Get Updates
Get notified of breaking news, exclusive insights, and must-see stories!

ದಯಾನಿಧಿ ಮಾರನ್

ದಯಾನಿಧಿ ಮಾರನ್
ದಯಾನಿಧಿ ಮಾರನ್ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ ಮತ್ತು ಜನನಾಯಕ. ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ಪಕ್ಷದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವ ದಯಾನಿಧಿ ಮಾರನ್ ಅವರು ತಮಿಳುನಾಡಿನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ‌.
By Ajay M V | Monday, April 5, 2021, 01:02:37 PM [IST]

ದಯಾನಿಧಿ ಮಾರನ್ ಜೀವನ ಚರಿತ್ರೆ

ದಯಾನಿಧಿ ಮಾರನ್ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ ಮತ್ತು ಜನನಾಯಕ. ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ಪಕ್ಷದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವ ದಯಾನಿಧಿ ಮಾರನ್ ಅವರು ತಮಿಳುನಾಡಿನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ‌. ಸಂಸತ್ತಿನಲ್ಲಿ ಡಿಎಂಕೆಯನ್ನು ಪ್ರತಿನಿಧಿಸುತ್ತಾರೆ. 2009 ರ ಸಂಸತ್ ಚುನಾವಣೆಯಲ್ಲಿ ಚೆನ್ನೈ ಕ್ಷೇತ್ರದಿಂದ ದಯಾನಿಧಿ ಮಾರನ್ ಗೆಲ್ಲುವ ಮೂಲಕ 15 ನೇ ಲೋಕಸಭೆಯಲ್ಲಿ ಚುನಾಯಿತರಾದರು. ಇವರು ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್ ಅವರ ಪುತ್ರ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರ ಮೊಮ್ಮಗ. ಸನ್ ಗ್ರೂಪ್‌ ನ ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಭಾರತೀಯ ಬಿಲಿಯನೇರ್ ಕಲಾನಿಧಿ ಮಾರನ್ ಅವರ ಕಿರಿಯ ಸಹೋದರ.

ಮತ್ತಷ್ಟು ಓದು

ದಯಾನಿಧಿ ಮಾರನ್ ವಯಕ್ತಿಕ ಜೀವನ

ಪೂರ್ಣ ಹೆಸರು ದಯಾನಿಧಿ ಮಾರನ್
ಜನ್ಮ ದಿನಾಂಕ 05 Dec 1966 (ವಯಸ್ಸು 59)
ಹುಟ್ಟಿದ ಸ್ಥಳ ಚೆನ್ನೈ, ತಮಿಳುನಾಡು
ಪಕ್ಷದ ಹೆಸರು Dravida Munetra Kazhagam
ವಿದ್ಯಾರ್ಹತೆ Graduate
ಉದ್ಯೋಗ ರಾಜಕಾರಣಿ, ಉದ್ಯಮಿ
ತಂದೆಯ ಹೆಸರು ಮುರಸೋಲಿ ಮಾರನ್
ತಾಯಿಯ ಹೆಸರು ಮಲ್ಲಿಕಾ ಮಾರನ್
ಅವಲಂಬಿತರ ಹೆಸರು ಪ್ರಿಯಾ ದಯಾನಿಧಿ ಮಾರನ್
ಅವಲಂಬಿತರ ಉದ್ಯೋಗ ಕಂಪನಿ ಕಾರ್ಯನಿರ್ವಾಹಕಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ವೆಬ್‌ಸೈಟ್ NIL

ದಯಾನಿಧಿ ಮಾರನ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹10.94 CRORE
ಆಸ್ತಿ
₹10.94 CRORE
ಸಾಲಸೋಲ
N/A

