• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ದಿಲೀಪ ಘೋಷ್

ದಿಲೀಪ ಘೋಷ್

ಜೀವನ ಚರಿತ್ರೆ

ದಿಲೀಪ ಘೋಷ್ ಓರ್ವ ಸಕ್ರಿಯ ರಾಜಕಾರಣಿಯಾಗಿದ್ದು ಪ್ರಸ್ತುತ ಇವರು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಇವರು ಪಶ್ಚಿಮ ಬಂಗಾಳದಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದರು. 1 ಆಗಸ್ಟ್, 1964 ರಲ್ಲಿ ಹುಟ್ಟಿದ ಇವರಿಗೆ ಮೂವರು ಸಹೋದರರಿದ್ದಾರೆ. ಶಾಲಾ ವಿದ್ಯಾಭ್ಯಾಸದ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಕೆಲಸ ಮಾಡಲಾರಂಭಿಸಿದರು.

ವಯಕ್ತಿಕ ಜೀವನ

ಪೂರ್ಣ ಹೆಸರು ದಿಲೀಪ ಘೋಷ್
ಜನ್ಮ ದಿನಾಂಕ 01 Aug 1964 (ವಯಸ್ಸು 58)
ಹುಟ್ಟಿದ ಸ್ಥಳ ಪಶ್ಚಿಮ ಮೇದಿನಿಪುರ ಜಿಲ್ಲೆ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ನ್ಯಾಯವಾದಿ
ತಂದೆಯ ಹೆಸರು ಭೋಲಾನಾಥ ಘೋಷ್
ತಾಯಿಯ ಹೆಸರು ಪುಷ್ಪಲತಾ ಘೋಷ್
ಅವಲಂಬಿತರ ಹೆಸರು NA

ವಿಳಾಸ

ಖಾಯಂ ವಿಳಾಸ ಕಚರಿಪಟ್ಟಿ, ಬೋಲಪುರ ಪೊಲೀಸ್ ಸ್ಟೇಶನ್ ಹಾಗೂ ಪೋಸ್ಟ್ ಆಫೀಸ್, ಬೀರಭೂಮ- 731 204 ಪಶ್ಚಿಮ ಬಂಗಾಳ
ಪ್ರಸ್ತುತ ವಿಳಾಸ ಕಚರಿಪಟ್ಟಿ, ಬೋಲಪುರ ಪೊಲೀಸ್ ಸ್ಟೇಶನ್ ಹಾಗೂ ಪೋಸ್ಟ್ ಆಫೀಸ್, ಬೀರಭೂಮ- 731 204 ಪಶ್ಚಿಮ ಬಂಗಾಳ
ಈ ಮೇಲ್ dilipghosh64@gmail.com
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ರಾಮನವಮಿ ಹಬ್ಬದ ಆಚರಣೆ ರಾಮಜಾದಾ ನಡುವಿನ ಘರ್ಷಣೆಗಳು ಎಂದು ಇವರು ಹೇಳಿದ್ದು ಭಾರಿ ವಿವಾದ ಸೃಷ್ಟಿಸಿತು. ರಾಮನಿಗೆ ಹುಟ್ಟಿದವರು ಹಾಗೂ *** ಜಾದಾ ಗೆ ಹುಟ್ಟಿದವರು ಎಂಬ ಇವರ ವ್ಯಾಖ್ಯಾನ ರಾಷ್ಟ್ರಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿ ಅನೇಕರು ಇವರ ಹೇಳಿಕೆಯನ್ನು ಖಂಡಿಸಿದರು.
ಖರಗಪುರ ಪಟ್ಟಣದಲ್ಲಿ ಇಬ್ಬರು ಎಐಟಿ ಕಾರ್ಯಕರ್ತರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ದಿಲೀಪ ಘೋಷ್ ಅವರ ಮೇಲೊಂದು ಕಣ್ಣಿಡುವಂತೆ 2017 ರಲ್ಲಿ ತೃಣಮೂಲ ಕಾಂಗ್ರೆಸ್ಸಿನ ಜನರಲ್ ಸೆಕ್ರೆಟರಿ ಸುಬ್ರತಾ ಬಕ್ಷಿ ಪೊಲೀಸರಿಗೆ ಮನವಿ ಮಾಡಿದರು.

ರಾಜಕೀಯ ಕಾಲಾನುಕ್ರಮ

 • 2017
  ಪಶ್ಚಿಮ ಬಂಗಾಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾದರು.
 • 2016
  2016 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಮೇದಿನಿಪುರ ಜಿಲ್ಲೆಯ ಖರಗಪುರ ಸದರ್ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ಸಿನ ಗ್ಯಾನ್ ಸಿಂಗ್ ಸೋಹನಪಾಲ್ ಅವರನ್ನು ಸೋಲಿಸಿ ಶಾಸಕರಾದರು. 1982 ರಿಂದ 2011 ರವರೆಗೆ ಸತತ ಏಳು ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಗ್ಯಾನ್ ಸಿಂಗ್ ಸೋಹನಪಾಲ್ ಜಯಶಾಲಿಯಾಗಿದ್ದರು. ಇಂಥ ನಾಯಕನನ್ನು ಸೋಲಿಸಿದ್ದು ಈ ಭಾಗದಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸಿದ್ದು ಸ್ಪಷ್ಟವಾಗಿದೆ. ಘೋಷ್ ಅವರ ವಿಜಯ ಐತಿಹಾಸಿಕ ಎಂದು ಬಣ್ಣಿಸಲಾಗಿದೆ.
 • 2015
  ಪಶ್ಚಿಮ ಬಂಗಾಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕವಾದರು.
 • 2014
  2014 ರಲ್ಲಿ ಬಿಜೆಪಿ ಸೇರಿದ ಇವರು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾದರು.

ಹಿಂದಿನ ಇತಿಹಾಸ

 • Early 80s
  ರಾಜಕಾರಣಕ್ಕೆ ಬರುವ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಕೆಲಸ ಮಾಡಿದರು. ಅಂಡಮಾನ್ ನಿಕೋಬಾರ್ ದ್ವೀಪಗಳ ಆರೆಸ್ಸೆಸ್ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದರು. ಸಂಘದ ಮಾಜಿ ಮುಖ್ಯಸ್ಥ ಕೆ.ಎಸ್. ಸುದರ್ಶನ ಅವರಿಗೆ ಸಹಾಯಕರಾಗಿಯೂ ಘೋಷ್ ಕೆಲಸ ಮಾಡಿದ್ದಾರೆ.
ಒಟ್ಟು ಆಸ್ತಿ45.36 LAKHS
ಆಸ್ತಿ45.36 LAKHS
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಆಲ್ಬಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X