• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಬಿ.ಝಡ್. ಜಮೀರ್ ಅಹಮದ್ ಖಾನ್

ಬಿ.ಝಡ್. ಜಮೀರ್ ಅಹಮದ್ ಖಾನ್

ಜೀವನ ಚರಿತ್ರೆ

ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್. ಮೊದಲು ಜೆಡಿಎಸ್‌ ಪಕ್ಷದಲ್ಲಿದ್ದ ಜಮೀರ್ ಬಳಿಕ ಕಾಂಗ್ರೆಸ್ ಸೇರಿದರು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಜಮೀರ್ ಅಹ್ಮದ್ ಖಾನ್ ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಪ್ತರಾಗಿದ್ದರು. ಬೆಂಗಳೂರು ನಗರದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಲ್ಲಿ ಇವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ತಮ್ಮ ರಾಜಕೀಯ ಗುರುಗಳು ಎಂದು ಜಮೀರ್ ಅಹ್ಮದ್ ಖಾನ್ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಮಹಾರಾಷ್ಟ್ರದ ರಾಜ್ಯಪಾಲರಾಗಿ ನಿಯುಕ್ತಿಯಾದಾಗ ಚಾಮರಾಜಪೇಟೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಎದುರಾದ ಉಪ ಚುನಾವಣೆಯಲ್ಲಿ ದೇವೇಗೌಡರು ಜೆಡಿಎಸ್‌ನಿಂದ ಜಮೀರ್ ಅಹ್ಮದ್ ಖಾನ್ ಕಣಕ್ಕಿಳಿಸಿದರು.

2008, 2013ರಲ್ಲಿ ಜೆಡಿಎಸ್‌ ಪಕ್ಷದಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಗೆಲುವು ಸಾಧಿಸಿದರು. 2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಜಮೀರ್ ಅಹ್ಮದ್ ಖಾನ್ ಪಕ್ಷದಿಂದ ಅಮಾನತುಗೊಂಡರು. ಬಳಿಕ ಅವರು ಕಾಂಗ್ರೆಸ್ ಸೇರಿದರು.

2018ರ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಮೀರ್ ಅಹ್ಮದ್ ಖಾನ್‌ಗೆ ಟಿಕೆಟ್ ನೀಡಿತು. 65,339 ಮತಗಳನ್ನು ಪಡೆದು ಜಮೀರ್ ಅಹ್ಮದ್ ಖಾನ್ ಬಿಜೆಪಿಯ ಎಂ. ಲಕ್ಷ್ಮೀನಾರಾಯಣ್ ಸೋಲಿಸಿದರು. 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ರಾಜಕೀಯ ಹೊರತುಪಡಿಸಿ ಜಮೀರ್ ಅಹ್ಮದ್ ಖಾನ್ ಉದ್ಯಮಿ. ನ್ಯಾಷನಲ್ ಟ್ರಾವೆಲ್ಸ್‌ನ ಪಾಲುದಾರರು. ಬೆಂಗಳೂರಿನಲ್ಲಿ ಅವರು ಕಟ್ಟಿಸಿರುವ ಮನೆ ಹಲವು ಕಾರಣಕ್ಕೆ ಸುದ್ದಿಯಲ್ಲಿದೆ. ಮನೆಯ ವಿಚಾರವಾಗಿಯೇ ಜಮೀರ್ ನಿವಾಸದ ಮೇಲೆ ಇಡಿ, ಎಸಿಬಿ ದಾಳಿ ನಡೆದಿದೆ.

ಬೆಂಗಳೂರಿನ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಭಾರೀ ಪ್ರಭಾವ ಹೊಂದಿದ್ದಾರೆ. 2015ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದಾಗ ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಮೇಯರ್ ಪಟ್ಟವನ್ನು ಬಿಜೆಪಿ ಕೈ ತಪ್ಪಿಸುವುದರ ಹಿಂದೆ ಜಮೀರ್ ಅಹ್ಮದ್ ಪ್ರಭಾವ ಕೆಲಸ ಮಾಡಿತ್ತು.

