ಬೆಂಗಳೂರಿನ ಕೆ. ಆರ್. ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಅದೇ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕುರುಬ ಸಮುದಾಯಕ್ಕೆ ಸೇರಿದ ಬೈರತಿ ಬಸವರಾಜ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರಾಗಿದ್ದರು. 2010ರ ಚುನಾವಣೆಯಲ್ಲಿ ಬಸವನಪುರ ವಾರ್ಡ್‌ನಿಂದ ಗೆದ್ದು ಪಾಲಿಕೆ ಸದಸ್ಯರಾಗಿದ್ದರು.
2013ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ಆರ್. ಪುರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. 106,299 ಮತಗಳನ್ನು ಪಡೆದು ಜಯಗಳಿಸಿದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಕಣಕ್ಕಿಳಿದು ಗೆಲುವು ಕಂಡರು. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2019ರಲ್ಲಿ ಬಿಜೆಪಿ ಸೇರಿದರು, ಉಪ ಚುನಾವಣೆಯಲ್ಲಿ ಗೆದ್ದು 3ನೇ ಬಾರಿಗೆ ಶಾಸಕರಾದರು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿದರು. ನಗರಾಭಿವೃದ್ಧಿ ಖಾತೆ ಹೊಣೆ ನೀಡಲಾಯಿತು.
2021ರಲ್ಲಿ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ನಗರಾಭಿವೃದ್ಧಿ ಸಚಿವ ಖಾತೆಯನ್ನೇ ನೀಡಲಾಗಿದೆ.
| ಪೂರ್ಣ ಹೆಸರು | ಬೈರತಿ ಬಸವರಾಜು |
| ಜನ್ಮ ದಿನಾಂಕ | 04 Feb 1964 (ವಯಸ್ಸು 62) |
| ಹುಟ್ಟಿದ ಸ್ಥಳ | NA |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Government Arts College |
| ಉದ್ಯೋಗ | ಕೃಷಿ & ಉದ್ಯಮಿ |
| ತಂದೆಯ ಹೆಸರು | ಅಂಜಿನಪ್ಪ |
| ತಾಯಿಯ ಹೆಸರು | NA |
| ಅವಲಂಬಿತರ ಹೆಸರು | ಪದ್ಮಾವತಿ ಬಸವರಾಜ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಧರ್ಮ | ಹಿಂದು |
| ಜಾತಿ | ಕುರುಬ |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.