ಬಂಡೆಪ್ಪ ಕಾಶೆಂಪೂರ್

ಬಂಡೆಪ್ಪ ಕಾಶೆಂಪೂರ್
ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್. ಕುರುಬ ಸಮುದಾಯಕ್ಕೆ ಸೇರಿ ಇವರು ಪದವೀಧರರು.
By Moumi Majumdar | Wednesday, September 7, 2022, 06:15:51 PM [IST]

ಬಂಡೆಪ್ಪ ಕಾಶೆಂಪೂರ್ ಜೀವನ ಚರಿತ್ರೆ

ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್. ಕುರುಬ ಸಮುದಾಯಕ್ಕೆ ಸೇರಿ ಇವರು ಪದವೀಧರರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸದ್ಯ ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು.

ಬಂಡೆಪ್ಪ ಕಾಶೆಂಪೂರ್ ಬೀದರ್‌ ಕ್ಷೇತ್ರದಿಂದ 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ರಮೇಶ ಕುಮಾರ್ ಪಾಂಡೆ ವಿರುದ್ಧ ಸೋಲುಕಂಡರು. 2004ರಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಜಯಗಳಿಸಿದರು.

2008ರಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ ವಿಂಗಡಣೆ ನಂತರ ಬೀದರ್‌ ದಕ್ಷಿಣ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಸಂಜಯ ಖೇಣಿ ವಿರುದ್ಧ 1,271 ಮತಗಳ ಅಂತರದಿಂದ ಗೆದ್ದರು.

ಆದರೆ 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮತ್ತೆ ಕಣಕ್ಕಿಳಿದರು. ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿ ಅಶೋಕ ಖೇಣಿ ವಿರುದ್ಧ ಸೋಲು ಕಂಡರು. 2018ರಲ್ಲಿ ಪುನಃ ಜೆಡಿಎಸ್‌ನಿಂದ ಕಣಕ್ಕಿಳಿದು, 55,107 ಮತಗಳನ್ನು ಪಡೆದು ಬಿಜೆಪಿಯ ಡಾ. ಶೈಲೇಂದ್ರ ಬೆಲ್ದಾಳೆ ವಿರುದ್ಧ ಗೆಲುವು ಕಂಡರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಪುಟ ಸೇರಿದರು. ಸಹಕಾರಿ ಖಾತೆ ಸಚಿವರಾದರು.

2022ರ ಜನವರಿಯಲ್ಲಿ ಜೆಡಿಎಸ್ ಕೋರ್ ಕಮಿಟಿಯನ್ನು ಪುನಾರಚನೆ ಮಾಡಲಾಯಿತು. ಬಂಡೆಪ್ಪ ಕಾಶೆಂಪೂರ್ ಕೋರ್ ಕಮಿಟಿ ಅಧ್ಯಕ್ಷರಾದರು.

ಮತ್ತಷ್ಟು ಓದು

ಬಂಡೆಪ್ಪ ಕಾಶೆಂಪೂರ್ ವಯಕ್ತಿಕ ಜೀವನ

ಪೂರ್ಣ ಹೆಸರು ಬಂಡೆಪ್ಪ ಕಾಶೆಂಪೂರ್
ಜನ್ಮ ದಿನಾಂಕ 15 Jun 1964 (ವಯಸ್ಸು 61)
ಹುಟ್ಟಿದ ಸ್ಥಳ ಬೀದರ್‌, ಕರ್ನಾಟಕ
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ
ಉದ್ಯೋಗ ಕೃಷಿಕ, ರಾಜಕಾರಣಿ
ತಂದೆಯ ಹೆಸರು Not Known
ತಾಯಿಯ ಹೆಸರು Not Known
ಅವಲಂಬಿತರ ಹೆಸರು ನಳಿನಿ ಕಾಶೆಂಪೂರ್
ಅವಲಂಬಿತರ ಉದ್ಯೋಗ ಗೃಹಿಣಿ
ಧರ್ಮ ಹಿಂದು
ಜಾತಿ ಕುರುಬ
ವೆಬ್‌ಸೈಟ್ en.wikipedia.org/wiki/Bandeppa_Kashempur

ಬಂಡೆಪ್ಪ ಕಾಶೆಂಪೂರ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹7.02 CRORE
ಆಸ್ತಿ
₹7.32 CRORE
ಸಾಲಸೋಲ
₹30.53 LAKHS

ಬಂಡೆಪ್ಪ ಕಾಶೆಂಪೂರ್ ಕುರಿತು ಆಸಕ್ತಿದಾಯಕ ಸಂಗತಿಗಳು

ಅಪಾರ ದೈವಭಕ್ತರಾದ ಬಂಡೆಪ್ಪ ಕಾಶೆಂಪೂರ್ ತುಳಜಾಪುರ ಅಂಬಾ ಭವಾನಿ ದೇವಾಲಯಕ್ಕೆ ಸೈಕಲ್ ಯಾತ್ರೆ ಹೋಗುತ್ತಾರೆ. ಪ್ರತಿವರ್ಷ ಸಹ ದೇವಾಲಯಕ್ಕೆ ಅವರು ಹೋಗುತ್ತಾರೆ.

ಬಂಡೆಪ್ಪ ಕಾಶೆಂಪೂರ್ ರಾಜಕೀಯ ಟೈಮ್‌ಲೈನ್

  • 2022: ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿ ಆಯ್ಕೆ
  • 2018: 55,107 ಮತಗಳನ್ನು ಪಡೆದು ಬಿಜೆಪಿಯ ಡಾ. ಶೈಲೇಂದ್ರ ಬೆಲ್ದಾಳೆ ವಿರುದ್ಧ ಗೆಲುವು. ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಹಕಾರ ಸಚಿವರು.
  • 2013: ಜೆಡಿಎಸ್‌ನಿಂದ ಮತ್ತೆ ಕಣಕ್ಕೆ, ಅಶೋಕ ಖೇಣಿ ವಿರುದ್ಧ ಸೋಲು ಕಂಡರು.
  • 2008: ಬೀದರ್‌ ದಕ್ಷಿಣ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ 1,271 ಮತಗಳ ಅಂತರದಿಂದ ಗೆಲುವು
  • 2004: ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ, ಜಯ.
  • 1999: ಬೀದರ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ, ಸೋಲು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+