Get Updates
Get notified of breaking news, exclusive insights, and must-see stories!

ಸಿ. ಎಂ. ಇಬ್ರಾಹಿಂ

ಸಿ. ಎಂ. ಇಬ್ರಾಹಿಂ
ಆಕರ್ಷಕ ಮಾತುಗಾರಿಕೆ. ವಚನಗಳನ್ನು ಸೇರಿಸಿಕೊಂಡು ಮಾಡುವ ಭಾಷಣ.
By Moumi Majumdar | Thursday, September 29, 2022, 04:08:15 PM [IST]

ಸಿ. ಎಂ. ಇಬ್ರಾಹಿಂ ಜೀವನ ಚರಿತ್ರೆ

ಆಕರ್ಷಕ ಮಾತುಗಾರಿಕೆ. ವಚನಗಳನ್ನು ಸೇರಿಸಿಕೊಂಡು ಮಾಡುವ ಭಾಷಣ. ಎಲ್ಲರನ್ನೂ ತಮ್ಮ ಮಾತಿನ ಮೂಲಕವೇ ಆಕರ್ಷಿಸುವವರು ಸಿ. ಎಂ. ಇಬ್ರಾಹಿಂ. ಕರ್ನಾಟಕದ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ, ಹಾಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ.

ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರಾದ ಸಿ. ಎಂ. ಇಬ್ರಾಹಿಂದ ಎಲ್ಲಾ ಪಕ್ಷದಲ್ಲೂ ಉತ್ತಮ ಸ್ನೇಹಿತರನ್ನು ಹೊಂದಿದ್ದಾರೆ. ಕೇಂದ್ರದ ಮಾಜಿ ಸಚಿವರಾದ ಇವರು ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿದ್ದ ಸಿ. ಎಂ. ಇಬ್ರಾಹಿಂ ವಿಧಾನ ಪರಿಷತ್ ಸಭಾನಾಯಕ ಸ್ಥಾನ ಕೈತಪ್ಪಿದಾಗ ಅಸಮಾಧಾನಗೊಂಡರು. 2022ರ ಏಪ್ರಿಲ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದರು. ಜೆಡಿಎಸ್ ಸೇರುವುದಾಗಿ ಘೋಷಣೆ ಮಾಡಿದರು. ಜೆಡಿಎಸ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿತು.

ಸಿ. ಎಂ. ಇಬ್ರಾಹಿಂ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. 1978ರಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಮೊದಲ ಬಾರಿಗೆ ಶಾಸಕರಾದರು. ನಂತರ ರಾಜಕೀಯ ಬೆಳವಣಿಗೆಗಳ ಮೂಲಕ ವಿರೇಂದ್ರ ಪಾಟೀಲರೊಂದಿಗೆ ಸೇರಿ ಇಂದಿರಾ ಕಾಂಗ್ರೆಸ್ ಸೇರಿದರು. ಗುಂಡೂರಾವ್ ಸಂಪುಟದಲ್ಲಿ ಸಚಿವರೂ ಆದರು.

1994ರ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್‌ಗೆ ಮುಸ್ಲಿಂ ಮತಗಳು ಬರುವಂತೆ ಮಾಡುವಲ್ಲಿ ಇಬ್ರಾಹಿಂ ಪಾತ್ರ ದೊಡ್ಡದು. ಎಚ್. ಡಿ. ದೇವೇಗೌಡರು ಪ್ರಧಾನಿಯಾದಾಗ ಕೇಂದ್ರದ ವಿಮಾನಯಾನ ಸಚಿವರಾದರು, ದೇವೇಗೌಡರ ಜೊತೆ ಉಳಿದರು.

ಬಳಿಕ ಸಿದ್ದರಾಮಯ್ಯ ಜೊತೆ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬಂದರು. ಸಿದ್ದರಾಮಯ್ಯ ಅಹಿಂದ ಕಟ್ಟಿದ ಸಂದರ್ಭದಲ್ಲಿ ಸಿ. ಎಂ. ಇಬ್ರಾಹಿಂ ಅವರ ಜೊತೆಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡಿದರು.

