಲಸ ಮಾಡಿ, ನಂತರ ತ್ರಿವೇದಿ ಅವರು ಭಾರತಕ್ಕೆ ಹಿಂದಿರುಗಿದರು. ಲಾಜಿಸ್ಟಿಕ್ಸ್ ಪ್ರೊವೈಡರ್ ಲೀ ಮತ್ತು ಮುಯಿರ್‌ಹೆಡ್‌ ಕಂಪನಿಯಲ್ಲಿ ಕೆಲಸ ಮಾಡಿದರು.

ದಿನೇಶ್ ತ್ರಿವೇದಿ ಸಾಧನೆಗಳು

ಪ್ರಮುಖ ದಿನಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ರಾಜಕೀಯ, ಅರ್ಥಶಾಸ್ತ್ರ, ನಿರ್ವಹಣೆ, ನಾಗರಿಕ ವಿಮಾನಯಾನ, ಇತಿಹಾಸ ಮುಂತಾದ ವಿಷಯಗಳ ಕುರಿತು ನಾನಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+