ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸಿ. ಪಾಟೀಲ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕೃಷಿ ಸಚಿವರು. ಪೊಲೀಸ್ ಅಧಿಕಾರಿಯಾಗಿದ್ದ ಬಿ. ಸಿ. ಪಾಟೀಲ್ ಸಚಿವರಾಗಿ ಬೆಳೆದಿದ್ದು, ನಟರಾಗಿಯೂ ಕನ್ನಡ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ.
ಬಿ. ಸಿ. ಪಾಟೀಲ್ ಪೂರ್ಣ ಹೆಸರು ಬಸನಗೌಡ ಚನ್ನಬಸನಗೌಡ ಪಾಟೀಲ. ನಾಲ್ಕು ಬಾರಿ ಶಾಸಕರಾಗಿರುವ ಬಿ. ಸಿ. ಪಾಟೀಲ್ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು.
ಹಾವೇರಿಯ ಜಿಲ್ಲೆಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಲಿಂಗಾಯತ ವೀರಶೈವ (ಸಾದರ) ಸಮುದಾಯಕ್ಕೆ ಸೇರಿದ ಬಿ. ಸಿ. ಪಾಟೀಲ್‌ರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡರು.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಯಲಿವಾಳ ಗ್ರಾಮದಲ್ಲಿ 1956ರ ನವೆಂಬರ್ 14ರಂದು ಕೃಷಿಕ ಕುಟುಂಬದಲ್ಲಿ ಬಿ. ಸಿ. ಪಾಟೀಲ್ ಜನಿಸಿದರು. ತಂದೆ ಚನ್ನಬಸವಗೌಡ, ತಾಯಿ ಶಿವಮ್ಮ. ಯಲಿವಾಳ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಹಿರೇಕೆರೂರು ತಾಲೂಕಿನ ಚಿಕ್ಕೇರೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು. ಬಳಿಕ 1977ರಲ್ಲಿ ದಾವಣಗೆರೆಯಲ್ಲಿ ಬಿಎ ಪದವಿ ಪಡೆದರು.
ಬಾಲ್ಯದಿಂದಲೂ ಪೊಲೀಸ್ ಆಗಬೇಕೆಂದು ಕನಸು ಕಂಡಿದ್ದರು ಬಿ. ಸಿ. ಪಾಟೀಲ್. 1979ರಲ್ಲಿ ಪೊಲೀಸ್ ಇಲಾಖೆಗೆ ಸಬ್‌ಇನ್ಸ್‌ಸ್ಪೆಕ್ಟರ್ ಆಗಿ ಸೇರಿದರು. ಬಳ್ಳಾರಿ, ಹಿರಿಯೂರು ಮತ್ತು ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದರು. ಬಳಿಕ ಇನ್ಸ್‌ಸ್ಟೆಕ್ಟರ್ ಆಗಿ ಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡರು.
2003ರಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದರು. ರೈತ ಪರ ಹೋರಾಟದಲ್ಲಿ ಪಾಲ್ಗೊಂಡು 9 ದಿನ ಜೈಲುವಾಸವನ್ನು ಅನುಭವಿಸಿದರು. ಸಂಯಕ್ತ ಜನತಾದಳದ ಮೂಲಕ ರಾಜಕೀಯ ಪ್ರವೇಶ ಮಾಡಿದರು. 2004ರಲ್ಲಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
2008ರಲ್ಲಿ ಬಿ. ಸಿ. ಪಾಟೀಲ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ 50,017 ಮತಗಳನ್ನು ಪಡೆದು ಬಿ. ಸಿ. ಪಾಟೀಲ್ ಸೋಲು ಕಂಡರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಗೆಲುವು ಕಂಡರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಬಳಿಕ ಬಿಜೆಪಿ ಸೇರಿದ ಬಿ. ಸಿ. ಪಾಟೀಲ್ 2019ರ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಳಿಕ ಯಡಿಯೂರಪ್ಪ ಸಂಪುಟ ಸೇರಿದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಬಿ. ಸಿ. ಪಾಟೀಲ್ ರಾಜಕೀಯದ ಹೊರತಾಗಿ ಚಿತ್ರನಟ, ನಿರ್ಮಾಪಕ, ನಿರ್ದೇಶಕರು. ಸಚಿವರಾಗಿದ್ದಾಗಲೂ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
| ಪೂರ್ಣ ಹೆಸರು | ಬಿ. ಸಿ. ಪಾಟೀಲ್ |
| ಜನ್ಮ ದಿನಾಂಕ | 14 Nov 1956 (ವಯಸ್ಸು 69) |
| ಹುಟ್ಟಿದ ಸ್ಥಳ | ಯಲಿವಾಳ, ಸೊರಬ ತಾಲೂಕು ಶಿವಮೊಗ್ಗ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | |
| ಉದ್ಯೋಗ | ಕೃಷಿಕ, ರಾಜಕಾರಣಿ, ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ |
| ತಂದೆಯ ಹೆಸರು | ಚನ್ನಬಸವಗೌಡ |
| ತಾಯಿಯ ಹೆಸರು | ಶಿವಮ್ಮ |
| ಅವಲಂಬಿತರ ಹೆಸರು | ವನಜಾ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 2 ಪುತ್ರಿ(ಯರು) |
| ಧರ್ಮ | ಹಿಂದು |
| ಜಾತಿ | ಲಿಂಗಾಯತ ವೀರಶೈವ (ಸಾದರ) |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.