ಜಮೀರ್ ಅಹಮದ್, ಯು. ಟಿ. ಖಾದರ್, ತನ್ವೀರ್ ಸೇಠ್‌, ರಿಜ್ವಾನ್ ಅರ್ಷದ್ ಸೇರಿದಂತೆ ಕರ್ನಾಟಕದ ಮುಸ್ಲಿಂ ರಾಜಕೀಯ ನಾಯಕರಲ್ಲಿ ಸಿ. ಎಂ. ಇಬ್ರಾಹಿಂ ಸಹ ಒಬ್ಬರು. 2013ರ ಚುನಾವಣೆಯಲ್ಲಿ ಭದ್ರಾವತಿಯಲ್ಲಿ ಸಿ. ಎಂ. ಇಬ್ರಾಹಿಂಗೆ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದರು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.

ಮತ್ತಷ್ಟು ಓದು

ಸಿ. ಎಂ. ಇಬ್ರಾಹಿಂ ವಯಕ್ತಿಕ ಜೀವನ

ಪೂರ್ಣ ಹೆಸರು ಸಿ. ಎಂ. ಇಬ್ರಾಹಿಂ
ಜನ್ಮ ದಿನಾಂಕ 14 Aug 1948 (ವಯಸ್ಸು 77)
ಹುಟ್ಟಿದ ಸ್ಥಳ ಭದ್ರಾವತಿ
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ Matric from Govt. High School, Bhadravathi
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಸಿ. ಎಂ. ಕೆ. ಅಲಿ
ತಾಯಿಯ ಹೆಸರು Not Known
ಅವಲಂಬಿತರ ಹೆಸರು Not Known
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಇಸ್ಲಾಂ
ಜಾತಿ ಮುಸ್ಲಿಂ
ವೆಬ್‌ಸೈಟ್ cmibrahim.org

ಸಿ. ಎಂ. ಇಬ್ರಾಹಿಂ ಒಟ್ಟು ಆಸ್ತಿ

ಒಟ್ಟು ಆಸ್ತಿ
₹29.13 CRORE
ಆಸ್ತಿ
₹29.19 CRORE
ಸಾಲಸೋಲ
₹5.6 LAKHS

ಸಿ. ಎಂ. ಇಬ್ರಾಹಿಂ ಕುರಿತು ಆಸಕ್ತಿದಾಯಕ ಸಂಗತಿಗಳು

ಮುಸ್ಲಿಂ ಸಮುದಾಯಕ್ಕೆ ಸೇರಿದ ಸಿ. ಎಂ. ಇಬ್ರಾಹಿಂ ರಾಮಾಯಣ, ಮಹಾಭಾರತ, ಭಗವದ್ಗೀತೆ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ.

ವಚನಗಳನ್ನು ಸೇರಿಸಿಕೊಂಡು ಅವರು ಮಾಡುವ ಭಾಷಣ ಎಲ್ಲರನ್ನೂ ಸೆಳೆಯುತ್ತದೆ.

ಸಿ. ಎಂ. ಇಬ್ರಾಹಿಂ ರಾಜಕೀಯ ಟೈಮ್‌ಲೈನ್

  • 2022 : ಮಾರ್ಚ್‌ನಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ. ಏಪ್ರಿಲ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ
  • 2017 : ವಿಧಾನ ಪರಿಷತ್ ಸದಸ್ಯರಾಗಿ ನೇಮಕ
  • 2013 : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಲ್ಲಿ 22,329 ಮತಗಳನ್ನು ಪಡೆದು ಸೋಲು
  • 1978 : ಶಿವಾಜಿನಗರದಿಂದ ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ. ಮೊದಲ ಚುನಾವಣೆಯಲ್ಲಿ ಗೆಲುವು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+