ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಗನಾಗಿರುವ ಬಿ.ವೈ. ರಾಘವೇಂದ್ರ 2009 ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪನವರನ್ನು ಸೋಲಿಸಿ ೧೫ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. 2014 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇವರ ತಂದೆ ಬಿ.ಎಸ್. ಯಡಿಯೂರಪ್ಪ ಸಂಸದರಾಗಿದ್ದರು. ನಂತರ 2018ರ ಉಪಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಅವರನ್ನು ಸೋಲಿಸಿ ಮತ್ತೊಮ್ಮೆ ಸಂಸದರಾದರು. ಈ ಚುನಾವಣೆಯಲ್ಲಿ ರಾಘವೇಂದ್ರ 4,89,959 ಮತಗಳನ್ನು ಗಳಿಸಿದ್ದರು. ಶಿವಮೊಗ್ಗದ ಎಟಿಎಸ್‌ಸಿಸಿ ಕಾಲೇಜಿನಿಂದ ಬ್ಯುಸಿನೆಸ್ ಮ್ಯಾನೇಜಮೆಂಟ್‌ನಲ್ಲಿ ಪದವಿ ಶಿಕ್ಷಣ ಪಡೆದರು. ಪದವಿ ಶಿಕ್ಷಣದ ನಂತರ ಇವರು ಸ್ಥಳೀಯ ರಾಜಕಾರಣದತ್ತ ಹೆಚ್ಚು ಗಮನ ಹರಿಸಲಾರಂಭಿಸಿದರು.
| ಪೂರ್ಣ ಹೆಸರು | ಬಿ.ವೈ. ರಾಘವೇಂದ್ರ |
| ಜನ್ಮ ದಿನಾಂಕ | 16 Aug 1973 (ವಯಸ್ಸು 52) |
| ಹುಟ್ಟಿದ ಸ್ಥಳ | ಶಿಕಾರಿಪುರ, ಶಿವಮೊಗ್ಗ ಜಿಲ್ಲೆ (ಕರ್ನಾಟಕ) |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate Professional |
| ಉದ್ಯೋಗ | ಕೃಷಿಕ, ಶಿಕ್ಷಣ ತಜ್ಞ, ಮತ್ತು ವ್ಯಾಪಾರಿ |
| ತಂದೆಯ ಹೆಸರು | ಶ್ರೀ ಬೂಕನಕೆರೆ ಯಡಿಯೂರಪ್ಪ |
| ತಾಯಿಯ ಹೆಸರು | ಶ್ರೀಮತಿ ಮೈತ್ರಿ ದೇವಿ |
| ಅವಲಂಬಿತರ ಹೆಸರು | ಶ್ರೀಮತಿ ಆರ್. ತೇಜಸ್ವಿನಿ |
| ಅವಲಂಬಿತರ ಉದ್ಯೋಗ | ಹೌಸ್ ವೈಫ್ ಹಾಗೂ ವ್ಯಾಪಾರೋದ್ಯಮಿ |
| ಮಕ್ಕಳು | 2 ಪುತ್ರ(ರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.