ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ಯೇತರ ಸರ್ಕಾರ ರಚಿಸಿ ಪೂರ್ಣಾವಧಿಯವರೆಗೆ ಆಡಳಿತ ನಡೆಸಿದವರಲ್ಲಿ ಮೊದಲಿಗರು. ಕಾರ್ಗಿಲ್ ಯುದ್ಧದ ಅವಧಿಯಲ್ಲಿ ದೇಶ ಮುನ್ನಡೆಸಿದ ಚಾಣಾಕ್ಷರೆಂದೆ ಗುರುತಿಸಿಕೊಂಡು ಜನಪ್ರೀಯತೆ ಗಳಿಸಿದವರು. 1999ರಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಇದಕ್ಕೂ ಮುನ್ನ ಕೂಡ ಅಲ್ಪಾವಧಿಗೆ ಪ್ರಧಾನಿಗಳಾಗಿ, ರಾಷ್ಟ್ರನಾಯಕರಾಗಿ ಗುರಿತಿಸಿಕೊಂಡು 1996 ಮತ್ತು 1998ರಲ್ಲಿ ಎರಡು ಬಾರಿ ಅಲ್ಪಾವಧಿಗೆ ಪ್ರಧಾನಿಯಾಗಿದ್ದರು.
1924ರಲ್ಲಿ ಗ್ವಾಲಿಯರ್ನಲ್ಲಿ ಜನಿಸಿದ ಅಟಲ್ ಬಿಹಾರಿ ವಾಜಪೇಯಿ ತಮ್ಮ ಯೌವನದಲ್ಲಿ ಮಾರ್ಕ್ಸ್ ವಾದಿಯಾಗಿದ್ದರು. ಕಾಲಾಂತರದಲ್ಲಿ ರಾಷ್ಟ್ರೀಯವಾದಿಯಾಗಿ, ಆರ್ ಎಸ್ ಎಸ್ ಸೇರಿಕೊಂಡರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಇವರು, 1951ರಲ್ಲಿ ಜನಸಂಘ ಸ್ಥಾಪನೆಯಲ್ಲಿ ಕಾರಣೀಕರ್ತರಾಗಿದ್ದರು. 1977ರಲ್ಲಿ ತುರ್ತುಪರಿಸ್ಥಿತಿ ವೇಳೆ ಜೈಲಿಗೆ ತಳ್ಳಲ್ಪಟ್ಟ ಇವರು, 1979ರಲ್ಲಿ ಚುನಾವಣೆಯಲ್ಲಿ ಜಯಗಳಿಸಿ ಕೇಂದ್ರ ಸರ್ಕಾರದ ಬಾಹ್ಯ ವ್ಯವಹಾರಗಳ ಮಂತ್ತಿ, ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು. ಆದರೆ ಆಂತರಿಕ ಜಗಳಗಳಿಂದಾಗಿ ಸರ್ಕಾರ ಪತನಗೊಂಡಿತು.
ವಿಭಿನ್ನ ಆಲೋಚನೆಯ, ದಿಟ್ಟ ನಡೆಗಳ ಅಟಲ್ ಶಾಂತಿಪ್ರೀಯರು. ಅದಕ್ಕಾಗಿ ಅವರು ಪಾಕ್ ಜತೆಗಿನ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ದಿಟ್ಟ ಜೆಜ್ಜೆ ಇಟ್ಟರು. ಗುಜರಾತ್ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಮೋದಿ ಮತ್ತು ಪಕ್ಷದಿಂದ ದೂರ ಉಳಿದರು. ಕವಿಗಳಾಗಿದ್ದ ಅವರು ಅತ್ಯುತ್ತಮ ಕವನಗಳನ್ನು ರಚಿಸಿದ್ದಾರೆ.
ತಮ್ಮ 93ನೇ ವಯಸ್ಸಿನಲ್ಲಿ 2018ರಲ್ಲಿ ಧೀರ್ಘಕಾಲದ ಕಾಯಿಲೆಯಿಂದ ಅವರು ಮೃತಪಟ್ಟರು. ಆಗ ಅಧಿಕಾರದಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಟಲ್ ಅವರಿಗೆ ದೇಶದ ಪರಮೋಚ್ಛ ಗೌರವವಾದ ಭಾರತ ರತ್ನ ನೀಡಿ ಗೌರವಿಸಿದರು.
| ಪೂರ್ಣ ಹೆಸರು | ಅಟಲ್ ಬಿಹಾರಿ ವಾಜಪೇಯಿ |
| ಜನ್ಮ ದಿನಾಂಕ | 25 Dec 1924 |
| ಮೃತಪಟ್ಟ ದಿನಾಂಕ | 16 Aug 2018 (ವಯಸ್ಸು 93) |
| ಹುಟ್ಟಿದ ಸ್ಥಳ | ಗ್ವಾಲಿಯರ್ ಮಧ್ಯಪ್ರದೇಶ |
| ಪಕ್ಷದ ಹೆಸರು | Bharatiya Janata Party |
| ವಿದ್ಯಾರ್ಹತೆ | |
| ಉದ್ಯೋಗ | ಪತ್ರಕರ್ತರು, ಸಾಮಾಜಿಕ ಸೇವಕರು, ರಾಜಕಾರಣಿ |
| ತಂದೆಯ ಹೆಸರು | ಶ್ರೀ ಕೃಷ್ಣ ಬಿಹಾರಿ ವಾಜಪೇಯಿ |
| ತಾಯಿಯ ಹೆಸರು | ಶ್ರೀ ಕೃಷ್ಣಾದೇವಿ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.