ತುಮಕೂರು ಜಿಲ್ಲೆಯ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ. ಸಿ. ಗೌರಿ ಶಂಕರ್. ಮಾಜಿ ಸಚಿವರಾದ ಸಿ. ಚನ್ನಿಗಪ್ಪ ಪುತ್ರರು. ಬಿಎಸ್‌ಸಿ ಪದವೀಧರರಾದ ಗೌರಿ ಶಂಕರ್ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡವರು.
2004ರಲ್ಲಿ ನಡೆದ ತ್ಯಾಮಗೊಂಡಲ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಜಯಗಳಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದರು. ಮೂರು ವರ್ಷಗಳ ಕಾಲ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೆಲಸ ಮಾಡಿದರು.
2008ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊಟ್ಟ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡರು. 2009ರಲ್ಲಿ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದರು.
2013ರಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೇವಲ 750 ಅಲ್ಪ ಮತಗಳಿಂದ ಸೋಲು ಕಂಡರು. ಸೋತರೂ ಕ್ಷೇತ್ರದ ಜನರಿಂದ ದೂರವಾಗದೇ ನಿರಂತರವಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು.
ಯುವ ನೇತಾರರಾಗಿ ಡಿ. ಸಿ. ಗೌರಿಶಂಕರ್ ಹೇಮಾವತಿ ನದಿ ನೀರು ಹಂಚಿಕೆ ಹೋರಾಟದಲ್ಲಿ ತೊಡಗಿಸಿಕೊಂಡರು. ರೈತ ಸಮ್ಮೇಳನ ಮತ್ತು ಕಾರ್ಮಿಕರ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದರು.
2018ರ ಚುನಾವಣೆಯಲ್ಲಿ 82,740 ಮತಗಳನ್ನು ಪಡೆದು ಬಿಜೆಪಿಯ ಸುರೇಶ್ ಗೌಡ ವಿರುದ್ಧ ಗೆಲುವು ಕಂಡರು.
| ಪೂರ್ಣ ಹೆಸರು | ಡಿ. ಸಿ. ಗೌರಿ ಶಂಕರ್ |
| ಜನ್ಮ ದಿನಾಂಕ | 16 Sep 1977 (ವಯಸ್ಸು 48) |
| ಹುಟ್ಟಿದ ಸ್ಥಳ | ತುಮಕೂರು |
| ಪಕ್ಷದ ಹೆಸರು | Janata Dal (Secular) |
| ವಿದ್ಯಾರ್ಹತೆ | B.Sc. HKES |
| ಉದ್ಯೋಗ | ಉದ್ಯಮಿ, ಕೃಷಿಕ |
| ತಂದೆಯ ಹೆಸರು | ಚನ್ನಿಗಪ್ಪ ಸಿ. |
| ತಾಯಿಯ ಹೆಸರು | Not Known |
| ಅವಲಂಬಿತರ ಹೆಸರು | Not Known |
| ಅವಲಂಬಿತರ ಉದ್ಯೋಗ | Housewife |
| ಧರ್ಮ | ಹಿಂದು |
| ಜಾತಿ | ಒಕ್ಕಲಿಗ |
| ವೆಬ್‌ಸೈಟ್ | jds.ind.in |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.