Get Updates
Get notified of breaking news, exclusive insights, and must-see stories!

ಬಂಡಾರು ದತ್ತಾತ್ರೇಯ

ಬಂಡಾರು ದತ್ತಾತ್ರೇಯ
ಬಂಡಾರು ದತ್ತಾತ್ರೇಯ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾಗಿದ್ದಾರೆ. ಇವರು ಅಖಂಡ ಆಂಧ್ರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷರಾಗಿದ್ದರು.
By Ajay M V | Friday, February 1, 2019, 05:56:02 PM [IST]

ಬಂಡಾರು ದತ್ತಾತ್ರೇಯ ಜೀವನ ಚರಿತ್ರೆ

ಬಂಡಾರು ದತ್ತಾತ್ರೇಯ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾಗಿದ್ದಾರೆ. ಇವರು ಅಖಂಡ ಆಂಧ್ರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷರಾಗಿದ್ದರು. ಪ್ರಸ್ತುತ ಇವರು ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಕಂದರಾಬಾದ ಲೋಕಸಭಾ ಕ್ಷೇತ್ರದಿಂದ 10, 12 ಮತ್ತು 13ನೇ ಲೋಕಸಭಾ ಸದಸ್ಯರಾಗಿ (1991 ರಿಂದ 2004) ಆಯ್ಕೆಯಾಗಿರುವ ಬಂಡಾರು ದತ್ತಾತ್ರೇಯ ಅಟಲ್ ಬಿಹಾರಿ ವಾಜಪೇಯಿ ಅವರ ಮಂತ್ರಿ ಮಂಡಳದಲ್ಲಿಯೂ ಸಚಿವರಾಗಿ ಕೆಲಸ ಮಾಡಿದ್ದಾರೆ.
ಆಂಧ್ರ ಪ್ರದೇಶದ ಹೈದರಾಬಾದನಲ್ಲಿ ಫೆಬ್ರುವರಿ 26, 1947 ರಂದು ಜನಿಸಿದ ಇವರು ’ದತ್ತಣ್ಣ’ ಎಂದು ಅಭಿಮಾನಿಗಳಿಂದ ಕರೆಯಲ್ಪಡುತ್ತಾರೆ. ಹೈದರಾಬಾದಿನ ಓಸ್ಮಾನಿಯಾ ವಿಶ್ವವಿದ್ಯಾಲಯದಿಂದ ಇವರು ಬಿಎಸ್ಸಿ ಪದವಿ ಪಡೆದರು. 1989ರಲ್ಲಿ ವಸಂತಾ ಅವರನ್ನು ಮದುವೆಯಾದರು. ಬಂಡಾರು ದತ್ತಾತ್ರೇಯ ದಂಪತಿಗೆ ವೈಷ್ಣವ ಬಂಡಾರು ಎಂಬ ಮಗ ಹಾಗೂ ವಿಜಯ ಲಕ್ಷ್ಮಿ ಎಂಬ ಹೆಸರಿನ ಇಬ್ಬರು ಮಕ್ಕಳು. ಆದರೆ ಮೇ 23, 2018 ರಂದು ಮಗ ವೈಷ್ಣವ ಬಂಡಾರು ತನ್ನ 21ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಮತ್ತಷ್ಟು ಓದು

ಬಂಡಾರು ದತ್ತಾತ್ರೇಯ ವಯಕ್ತಿಕ ಜೀವನ

ಪೂರ್ಣ ಹೆಸರು ಬಂಡಾರು ದತ್ತಾತ್ರೇಯ
ಜನ್ಮ ದಿನಾಂಕ 12 Jun 1947 (ವಯಸ್ಸು 78)
ಹುಟ್ಟಿದ ಸ್ಥಳ ಹೈದರಾಬಾದ (ತೆಲಂಗಾಣ)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ಶ್ರೀ ಬಾಲ್ಕಾ ಸುರೇಶ
ತಾಯಿಯ ಹೆಸರು ಶ್ರೀಮತಿ ಮುತ್ತಮ್ಮ
ಅವಲಂಬಿತರ ಹೆಸರು ಶ್ರೀಮತಿ ವಸಂತಾ
ಅವಲಂಬಿತರ ಉದ್ಯೋಗ NA
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ಬಂಡಾರು ದತ್ತಾತ್ರೇಯ ಒಟ್ಟು ಆಸ್ತಿ

