ಚಿರಾಗ ಪಾಸ್ವಾನ್ ಭಾರತೀಯ ರಾಜಕಾರಣಿಯಾಗಿದ್ದಾರೆ. ಇವರು ಲೋಕ ಜನಶಕ್ತಿ ಪಕ್ಷದ ಸದಸ್ಯರಾಗಿದ್ದಾರೆ. ಚಿರಾಗ ಪಾಸ್ವಾನ್ ಅವರು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದು ಇವರ ತಂದೆ ರಾಮ ವಿಲಾಸ ಪಾಸ್ವಾನ್ ಸಂಸದ ಹಾಗೂ ಕೇಂದ್ರ ಮಂತ್ರಿಗಳಾಗಿದ್ದಾರೆ. ಪ್ರಸ್ತುತ ಚಿರಾಗ ಜಾಮುಯಿ ಕ್ಷೇತ್ರದ ಸಂಸದರಾಗಿದ್ದಾರೆ. ಇವರು 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 16ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು. ರಾಜಕೀಯಕ್ಕೆ ಬರುವ ಮುನ್ನ ಚಿರಾಗ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ್ದರಾದರೂ ಅಲ್ಲಿ ಅಂಥ ಯಶಸ್ಸು ಸಿಗಲಿಲ್ಲ.
ಚಿರಾಗ ಪಾಸ್ವಾನ್ 31 ಅಕ್ಟೋಬರ್ 1982 ರಲ್ಲಿ ಬಿಹಾರದ ಖಗರಿಯಾದಲ್ಲಿ ಜನಿಸಿದರು. ಭಾರತ ಸರಕಾರದ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನಲ್ಲಿ 2003 ರಲ್ಲಿ ವಿದ್ಯಾಭ್ಯಾಸ ಮಾಡಿದರು. ಇವರು ಝಾನ್ಸಿಯ ಬುಂದೇಲಖಂಡ ಯುನಿವರ್ಸಿಟಿಯಲ್ಲಿ 2005 ರಲ್ಲಿ ಕಂಪ್ಯೂಟರ್ ಸೈನ್ಸ್ ಬಿಟೆಕ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
| ಪೂರ್ಣ ಹೆಸರು | ಚಿರಾಗ ಕುಮಾರ ಪಾಸ್ವಾನ್ |
| ಜನ್ಮ ದಿನಾಂಕ | 31 Oct 1982 (ವಯಸ್ಸು 43) |
| ಹುಟ್ಟಿದ ಸ್ಥಳ | ಖಗರಿಯಾ, ಬಿಹಾರ |
| ಪಕ್ಷದ ಹೆಸರು | Lok Jan Shakti Party |
| ವಿದ್ಯಾರ್ಹತೆ | 12th Pass |
| ಉದ್ಯೋಗ | ರಾಜಕಾರಣಿ |
| ತಂದೆಯ ಹೆಸರು | ಶ್ರೀ ರಾಮ ವಿಲಾಸ ಪಾಸ್ವಾನ್ |
| ತಾಯಿಯ ಹೆಸರು | ಶ್ರೀಮತಿ ರೀನಾ ಪಾಸ್ವಾನ್ |
| ಅವಲಂಬಿತರ ಹೆಸರು | NA |
| ಅವಲಂಬಿತರ ಉದ್ಯೋಗ | NA |
| ಧರ್ಮ | ಹಿಂದು |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.