ದಯಾನಿಧಿ ಮಾರನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಅಮೆರಿಕಾದ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ (ಯುಎಸ್ಎ)ನ "ಮಾಲೀಕ / ಅಧ್ಯಕ್ಷ ನಿರ್ವಹಣಾ ಕಾರ್ಯಕ್ರಮದಲ್ಲಿ ಮಾರನ್ ಅವರು ಭಾಗವಹಿಸಿದ್ದರು. ಪ್ರಚಲಿತ ವಿದ್ಯಮಾನಗಳು, ರಾಜಕೀಯ ವಿಜ್ಞಾನ, ಸಾಮಾಜಿಕ ವಿಜ್ಞಾನ, ವಾಣಿಜ್ಯ, ಹಣಕಾಸು, ಜಾಗತಿಕ ವ್ಯಾಪಾರ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಓದುವುದೆಂದರೆ ದಯಾನಿಧಿ ಮಾರನ್ ಅವರಿಗೆ ಇಷ್ಟ. ಕ್ಯಾಬಿನೆಟ್ ಕಿರಿಯ ಸದಸ್ಯರಾಗಿದ್ದ ಮಾರನ್ ಅವರು ವಸ್ತ್ರ ವಿನ್ಯಾಸ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ.

ದಯಾನಿಧಿ ಮಾರನ್ ರಾಜಕೀಯ ಟೈಮ್‌ಲೈನ್

  • 2014 : ಸೆಂಟ್ರಲ್ ಚೆನ್ನೈ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಎಡಿಎಂಕೆ ಅಭ್ಯರ್ಥಿ ಎಸ್.ಆರ್.ವಿಜಯಕುಮಾರ್ ವಿರುದ್ಧ ಸೋತರು.
  • 2009 : ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ತಮಿಳುನಾಡಿನ ಸೆಂಟ್ರಲ್ ಚೆನ್ನೈ ಕ್ಷೇತ್ರದಿಂದ ಲೋಕಸಭೆಗೆ ಮತ್ತೆ ಆಯ್ಕೆಯಾದರು.
  • 2007 : ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಸೆಂಬರ್ 2007 ರಿಂದ ಡಿಸೆಂಬರ್ 2010 ರವರೆಗೆ 250 ಮಿಲಿಯನ್ ಸಂಪರ್ಕಗಳ ಕಲ್ಪಿಸುವ ಗುರಿ ಹೊಂದಿತ್ತು, ಮೇ 2004 ರಲ್ಲಿ 75 ಮಿಲಿಯನ್ ಆಗಿತ್ತು. ಕೌಟುಂಬಿಕ ಕಲಹ ಹಾಗೂ ದಿನಕರನ್ ಪ್ರಕರಣದಿಂದಾಗಿ ದಯಾನಿಧಿ ಅವರು ತಮ್ಮ ಸಚಿವ ಸ್ಥಾನ ಹುದ್ದೆಗೆ ರಾಜೀನಾಮೆ ನೀಡಿದರು.
  • 2004 : ಮಾರನ್ ಅವರು ಏಪ್ರಿಲ್ 2004 ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ತಮಿಳುನಾಡಿನ ಸೆಂಟ್ರಲ್ ಚೆನ್ನೈ ಕ್ಷೇತ್ರದಿಂದ 14 ನೇ ಲೋಕಸಭೆಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. 2004 ರ ಚುನಾವಣೆಯಲ್ಲಿ ಇವರ ಗೆಲುವಿನ ಅಂತರ 134,000 ಮತಗಳಿಗಿಂತ ಹೆಚ್ಚಿತ್ತು. ಜೊತೆಗೆ ಒಟ್ಟು ಮತದಾನದ 62% ಮತಗಳನ್ನು ಪಡೆದರು.
  • 2003 : ತಂದೆ ಮುರಸೋಲಿ ಮಾರನ್ ಅವರ ನಿಧನದ ನಂತರ ದಯಾನಿಧಿ ಮಾರನ್ ಅವರು ರಾಜಕೀಯ ಪ್ರವೇಶಿಸಿದರು.
  • : 26 ಮೇ 2004 ರಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ನೇಮಕಗೊಂಡರು.