ಒಟ್ಟು ಆಸ್ತಿ
₹9.78 CRORE
ಆಸ್ತಿ
₹9.83 CRORE
ಸಾಲಸೋಲ
₹4.05 LAKHS

ಬಂಡಾರು ದತ್ತಾತ್ರೇಯ ಕುರಿತು ಆಸಕ್ತಿದಾಯಕ ಸಂಗತಿಗಳು

ಬಂಡಾರು ದತ್ತಾತ್ರೇಯ 1965 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ (ಆರೆಸ್ಸೆಸ್) ಸೇರಿದರು. 1968 ರಿಂದ 1989 ರವರೆಗೆ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು. ಇವರು ಲೋಕ ಸಂಘರ್ಷ ಸಮಿತಿ (ಜಯಪ್ರಕಾಶ ನಾರಾಯಣ ಆಂದೋಲನ) ಯ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಇವರು 1980 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಬಂಡಾರು ದತ್ತಾತ್ರೇಯ ರಾಜಕೀಯ ಟೈಮ್‌ಲೈನ್

  • 2018: ಮಾರ್ಚ 5, 2018 ರಂದು ಹೈದರಾಬಾದಿನ ಕೋರ್ಟ್ ಆಫ್ ಯುನಿವರ್ಸಿಟಿಯ ಸದಸ್ಯರಾದರು.
  • 2017: ಸೆಪ್ಟೆಂಬರ್ 1, 2017 ರಂದು ಹಣಕಾಸು ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
  • 2014-2017: ಕೇಂದ್ರ ಸರಕಾರದ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ದರ್ಜೆ (ಸ್ವತಂತ್ರ ಖಾತೆ) ಯ ಸಚಿವರಾಗಿದ್ದರು.
  • 2014: ಸೆಪ್ಟೆಂಬರ್ 15, 2014 ರಿಂದ ನವೆಂಬರ್ 9, 2014 ರವರೆಗೆ ಲೋಕಸಭಾ ಸದಸ್ಯರೊಂದಿಗೆ ಅಧಿಕಾರಿಗಳ ಶಿಷ್ಟಾಚಾರ ಉಲ್ಲಂಘನೆ ಹಾಗೂ ವಿರೋಧಾಭಾಸ ರೀತಿಯ ವರ್ತನೆಯ ಕುರಿತ ಸಮಿತಿಯ ಸದಸ್ಯರಾಗಿದ್ದರು.
  • 2014: ಸೆಪ್ಟೆಂಬರ್ 12, 2014 ರಿಂದ ನವೆಂಬರ್ 9, 2014 ರವರೆಗೆ ಇತರೆ ಹಿಂದುಳಿದ ವರ್ಗಗಳ (ಓಬಿಸಿ) ಅಭಿವೃದ್ಧಿಯ ಸಂಸತ್ ಸಮಿತಿಯ ಚೇರಮನ್‌ರಾಗಿದ್ದರು.
  • 2014: ಸೆಪ್ಟೆಂಬರ್ 1, 2014 ರಿಂದ ನವೆಂಬರ್ 9, 2014 ರವರೆಗೆ ರೈಲ್ವೆ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು.
  • 2014: ಮೇ 2014 ರಲ್ಲಿ ಸಿಕಂದರಾಬಾದ್‌ನಿಂದ 16ನೇ ಲೋಕಸಭೆಯ ಸದಸ್ಯರಾಗಿ ಲೋಕಸಭೆಗೆ ಮರು ಆಯ್ಕೆಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ. ಅಂಜನ ಕುಮಾರ ಯಾದವ ಅವರನ್ನು ಸೋಲಿಸಿದರು.
  • 2014: ಬಿಜೆಪಿಯ ರಾಷ್ಟ್ರೀಯ ಪ್ರಣಾಳಿಕೆ ರಚನಾ ಸಮಿತಿಯ ಸದಸ್ಯರಾದರು.
  • 2013: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದರು.
