Get Updates
Get notified of breaking news, exclusive insights, and must-see stories!

ಬಿ. ಎಲ್. ಸಂತೋಷ್

ಬಿ. ಎಲ್. ಸಂತೋಷ್
ಬಿ. ಎಲ್.
By Rashmi | Thursday, August 25, 2022, 03:47:24 PM [IST]

ಬಿ. ಎಲ್. ಸಂತೋಷ್ ಜೀವನ ಚರಿತ್ರೆ

ಬಿ. ಎಲ್. ಸಂತೋಷ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ. ಬಿಜೆಪಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿರುವ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾಗೆ ಆಪ್ತರಾಗಿರುವ ಕರ್ನಾಟಕದ ನಾಯಕ.

ಉಡುಪಿಯ ಹಿರಿಯಡ್ಕ ಮೂಲದ ಬಿ. ಎಲ್. ಸಂತೋಷ್ ಚಿನ್ನದ ಪದಕದೊಂದಿಗೆ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. 1993ರಲ್ಲಿ ಆರ್‌ಎಸ್‌ಎಸ್ ಪ್ರಚಾರಕರಾದರು. ಈಗ ಬಿಜೆಪಿಯ ಪ್ರಭಾವಿ ಹುದ್ದೆಯಲ್ಲಿದ್ದಾರೆ.

ಅವಿವಾಹಿತರಾದ ಬಿ. ಎಲ್. ಸಂತೋಷ್ ಪಕ್ಷ ಸಂಘಟನೆ, ಆರ್‌ಎಸ್‌ಎಸ್‌ನ ಕೆಲಸಗಳಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷವನ್ನು ಸಂಘಟನೆ ಮಾಡುವುದೇ ಸಂಘಟನಾ ಕಾರ್ಯದರ್ಶಿಯ ಕೆಲಸ. ಆದ್ದರಿಂದ ನಿರಂತರವಾಗಿ ಸಂಚಾರದಲ್ಲಿ ತೊಡಗಿಸುತ್ತಾರೆ, ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುತ್ತಾರೆ.

1993 ರಿಂದ 2006ರ ತನಕ ಮೈಸೂರು, ಶಿವಮೊಗ್ಗ, ಬೆಂಗಳೂರು ವಿಭಾಗದ ಪ್ರಚಾರಕ್ ಆಗಿ ಕಾರ್ಯ ನಿರ್ವಹಣೆ ಮಾಡಿದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಸಂಚಾರ ನಡೆಸಿ, ಕಾರ್ಯಕರ್ತರನ್ನು ಸಂಘಟನೆ ಮಾಡಿದರು.

2006ರಲ್ಲಿ ಕರ್ನಾಟಕ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು. 2013ರ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೆ ಸವಾಲಾಗಿತ್ತು. ಬಿ. ಎಸ್. ಯಡಿಯೂರಪ್ಪ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದರು. ಆಗ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ. ಎಲ್. ಸಂತೋಷ್ ಕಾರ್ಯಕರ್ತರನ್ನು ಸಂಘಟಿಸಿ ಚುನಾವಣೆ ಎದುರಿಸಿದ ಪರಿ ರಾಷ್ಟ್ರೀಯ ನಾಯಕರನ್ನು ಸೆಳೆಯಿತು.

2014ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಬಿ. ಎಲ್. ಸಂತೋಷ್ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ನಿರ್ವಹಣೆ ಮಾಡಿದರು. 2019ರಲ್ಲಿ ಪಕ್ಷ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿತು.

ಪಕ್ಷ ಸಂಘಟನೆ, ರಾಜಕೀಯ ಮಾತ್ರವಲ್ಲ ಚೀನಾ ದೇಶದ ಬಗ್ಗೆ ಬಿ. ಎಲ್. ಸಂತೋಷ್ ಹಲವಾರು ಅಧ್ಯಯನ ಮಾಡಿದ್ದು, ಆಳವಾದ ಜ್ಞಾನ ಹೊಂದಿದ್ದಾರೆ. ಸಂಗೀತ, ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಪುಸ್ತಕಗಳನ್ನು ಓದುವ ಅವರು ಕಾರ್ಯಕರ್ತರಿಗೂ ಪುಸ್ತಕ ಓದುವಂತೆ ಹೇಳುತ್ತಾರೆ.

ಮತ್ತಷ್ಟು ಓದು

ಬಿ. ಎಲ್. ಸಂತೋಷ್ ವಯಕ್ತಿಕ ಜೀವನ

ಪೂರ್ಣ ಹೆಸರು ಬಿ. ಎಲ್. ಸಂತೋಷ್
ಜನ್ಮ ದಿನಾಂಕ 01 Feb 1967 (ವಯಸ್ಸು 59)
ಹುಟ್ಟಿದ ಸ್ಥಳ ಹಿರಿಯಡ್ಕ ಉಡುಪಿ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ B.E.
ಉದ್ಯೋಗ ರಾಜಕಾರಣಿ
ತಂದೆಯ ಹೆಸರು .
ತಾಯಿಯ ಹೆಸರು .
ಧರ್ಮ ಹಿಂದು
ಜಾತಿ ಬ್ರಾಹ್ಮಣ

ಬಿ. ಎಲ್. ಸಂತೋಷ್ ಒಟ್ಟು ಆಸ್ತಿ

ಒಟ್ಟು ಆಸ್ತಿ
N/A
ಆಸ್ತಿ
N/A
ಸಾಲಸೋಲ
N/A

ಬಿ. ಎಲ್. ಸಂತೋಷ್ ಕುರಿತು ಆಸಕ್ತಿದಾಯಕ ಸಂಗತಿಗಳು

ಚಿನ್ನದ ಪದಕದೊಂದಿಗೆ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು

ಬಿಜೆಪಿಯ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ ಕನ್ನಡಿಗ

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾರಿಗೆ ಆಪ್ತರು

ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಕಾರ್ಯಕರ್ತರ ಜೊತೆ ಸಿನಿಮಾ ವೀಕ್ಷಿಸುತ್ತಾರೆ

ಬಿ. ಎಲ್. ಸಂತೋಷ್ ರಾಜಕೀಯ ಟೈಮ್‌ಲೈನ್

  • 2019 : ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
  • 2014: ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ
  • 2006 : ಕರ್ನಾಟಕ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ
  • 1993 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ್. ಮೈಸೂರು ಶಿವಮೊಗ್ಗ, ಬೆಂಗಳೂರು ವಿಭಾಗದ ಪ್ರಚಾರಕ್ ಆಗಿ ಕಾರ್ಯ ನಿರ್ವಹಣೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+