ಹಿಂದಿನ ಇತಿಹಾಸ

  • Early 80's: 80 ರ ದಶಕದ ಆರಂಭದಲ್ಲಿ ದಯಾನಿಧಿ ಮಾರನ್ ಚೆನ್ನೈನ ಎಗ್ಮೋರ್ನ ಡಾನ್ ಬಾಸ್ಕೊ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದರು. ತಮಿಳುನಾಡಿನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದು ಚೆನ್ನೈನ ಲೊಯೊಲಾ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು.

ದಯಾನಿಧಿ ಮಾರನ್ ಸಾಧನೆಗಳು

ಮೊಬೈಲ್ ಸಂವಹನದಲ್ಲಿನ ಸಾಧನೆಗಾಗಿ ಭಾರತೀಯ ಸರ್ಕಾರ 2007ರಲ್ಲಿ ಇವರಿಗೆ ಜಿಎಸ್ಎಂಎ ಪ್ರಶಸ್ತಿ ನೀಡಿ ಗೌರವಿಸಿದೆ. ಮಹಾರಾಷ್ಟ್ರ ದ ಇನ್ಸ್ಟಿಟ್ಯೂಟ್ ಟೆಕ್ನಾಲಜಿ (ಎಂಐಟಿ) ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಭಾರತ್ ಅಸ್ಮಿತಾ ಜನ-ಪ್ರತಿನಿಧಿ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. 2005 ರಲ್ಲಿ ಪುಣೆಯಲ್ಲಿ
ಸಂಸತ್ತಿನ ಅತ್ಯುತ್ತಮ ಯುವ ಪ್ರತಿಪಾದಕ ಪ್ರಶಸ್ತಿ ಲಭಿಸಿದೆ.
ಸ್ವಿಟ್ಜರ್ಲೆಂಡ್ ನಲ್ಲಿ ನಡೆದ ಮೊದಲ ಶೃಂಗಸಭೆಯಲ್ಲಿ (24 ಜೂನ್, 2005) ಯುವ ಜಾಗತಿಕ ನಾಯಕ ಪ್ರಶಸ್ತಿಯನ್ನು ಪಡೆದಿದ್ದಾರೆ. 2005 ರ ಆಗಸ್ಟ್ 25 ರಂದು ಇಂಡಿಯಾ ಟುಡೆ ಗ್ರೂಪ್ ರಾಜಕೀಯ ಕ್ಷೇತ್ರದಲ್ಲಿ ಸಿಗರಾಮ್ -15 ಸಾಧಕ ಪ್ರಶಸ್ತಿಯನ್ನು ನೀಡಿತು.
ಸಾಕಷ್ಟು ಸಂಪಾಕೀಯ ಬರಹಕ್ಕೂ ಮಾರನ್ ಹೆಸರು ವಾಸಿಯಾಗಿದ್ದಾರೆ. ತಮಿಳು ವಾರಪತ್ರಿಕೆ ಕುಂಗುಮಂಗೆ
ಹಲವಾರು ಸಂಪಾದಕೀಯಗಳನ್ನ ಬರೆದಿದ್ದಾರೆ. ಕಳೆದ 13 ವರ್ಷಗಳಿಂದ ಮುದ್ರಣ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನದೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಐಟಿ ಮತ್ತು ದೂರಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ ಮೊಬೈಲ್ ಮತ್ತು ಲ್ಯಾಂಡ್‌ಲೈನ್‌ಗಳ ಕರೆ ದರವನ್ನು ಕಡಿಮೆಗೊಳಿಸಿದ್ದರು. ಇದು ಚಂದಾದಾರರ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿತು. "ಒನ್ ರೂಪಾಯಿ ಒನ್ ಇಂಡಿಯಾ" ಯೋಜನೆಯನ್ನು ದೇಶಾದ್ಯಂತ ಪರಿಚಯಿಸಿದರು. ಇದು ದೇಶಾದ್ಯಂತ 1 ರೂಪಾಯಿಯಲ್ಲಿ 1 ನಿಮಿಷಕ್ಕೆ ಕರೆ ಮಾಡಬಹುದಾಗಿತ್ತು. .

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+