• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಜೀವನ ಚರಿತ್ರೆ

2021ರ ಜುಲೈ 27ರಂದು ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು.

ಬಸವರಾಜ ಸೋಮಪ್ಪ ಬೊಮ್ಮಾಯಿ ಒಬ್ಬ ಭಾರತೀಯ ರಾಜಕಾರಣಿ. ಅವರು ಜನತಾ ದಳದೊಂದಿಗೆ ರಾಜಕೀಯ ಪ್ರಾರಂಭಿಸಿದರು, ಆದರೆ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಕರ್ನಾಟಕದ ಮಾಜಿ ಗೃಹ ವ್ಯವಹಾರ, ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸಕಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ, ಈ ಹಿಂದೆ ಜಲಸಂಪನ್ಮೂಲ ಮತ್ತು ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ ರಾಜಕೀಯ ಕುಟುಂಬದಿಂದ ಬಂದವರು. ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಅವರ ಪುತ್ರ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಅವರು ಜನತಾದಳದೊಂದಿಗೆ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು ಮತ್ತು ಕರ್ನಾಟಕ ವಿಧಾನಸೌಧಕ್ಕೆ ಎರಡು ಬಾರಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

2008ರಲ್ಲಿ ಅವರು ಪಕ್ಷವನ್ನು ಬದಲಾಯಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ ಅವರನ್ನು ಜಲಸಂಪನ್ಮೂಲ ಸಚಿವರಾಗಿ ನೇಮಕಗೊಳಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದಲೂ ಅವರು ಸಹಕಾರ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮತ್ತು ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ಬಸವರಾಜ ಬೊಮ್ಮಾಯಿ
ಜನ್ಮ ದಿನಾಂಕ 28 Jan 1960 (ವಯಸ್ಸು 63)
ಹುಟ್ಟಿದ ಸ್ಥಳ ಹುಬ್ಬಳ್ಳಿ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ B.E. Mechanical
ಉದ್ಯೋಗ ಕೈಗಾರಿಕೋದ್ಯಮಿ, ರಾಜಕಾರಣಿ
ತಂದೆಯ ಹೆಸರು ಎಸ್ ಆರ್ ಬೊಮ್ಮಾಯಿ
ತಾಯಿಯ ಹೆಸರು Not Available
ಅವಲಂಬಿತರ ಹೆಸರು ಚನ್ನಮ್ಮ
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ 4883/1 ಸವಣೂರು ರಸ್ತೆ, ಶಿಗ್ಗಾಂವ್, ಶಿಗ್ಗಾಂವ್ ತಾಲೂಕು, ಹಾವೇರಿ - 581205
ಪ್ರಸ್ತುತ ವಿಳಾಸ 4883/1 ಸವಣೂರು ರಸ್ತೆ, ಶಿಗ್ಗಾಂವ್, ಶಿಗ್ಗಾಂವ್ ತಾಲೂಕು, ಹಾವೇರಿ - 581205
ಸಂಪರ್ಕ ಸಂಖ್ಯೆ 9845008502 , 8362352900
ಈ ಮೇಲ್ bommai960@gmail.com
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಬಸವರಾಜ್ ಬೊಮ್ಮಾಯಿ ಅರುಣೋದಯ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕರಾಗಿದ್ದರು. ಒಂದು ಬಾರಿ ಧಾರವಾಡದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿದ್ದರು.

ರಾಜಕೀಯ ಕಾಲಾನುಕ್ರಮ

 • 2021
  ಜುಲೈ 27ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
 • 2019
  ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅವರನ್ನು ಸಹಕಾರ ಸಚಿವರನ್ನಾಗಿ ನೇಮಿಸಲಾಯಿತು. ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಅಲ್ಲದೇ ಕರ್ನಾಟಕ ಸರ್ಕಾರದಲ್ಲಿ ಗೃಹ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದರು.
 • 2018
  ಕರ್ನಾಟಕ ವಿಧಾನಸಭೆಗೆ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು.
 • 2008
  ಜನತಾ ದಳವನ್ನು ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು, ಅಂದು ಅವರನ್ನು ಜಲಸಂಪನ್ಮೂಲ ಸಚಿವರಾಗಿ ನೇಮಿಸಲಾಯಿತು.
 • 2004
  ಅವರು ಮತ್ತೊಮ್ಮೆ ಧಾರವಾಡ ಕ್ಷೇತ್ರದ ಜನತಾದಳದ ಶಾಸಕರಾಗಿ ಗೆಲುವು ಸಾಧಿಸಿದರು.
 • 1998
  ಬಸವರಾಜ್ ಬೊಮ್ಮಾಯಿ ಧಾರವಾಡ ಕ್ಷೇತ್ರದ ಜನತಾದಳದ ಶಾಸಕರಾಗಿ ಆಯ್ಕೆಯಾಗಿದ್ದರು

ಹಿಂದಿನ ಇತಿಹಾಸ

 • 2007
  2007ರ ಜುಲೈನಲ್ಲಿ ಧಾರವಾಡದಿಂದ ನರಗುಂದದ ತನಕ 232 ಕಿ. ಮೀ. ಪಾದಯಾತ್ರೆಯನ್ನು ರೈತರೊಂದಿಗೆ ನಡೆಸಿದರು.
ಒಟ್ಟು ಆಸ್ತಿ3.93 CRORE
ಆಸ್ತಿ8.92 CRORE
ಸಾಲಸೋಲ4.99 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.