• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ದೇಶಪಾಂಡೆ ರಘುನಾಥ ವಿಶ್ವನಾಥ

ದೇಶಪಾಂಡೆ ರಘುನಾಥ ವಿಶ್ವನಾಥ

ಜೀವನ ಚರಿತ್ರೆ

ಆರ್.ವಿ. ದೇಶಪಾಂಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಲ್ಲೊಬ್ಬರಾಗಿದ್ದಾರೆ. ಎಂಟು ಬಾರಿ ಶಾಸಕರಾಗಿರುವ ದೇಶಪಾಂಡೆ ರಾಜ್ಯದ ಅತಿ ಹಿರಿಯ ಕಾಂಗ್ರೆಸ್ ಶಾಸಕರು. ಇತ್ತೀಚೆಗೆ 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಿ ಮತ್ತೊಮ್ಮೆ ಜಯಶಾಲಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಒಟ್ಟು ಹತ್ತು ವರ್ಷಗಳ ಕಾಲ ಈ ಖಾತೆಗಳ ಸಚಿವರಾಗಿದ್ದರು. ಮೂಲತಃ ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿದ ದೇಶಪಾಂಡೆ 1999 ರಲ್ಲಿ ಕಾಂಗ್ರೆಸ್ ಸೇರಿದರು. ಇವರು ತಮ್ಮ ಪ್ರಭಾವಿ ನಾಯಕತ್ವ ಹಾಗೂ ಪರಿಣಾಮಕಾರಿ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ದೇಶಪಾಂಡೆ ರಘುನಾಥ ವಿಶ್ವನಾಥ
ಜನ್ಮ ದಿನಾಂಕ 16 Mar 1947 (ವಯಸ್ಸು 75)
ಹುಟ್ಟಿದ ಸ್ಥಳ ಹಳಿಯಾಳ, ಉತ್ತರ ಕನ್ನಡ ಜಿಲ್ಲೆ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ವಿಶ್ವನಾಥ ರಾವ್
ತಾಯಿಯ ಹೆಸರು ವಿಮಲಾ ಬಾಯಿ
ಅವಲಂಬಿತರ ಹೆಸರು ರಾಧಾ ಆರ್. ದೇಶಪಾಂಡೆ
ಅವಲಂಬಿತರ ಉದ್ಯೋಗ ಬಂಡವಾಳ ಹೂಡಿಕೆದಾರರು
ಮಕ್ಕಳು 2 ಪುತ್ರ(ರು)

ವಿಳಾಸ

ಖಾಯಂ ವಿಳಾಸ A-610,2, ರಘುನಾಥ ಸದನ, ವಿ.ಆರ್. ದೇಶಪಾಂಡೆ ರಸ್ತೆ, ಹಳಿಯಾಳ, ಉತ್ತರ ಕನ್ನಡ - 581329
ಪ್ರಸ್ತುತ ವಿಳಾಸ A-610,2, ರಘುನಾಥ ಸದನ, ವಿ.ಆರ್. ದೇಶಪಾಂಡೆ ರಸ್ತೆ, ಹಳಿಯಾಳ, ಉತ್ತರ ಕನ್ನಡ - 581329
ಸಂಪರ್ಕ ಸಂಖ್ಯೆ 08284-220146
ಈ ಮೇಲ್ raghunath1947@yahoo.com
ವೆಬ್‌ಸೈಟ್ NIL
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್ ಹೀಗೆ ಪ್ರಮುಖ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಫಾಲೋವರ್ಸ್‌ಗಳನ್ನು ಹೊಂದಿದ್ದು ಅವುಗಳಲ್ಲಿ ಸಕ್ರಿಯರಾಗಿದ್ದಾರೆ. ಶಾಲಾ ವಿದ್ಯಾಭ್ಯಾಸದ ಕಾಲದಲ್ಲಿ ಕ್ಲಾಸ್‌ಗೆ ಚಕ್ಕರ್ ಹಾಕುವುದು ಹಾಗೂ ಶಿಕ್ಷಕರನ್ನು ಗೋಳು ಹುಯ್ದುಕೊಳ್ಳುವುದನ್ನು ಮಾಡಿ ಅನೇಕ ಬಾರಿ ಶಿಕ್ಷೆಗೆ ಒಳಗಾಗುತ್ತಿದ್ದರು. ಬೆಳಗಾವಿಯ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಕಾಲೇಜಿನ ವಿದ್ಯಾರ್ಥಿ ಸಂಘದ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದರು. ಅದರಲ್ಲೂ ಹುಡುಗಿಯರ ಭಾರಿ ಬೆಂಬಲವನ್ನು ಇವರು ಗಳಿಸಿದ್ದರು.

