Get Updates
Get notified of breaking news, exclusive insights, and must-see stories!

ಬಿ. ಶ್ರೀರಾಮುಲು

ಬಿ. ಶ್ರೀರಾಮುಲು
ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡ ಶ್ರೀರಾಮುಲು 1999 ರ ವೇಳೆಗೆ ರಾಜಕೀಯ ವಲಯದಲ್ಲಿ ಪ್ರವರ್ಧಮಾನಕ್ಕೆ ಬಂದರು. 1999 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ ಕಾಂಗ್ರೆಸ್ಸಿನ ದಿವಾಕರ ಬಾಬು ಅವರ ಎದುರು ಸೋಲು ಅನುಭವಿಸಿದರು.
By Moumi Majumdar | Monday, April 29, 2019, 06:14:14 PM [IST]

ಬಿ. ಶ್ರೀರಾಮುಲು ಜೀವನ ಚರಿತ್ರೆ

ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡ ಶ್ರೀರಾಮುಲು 1999 ರ ವೇಳೆಗೆ ರಾಜಕೀಯ ವಲಯದಲ್ಲಿ ಪ್ರವರ್ಧಮಾನಕ್ಕೆ ಬಂದರು. 1999 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ ಕಾಂಗ್ರೆಸ್ಸಿನ ದಿವಾಕರ ಬಾಬು ಅವರ ಎದುರು ಸೋಲು ಅನುಭವಿಸಿದರು. ಆದರೂ ಧೃತಿಗೆಡದ ಅವರು ಮತ್ತೊಮ್ಮೆ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿ 2004 ರಿಂದ ಸತತ ಮೂರು ಬಾರಿ ಶಾಸಕರಾಗಿ ಜಯಶಾಲಿಯಾದರು. ಬಿಜೆಪಿಯಲ್ಲಿ ಇರುವಾಗ ಇವರು ಕೆಲ ವಿವಾದಗಳಿಗೆ ಗುರಿಯಾದರು. ನಂತರ ಪಕ್ಷದಲ್ಲಿ ತಮಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಪಕ್ಷ ತೊರೆದರು. ಆದಾಗ್ಯೂ 2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮತ್ತೆ ಪಕ್ಷ ಸೇರ್ಪಡೆಯಾದರು. ನಂತರ ಬಿಜೆಪಿಯಿಂದಲೇ 2014ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 16ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. 2018ರಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬದಾಮಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಸೋತರು. ಆದರೂ ಇದೇ ಚುನಾವಣೆಯಲ್ಲಿ ಮತ್ತೊಂದು ಕ್ಷೇತ್ರ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಜಯ ಸಾಧಿಸಿದರು. ನಂತರ ಶಾಸಕ ಸ್ಥಾನ ಉಳಿಸಿಕೊಂಡು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ಮತ್ತಷ್ಟು ಓದು

ಬಿ. ಶ್ರೀರಾಮುಲು ವಯಕ್ತಿಕ ಜೀವನ

ಪೂರ್ಣ ಹೆಸರು ಬಿ. ಶ್ರೀರಾಮುಲು
ಜನ್ಮ ದಿನಾಂಕ 08 Aug 1971 (ವಯಸ್ಸು 54)
ಹುಟ್ಟಿದ ಸ್ಥಳ ಬಳ್ಳಾರಿ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ ಹಾಗೂ ವ್ಯಾಪಾರೋದ್ಯಮಿ
ತಂದೆಯ ಹೆಸರು ಶ್ರೀ ಬಿ. ತಿಮ್ಮಪ್ಪ
ತಾಯಿಯ ಹೆಸರು ಶ್ರೀಮತಿ ಬಿ. ಹೊನ್ನೂರಮ್ಮ
ಅವಲಂಬಿತರ ಹೆಸರು ಶ್ರೀಮತಿ ಬಿ. ಭಾಗ್ಯಲಕ್ಷ್ಮಿ
ಅವಲಂಬಿತರ ಉದ್ಯೋಗ ಹೌಸ್ ವೈಫ್
ಮಕ್ಕಳು 1 ಪುತ್ರ(ರು) 3 ಪುತ್ರಿ(ಯರು)
ಧರ್ಮ ಹಿಂದು

ಬಿ. ಶ್ರೀರಾಮುಲು ಒಟ್ಟು ಆಸ್ತಿ

ಒಟ್ಟು ಆಸ್ತಿ
₹67.16 CRORE
ಆಸ್ತಿ
₹73.22 CRORE
ಸಾಲಸೋಲ
₹6.06 CRORE

ಬಿ. ಶ್ರೀರಾಮುಲು ಕುರಿತು ಆಸಕ್ತಿದಾಯಕ ಸಂಗತಿಗಳು

ಗಣಿ ಹಗರಣದಿಂದ ಕುಖ್ಯಾತಿ ಪಡೆದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಕಾರಣ ಶ್ರೀರಾಮುಲು ಸಾಕಷ್ಟು ವಿವಾದಗಳಿಗೆ ಕಾರಣರಾದರು.

ಬಿ. ಶ್ರೀರಾಮುಲು ಸಾಧನೆಗಳು

ಬಳ್ಳಾರಿ ವಿಧಾನ ಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಜಯ ಗಳಿಸಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+