  • 2009 - 2013: 2009 ರಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಹಾಗೂ 2013 ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಿಸಲ್ಪಟ್ಟರು.
  • 2006 - 2009: ಆಂಧ್ರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು.
  • 2004 - 2006: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು.
  • 2002 - 2004: ಜುಲೈ 1, 2002 ರಿಂದ 2004 ರವರೆಗೆ ಕೇಂದ್ರದ ರಾಜ್ಯ ಖಾತೆ ರೈಲ್ವೆ ಸಚಿವರಾಗಿ ಕೆಲಸ ಮಾಡಿದರು.
  • 2000: ಜೂನ್ 14, 2000 ರಿಂದ ಜೂನ್ 30, 2002 ವರೆಗೆ ಕೇಂದ್ರ ಸಂಪುಟದ ನಗರಾಭಿವೃದ್ಧಿ ಖಾತೆ ಹಾಗೂ ಬಡತನ ನಿರ್ಮೂಲನೆ ಖಾತೆಗಳ ರಾಜ್ಯ ಸಚಿವರಾಗಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.
  • 1999: ಅಕ್ಟೋಬರ್ 13, 1999 ರಂದು ಕೇಂದ್ರದ ನಗರಾಭಿವೃದ್ಧಿ ರಾಜ್ಯ ಖಾತೆ ಸಚಿವರಾದರು.
  • 1998 - 1999: ಈ ಅವಧಿಯಲ್ಲಿ 10,12 ಹಾಗೂ 13ನೇ ಲೋಕಸಭೆಯ ಸದಸ್ಯರಾಗಿ ಸತತವಾಗಿ ಚುನಾಯಿತರಾದರು.
  • 1996-98: ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
  • 1991: 10 ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಸಂಸದರಾದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಪರಿಶಿಷ್ಟ ಜಾತಿ, ಪಂಗಡಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗಳ ಸದಸ್ಯರಾಗಿ ಆಯ್ಕೆಯಾದರು.
  • 1981-89: ಈ ಅವಧಿಯಲ್ಲಿ ಆಂಧ್ರ ಪ್ರದೇಶ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
  • 1980: ಆಂಧ್ರ ಪ್ರದೇಶ ಬಿಜೆಪಿ ಘಟಕದ ರಾಜ್ಯ ಕಾರ್ಯದರ್ಶಿಯಾದರು.

ಹಿಂದಿನ ಇತಿಹಾಸ

  • 1965: 1965 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸೇರಿದರು. 1968 ರಿಂದ 1989 ರವರೆಗೆ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು.

ಬಂಡಾರು ದತ್ತಾತ್ರೇಯ ಸಾಧನೆಗಳು

ಬಂಡಾರು ದತ್ತಾತ್ರೇಯ ಸ್ವಯಂ ಸೇವಾ ಸಂಘಗಳ ಪ್ರಧಾನ ಕಾರ್ಯದರ್ಶಿಯಾಗಿ, ಆಂಧ್ರ ಪ್ರದೇಶ ಚಂಡಮಾರುತ ಸಮಿತಿ (ಆರೆಸ್ಸೆಸ್)ಯ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ತಂಬಾಕು ಮಂಡಳಿ, ತೆಂಗು ಮಂಡಳಿ, ರೈಲ್ವೆ ಸಲಹಾ ಸಮಿತಿ ಮತ್ತು ದೂರವಾಣಿ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+