ರಾಜಕೀಯ ಕಾಲಾನುಕ್ರಮ

 • 2015
  2015 ರಿಂದ 2018 ರ ಅವಧಿಯಲ್ಲಿ ಮತ್ತೊಮ್ಮೆ ಕೈಗಾರಿಕಾ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
 • 1999
  ಎಂಟು ಬಾರಿ ಶಾಸಕರಾಗಿರುವ ದೇಶಪಾಂಡೆ ಜನತಾ ಪರಿವಾರದಿಂದ ರಾಜಕಾರಣ ಆರಂಭಿಸಿ 1999 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
 • 1994
  1994 ರಿಂದ 2004 ರ ಮಧ್ಯೆ ಒಟ್ಟು 13 ವರ್ಷಗಳ ಕಾಲ ಕೈಗಾರಿಕಾ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
 • 1983
  1983 ರಲ್ಲಿ ಆಗ ಅಸ್ತಿತ್ವದಲ್ಲಿದ್ದ ಜನತಾ ಪಕ್ಷದ ಟಿಕೆಟ್ ಮೇಲೆ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಂತ್ರಿ ಮಂಡಳದಲ್ಲಿ ಸಚಿವರಾದರು.

ಹಿಂದಿನ ಇತಿಹಾಸ

 • 70 ರ ದಶಕದ ಆರಂಭದಲ್ಲಿ
  ಪದವಿ ಶಿಕ್ಷಣ ಮುಗಿಸಿದ ಕೂಡಲೆ ಹಳಿಯಾಳ ನ್ಯಾಯಾಲಯದಲ್ಲಿ ದಶಕದ ಕಾಲ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದರು. ನಂತರವಷ್ಟೆ ರಾಜಕೀಯಕ್ಕೆ ಧುಮುಕಿದರು.
 • 60 ರ ದಶಕದ ಆರಂಭದಲ್ಲಿ
  ಬೆಳಗಾವಿಯ ರಾಣಿ ಪಾರ್ವತಿ ದೇವಿ ಕಾಲೇಜಿನಿಂದ ಬಿಎ ಪದವಿ ಪಡೆದರು.

ಜನತೆಗೆ ಜೀವವೈವಿಧ್ಯ ಹಾಗೂ ಪರಿಸರದ ಬಗ್ಗೆ ತಿಳಿಸಲು ನೂತನ ಇಕೊ ಟೂರಿಸಂ, ಜಂಗಲ್ ಕ್ಯಾಂಪ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದರು.
ಉದ್ಯಮ ನೀತಿ, ವಿದೇಶಿ ಬಂಡವಾಳ ನೀತಿ ಹಾಗೂ ಮಾಹಿತಿ ತಂತ್ರಜ್ಞಾನ ನೀತಿಯನ್ನು ಸುಧಾರಣೆಗೊಳಿಸಿದರು.
ಮೂಲಭೂತ ವಲಯಗಳಾದ ಇಂಧನ, ಉಕ್ಕು, ಸಾರಿಗೆ ಇತ್ಯಾದಿ ಸೇರಿದಂತೆ ಕರ್ನಾಟಕದ ಹಲವಾರು ಕ್ಷೇತ್ರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡುವಂತೆ ಉತ್ತೇಜನಕಾರಿ ಕ್ರಮಗಳನ್ನು ಜಾರಿಗೆ ತಂದರು.
ಸಣ್ಣ ಕೈಗಾರಿಕಾ ವಲಯದ ಬೆಳವಣಿಗೆಗಾಗಿ ಹಲವಾರು ಉತ್ಪಾದನಾ ಕೈಗಾರಿಕೆಗಳಿಗೆ ಉತ್ತೇಜನ ನೀಡಿದರು ಹಾಗೂ ಸಣ್ಣ ಕೈಗಾರಿಕೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪೈಪೋಟಿಯನ್ನೆದುರಿಸಿ ಬೆಳವಣಿಗೆ ಹೊಂದಲು ಸಹಕಾರಿಯಾಗುವಂತೆ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡರು.
ರಾಜ್ಯದ ಕೈಗಾರಿಕಾ ನೀತಿಗಳನ್ನು ಪರಿಚಯಿಸಲು ಹಾಗೂ ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಾಗುವಂತೆ ಮಾಡಲು ವಿಶ್ವದ ಅನೇಕ ರಾಷ್ಟ್ರಗಳಿಗೆ ವ್ಯಾಪಕ ಪ್ರವಾಸ ಕೈಗೊಂಡಿದ್ದಾರೆ.
ಒಟ್ಟು ಆಸ್ತಿ199.38 CRORE
ಆಸ್ತಿ215.16 CRORE
ಸಾಲಸೋಲ15.78 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X