ಕರ್ನಾಟಕದ ಬಿಜೆಪಿ ನಾಯಕ ಸಿ. ಟಿ. ರವಿ ರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಅವರು ಪಕ್ಷದ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಸಿ. ಟಿ. ರವಿ ಅವರ ಪೂರ್ಣ ಹೆಸರು ಚಿಕ್ಕಮಾಗರವಳ್ಳಿ ತಿಮ್ಮೇಗೌಡ ರವಿ. ಗ್ರಾಮೀಣ ಮಟ್ಟದಿಂದ ಬೆಳೆದು ಬಂದ ಅವರು ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿ ಉಸ್ತುವಾರಿ.
ಆರ್‌ಎಸ್‌ಎಸ್ ಮೂಲಕ ಬೆಳೆದು ಬಂದ ಸಿ. ಟಿ. ರವಿ ಕರ್ನಾಟಕದ ಬಿಜೆಪಿ ಪಾಲಿನ ಹಿಂದೂ ಫೈರ್ ಬ್ರಾಂಡ್. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಸಿ. ಟಿ. ರವಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಆಗಲೇ ಪಕ್ಷದ ಸೂಚನೆಯಂತೆ ಸಚಿವ ಸ್ಥಾನ ತೊರೆದು ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದರು.
1999ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ಸಿ. ಟಿ. ರವಿ 24,725 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಸಗೀರ್ ಅಹ್ಮದ್ 25,707 ಮತಗಳನ್ನು ಪಡೆದು ಗೆಲುವು ಸಾಧಿಸಿದರು. 982 ಮತಗಳ ಅಂತರದಲ್ಲಿ ಸಿ. ಟಿ. ರವಿ ಸೋಲು ಅನುಭವಿಸಿದರು.
ಈ ಸೋಲಿನ ಬಳಿಕ ಹಿಂದುತ್ವ, ದತ್ತಪೀಠ ವಿಚಾರ ಮುಂದಿಟ್ಟುಕೊಂಡು ಸಿ. ಟಿ. ರವಿ ಹೋರಾಟ ಮಾಡಿದರು. ಈ ಹೋರಾಟ ಅವರ ರಾಜಕೀಯ ಬೆಳವಣಿಗೆಗೆ ಸಹಕಾರ ನೀಡಿತು. 2004ರ ಚುನಾವಣೆಯಲ್ಲಿ 57,165 ಮತಗಳನ್ನು ಪಡೆದು ಸಗೀರ್ ಅಹ್ಮದ್ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ 2008, 2013, 2018ರ ಚುನಾವಣೆಯಲ್ಲಿಯೂ ಜಯಗಳಿಸುವ ಮೂಲಕ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿ. ಟಿ. ರವಿ ಉನ್ನತ ಶಿಕ್ಷಣ ಖಾತೆ ಸಚಿವರಾದರು. 2018ರ ಚುನಾವಣೆಯಲ್ಲಿ ಗೆದ್ದ ಸಿ. ಟಿ. ರವಿ 2019ರಲ್ಲಿ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಖಾತೆ ಸಚಿವರಾದರು.
2020ರ ಅಕ್ಟೋಬರ್‌ನಲ್ಲಿ ಸಿ. ಟಿ. ರವಿಯನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಬಿಜೆಪಿ ಹೈಕಮಾಂಡ್ ತೀರ್ಮಾನ ಕೈಗೊಂಡಿತು. ಹೈಕಮಾಂಡ್ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಅವರು ನೀಡಿದರು.
ಸಿ. ಟಿ. ರವಿ ಕರ್ನಾಟಕ ಬಿಜೆಪಿಯಲ್ಲಿಯೂ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ತಮಿಳುನಾಡು, ಗೋವಾ, ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿಯಾಗಿ ತಂತ್ರಗಳನ್ನು ರೂಪಿಸಿದ್ದಾರೆ.
| ಪೂರ್ಣ ಹೆಸರು | ಸಿ. ಟಿ. ರವಿ |
| ಜನ್ಮ ದಿನಾಂಕ | 18 Jul 1967 (ವಯಸ್ಸು 58) |
| ಹುಟ್ಟಿದ ಸ್ಥಳ | ಚಿಕ್ಕಮಗಳೂರು, ಕರ್ನಾಟಕ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Post Graduate |
| ಉದ್ಯೋಗ | ರಾಜಕಾರಣಿ |
| ತಂದೆಯ ಹೆಸರು | ತಿಮ್ಮೇಗೌಡ |
| ತಾಯಿಯ ಹೆಸರು | Not Available |
| ಅವಲಂಬಿತರ ಹೆಸರು | Pallavi |
| ಅವಲಂಬಿತರ ಉದ್ಯೋಗ | housewife &social worker |
| ಮಕ್ಕಳು | 2 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | http://www.ctravi.org/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.