ವಯಕ್ತಿಕ ಜೀವನ

ಪೂರ್ಣ ಹೆಸರು ಬಿ.ಝಡ್. ಜಮೀರ್ ಅಹಮದ್ ಖಾನ್
ಜನ್ಮ ದಿನಾಂಕ 01 Aug 1966 (ವಯಸ್ಸು 56)
ಹುಟ್ಟಿದ ಸ್ಥಳ ತುಮಕೂರು
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ 8th Pass
ಉದ್ಯೋಗ ಎನ್.ಟಿ. ಜಮೀರ್ ಅಹಮದ್ ಖಾನ್ ಅಸೋಸಿಯೇಟ್ಸ್
ತಂದೆಯ ಹೆಸರು ಝಿಯಾವುಲ್ಲಾ ಖಾನ್
ತಾಯಿಯ ಹೆಸರು ಸೋಗ್ರಾ ಖಾನುಮ್
ಅವಲಂಬಿತರ ಹೆಸರು ಮಾಹಿತಿ ಲಭ್ಯವಿಲ್ಲ
ಅವಲಂಬಿತರ ಉದ್ಯೋಗ ಎನ್.ಟಿ. ಜಮೀರ ಅಹ್ಮದ ಖಾನ್ ಅಸೋಸಿಯೇಟ್ಸ್ ಕಂಪನಿಯ ಪಾಲುದಾರರು.
ಮುಸ್ಲಿಂ

ವಿಳಾಸ

ಖಾಯಂ ವಿಳಾಸ ನಂ. 34, ಬೆನ್ಸನ್ ಕ್ರಾಸ್ ರೋಡ, ಬೆನ್ಸನ್ ಟೌನ, ಬೆಂಗಳೂರು - 560046
ಪ್ರಸ್ತುತ ವಿಳಾಸ ನಂ. 34, ಬೆನ್ಸನ್ ಕ್ರಾಸ್ ರೋಡ, ಬೆನ್ಸನ್ ಟೌನ, ಬೆಂಗಳೂರು - 560046
ಸಂಪರ್ಕ ಸಂಖ್ಯೆ 9844025075, 9845911111

ಆಸಕ್ತಿಕರ ಅಂಶಗಳು

ಕರ್ನಾಟಕ ರಾಜಿಕೀಯದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ

ರಾಜಕೀಯ ಹೊರತುಪಡಿಸಿ ಉದ್ಯಮದಲ್ಲಿಯೂ ಸಾಕಷ್ಟು ಪ್ರಸಿದ್ಧಿ

ಬೆಂಗಳೂರಿನಲ್ಲಿ ಕಟೋನ್ಮೆಂಟ್ ಪ್ರದೇಶದಲ್ಲಿರುವ ಮನೆ ಸದಾ ಚರ್ಚೆಯ ವಿಷಯ

ರಾಜಕೀಯ ಕಾಲಾನುಕ್ರಮ

 • 2018
  ಮಾರ್ಚ್ 25 ರಂದು ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ ಸೇರ್ಪಡೆ. ಚಾಮರಾಜಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು.
 • 2016
  ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ. ಪಕ್ಷದಿಂದ ಅಮಾನತುಗೊಂಡ ಶಾಸಕರಲ್ಲಿ ಜಮೀರ್ ಅಹ್ಮದ್ ಖಾನ್ ಸಹ ಒಬ್ಬರು.
 • 2013
  ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
 • 2008
  ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಶಾಸಕರಾಗಿ ಆಯ್ಕೆ.
 • 2005
  ಚಾಮರಾಜಪೇಟೆ ಉಪ ಚುನಾವಣೆಯಲ್ಲಿ ಗೆಲುವು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಹಜ್ & ವಕ್ಫ್ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಣೆ.
ಒಟ್ಟು ಆಸ್ತಿ17.56 CRORE
ಆಸ್ತಿ40.34 CRORE
ಸಾಲಸೋಲ22.79 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.