ಮುಖ್ಯಪುಟ
 » 
ಅರವಿಂದ್ ಬೆಲ್ಲದ್

ಅರವಿಂದ್ ಬೆಲ್ಲದ್

ಅರವಿಂದ್ ಬೆಲ್ಲದ್

ಅರವಿಂದ್ ಬೆಲ್ಲದ್ ಒಬ್ಬ ಉದ್ಯಮಿ ಹಾಗೂ ರಾಜಕಾರಣಿ. ಅವರು ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಾಗಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಅರವಿಂದ್ ಬೆಲ್ಲದ್ ಜೀವನ ಚರಿತ್ರೆ

ಅರವಿಂದ್ ಬೆಲ್ಲದ್ ಒಬ್ಬ ಉದ್ಯಮಿ ಹಾಗೂ ರಾಜಕಾರಣಿ. ಅವರು ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಾಗಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸಹೋದರರಲ್ಲೇ ಕಿರಿಯರಾಗಿದ್ದ ಅರವಿಂದ್ ಕ್ರಿಯಾಶೀಲ ಹಾಗೂ ವಿದ್ಯಾವಂತ ವಿದ್ಯಾರ್ಥಿ ಎನಿಸಿದ್ದರು. ಕರ್ನಾಟಕದ ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ ಅವರು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದರು. ಫ್ರಾನ್ಸ್‌ನ INSEAD ನಿಂದ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದರು.

ಅರವಿಂದ್ ಬೆಲ್ಲದ್ ಯಶಸ್ವಿ ಉದ್ಯಮಿಯಾಗಿದ್ದು, ಸಕ್ಕರೆ ಕಾರ್ಖಾನೆ ಮತ್ತು ಇತರ ಅನೇಕ ಉದ್ಯಮಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. 2013ರಲ್ಲಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2018ರ ಚುನಾವಣೆಯಲ್ಲೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಬೆಲ್ಲದ್ ಒಬ್ಬ ಪ್ರಗತಿಪರ ರಾಜಕಾರಣಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ವಿಶಿಷ್ಟ ವಿಚಾರಗಳು ಮತ್ತು ಕಲ್ಯಾಣ ಅಭಿಯಾನಗಳಿಗೆ ಜನಪ್ರಿಯರಾಗಿದ್ದರು. ನಮ್ಮ ಮನೆ - ನಮ್ಮ ಬೆಲ್ಲದ್ ಮತ್ತು ನಮ್ಮ ಕೃಷಿ, ನಮ್ಮ ಬೆಲ್ಲದ್ ಅವರಂತಹ ಅಭಿಯಾನಗಳಿಗೆ ತಮ್ಮ ಕ್ಷೇತ್ರ ಮತ್ತು ರಾಜ್ಯದ ಎಲ್ಲಾ ಮೂಲೆಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಮತ್ತಷ್ಟು ಓದು
By Moumi Majumdar Updated: Tuesday, July 27, 2021, 09:15:22 AM [IST]

ಅರವಿಂದ್ ಬೆಲ್ಲದ್ ವಯಕ್ತಿಕ ಜೀವನ

ಪೂರ್ಣ ಹೆಸರು ಅರವಿಂದ್ ಬೆಲ್ಲದ್
ಜನ್ಮ ದಿನಾಂಕ 03 Aug 1969 (ವಯಸ್ಸು 54)
ಹುಟ್ಟಿದ ಸ್ಥಳ ಬೆಲ್ಲದ್, ಬಾಗೇವಾಡಿ, ಬೆಳಗಾವಿ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ B.E, PGDM
ಉದ್ಯೋಗ ಉದ್ಯಮಿ, ರಾಜಕಾರಣಿ
ತಂದೆಯ ಹೆಸರು ಚಂದ್ರಕಾಂತ್ ಬೆಲ್ಲದ್
ತಾಯಿಯ ಹೆಸರು ಲೀಲಾವತಿ ಸಿ ಬೆಲ್ಲದ್
ಧರ್ಮ ಹಿಂದು
ವೆಬ್‌ಸೈಟ್ http://arvindbellad.com/
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಅರವಿಂದ್ ಬೆಲ್ಲದ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹91.76 CRORE
ಆಸ್ತಿ:₹106.57 CRORE
ಸಾಲಸೋಲ: ₹14.81 CRORE

ಅರವಿಂದ್ ಬೆಲ್ಲದ್ ಕುರಿತು ಆಸಕ್ತಿದಾಯಕ ಸಂಗತಿಗಳು

ಅರವಿಂದ್ ಭಾರತದ ಉನ್ನತ ಶಿಕ್ಷಣ ಪಡೆದ ರಾಜಕಾರಣಿಗಳಲ್ಲಿ ಒಬ್ಬರು. ಅವರು ಎಂಜಿನಿಯರಿಂಗ್ ಪದವೀಧರ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಬೆಲ್ಲದ್ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕಿಂಡರ್ ಗಾರ್ಡನ್ ಅನ್ನು ಪರಿಚಯಿಸಿದರು.

ಅರವಿಂದ್ ಬೆಲ್ಲದ್ ರಾಜಕೀಯ ಟೈಮ್‌ಲೈನ್

2018
  • ಅರವಿಂದ್ ಬೆಲ್ಲದ್ ಹುಬ್ಬಳ್ಳಿ-ಧಾರವಾಡದ ಬಿಜೆಪಿ ಶಾಸಕರಾಗಿ ಸತತ ಗೆಲುವು ಸಾಧಿಸಿದರು.
2013
  • ಅರವಿಂದ್ ಬೆಲ್ಲದ್ ಕರ್ನಾಟಕದ ವಿಧಾನಸಭೆಗೆ ಹುಬ್ಬಳ್ಳಿ-ಧಾರವಾಡದ ಬಿಜೆಪಿ ಶಾಸಕರಾಗಿ ಪಾದಾರ್ಪಣೆ ಮಾಡಿದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X