ಬಿ. ಸಿ. ನಾಗೇಶ್

ಬಿ. ಸಿ. ನಾಗೇಶ್
ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕರು ಬಿ. ಸಿ.
By Moumi Majumdar | Monday, August 29, 2022, 01:26:24 PM [IST]

ಬಿ. ಸಿ. ನಾಗೇಶ್ ಜೀವನ ಚರಿತ್ರೆ

ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕರು ಬಿ. ಸಿ. ನಾಗೇಶ್‌. ಎಬಿವಿಪಿ, ಆರ್‌ಎಸ್‌ಎಸ್ ಮೂಲಕ ರಾಜಕೀಯಕ್ಕೆ ಬಂದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಿ. ಸಿ. ನಾಗೇಶ್ ಬಿಇ ಪದವೀಧರರು. ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜನರ ಕೈಗೆ ಸುಲಭವಾಗಿ ಸಿಗುವ ನಾಯಕ ಎಂದು ಹೆಸರು ಪಡೆದಿದ್ದಾರೆ, ಸಚಿವರಾದ ಬಳಿಕವೂ ಬೆಂಗಳೂರಿಗೆ ಹಲವು ಬಾರಿ ರೈಲಿನಲ್ಲಿ ಸಂಚಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ. ಸಿ. ನಾಗೇಶ್‌ 46,034 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಆದರೆ 2013ರ ಚುನಾವಣೆಯಲ್ಲಿ 45,215 ಮತಗಳನ್ನು ಪಡೆದು ಸೋಲು ಕಂಡಿದ್ದರು.

2018ರ ಚುನಾವಣೆಯಲ್ಲಿ ಬಿ. ಸಿ. ನಾಗೇಶ್ ಕಾಂಗ್ರೆಸ್‌ನ ಕೆ. ಷಡಾಕ್ಷರಿ ವಿರುದ್ಧ 61,383 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 2021ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿದೆ.

ಬಿ. ಸಿ. ನಾಗೇಶ್ 1984ರಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್‌ಗೆ ಆಪ್ತರು.

ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಬಿ. ಸಿ. ನಾಗೇಶ್ ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು. ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿರುವ ಇವರು, ಬಿಜೆಪಿ ಶಿಸ್ತು ಸಮಿತಿಯ ಸದಸ್ಯರು ಸಹ ಆಗಿದ್ದರು.

ಮತ್ತಷ್ಟು ಓದು

ಬಿ. ಸಿ. ನಾಗೇಶ್ ವಯಕ್ತಿಕ ಜೀವನ

ಪೂರ್ಣ ಹೆಸರು ಬಿ. ಸಿ. ನಾಗೇಶ್
ಜನ್ಮ ದಿನಾಂಕ 01 Jul 1959 (ವಯಸ್ಸು 66)
ಹುಟ್ಟಿದ ಸ್ಥಳ ತುಮಕೂರು
ಪಕ್ಷದ ಹೆಸರು Bharatiya Janata Party
ವಿದ್ಯಾರ್ಹತೆ BMS College of Engineering
ಉದ್ಯೋಗ ಕೃಷಿ, ಉದ್ಯಮಿ
ತಂದೆಯ ಹೆಸರು ಬಿ. ಎಸ್. ಚಂದ್ರಶೇಖರಯ್ಯ
ತಾಯಿಯ ಹೆಸರು ಬಿ. ಸಿ. ಸಾವಿತ್ರಮ್ಮ
ಅವಲಂಬಿತರ ಹೆಸರು NA
ಅವಲಂಬಿತರ ಉದ್ಯೋಗ ಕೃಷಿ, ಗೃಹಿಣಿ
ಧರ್ಮ ಹಿಂದು
ಜಾತಿ ಬ್ರಾಹ್ಮಣ
ವೆಬ್‌ಸೈಟ್ NA

ಬಿ. ಸಿ. ನಾಗೇಶ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹12.61 CRORE
ಆಸ್ತಿ
₹12.65 CRORE
ಸಾಲಸೋಲ
₹3.61 LAKHS

ಬಿ. ಸಿ. ನಾಗೇಶ್ ಕುರಿತು ಆಸಕ್ತಿದಾಯಕ ಸಂಗತಿಗಳು

ಆರ್‌ಎಸ್‌ಎಸ್‌, ಎಬಿವಿಪಿ ಮೂಲಕ ರಾಜಕಾರಣಕ್ಕೆ ಪ್ರವೇಶ

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ

ಸಚಿವರಾದ ಮೇಲೂ ತುಮಕೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ

ಬಿ. ಸಿ. ನಾಗೇಶ್ ರಾಜಕೀಯ ಟೈಮ್‌ಲೈನ್

  • 2021 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆ. ಮೊದಲ ಬಾರಿಗೆ ಸಚಿವ ಸ್ಥಾನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ.
  • 2018 : 61,383 ಮತಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವು. ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ
  • 2013 : ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ. ಸುಮಾರು 11 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ನ ಕೆ. ಷಡಕ್ಷರಿ ವಿರುದ್ಧ ಸೋಲು
  • 2008 : ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ. 46,034 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ

ಹಿಂದಿನ ಇತಿಹಾಸ

  • 1984: ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಬಿ. ಸಿ. ನಾಗೇಶ್ ಬಿಜೆಪಿ ಸೇರಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+