ಮೂಲತಃ ನ್ಯಾಯವಾದಿಯಾಗಿರುವ ಅರುಣ ಜೈಟ್ಲಿ ನಂತರ ರಾಜಕೀಯಕ್ಕೆ ಬಂದರು. ಪ್ರಸ್ತುತ ನರೇಂದ್ರ ಮೋದಿಯವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವ ಇವರು, ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಗಳ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ರಾಜಕೀಯಕ್ಕೆ ಬರುವ ಮುನ್ನ ಸುಪ್ರೀಂ ಕೋರ್ಟಿನಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡಿದರು. ದೆಹಲಿ ಹೈಕೋರ್ಟಿನಿಂದ ಹಿರಿಯ ನ್ಯಾಯವಾದಿಯಾಗಿ ಇವರು ನಿಯೋಜಿಸಲ್ಪಟ್ಟಿದ್ದರು. 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಅರುಣ ಜೈಟ್ಲಿ ಅದರ ವಿರುದ್ಧ ನಡೆದ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆಗ ಯುವ ಮೋರ್ಚಾ ಸಂಚಾಲಕರಾಗಿದ್ದ ಇವರನ್ನು ಅಂಬಾಲಾ ಜೈಲು ಹಾಗೂ ದೆಹಲಿಯ ತಿಹಾರ ಜೈಲುಗಳಲ್ಲಿ ಬಂಧಿಸಿ ಇಡಲಾಗಿತ್ತು. ಈ ಮುಂಚೆ ವಾಜಪೇಯಿಯವರ ಸಚಿವ ಸಂಪುಟದಲ್ಲಿ ಸಹ ಜೈಟ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಮೋದಿ ಅವರ ಸಂಪುಟದಲ್ಲಿ ರಕ್ಷಣಾ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ 2009 ರಿಂದ 2014 ರವರೆಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಿದ್ದಾರೆ.
| ಪೂರ್ಣ ಹೆಸರು | ಅರುಣ ಜೈಟ್ಲಿ |
| ಜನ್ಮ ದಿನಾಂಕ | 28 Dec 1952 |
| ಮೃತಪಟ್ಟ ದಿನಾಂಕ | 24 Aug 2019 (ವಯಸ್ಸು 66) |
| ಹುಟ್ಟಿದ ಸ್ಥಳ | ಹೊಸದಿಲ್ಲಿ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate Professional |
| ಉದ್ಯೋಗ | ಸುಪ್ರೀಂ ಕೋರ್ಟಿನಲ್ಲಿ ಹಿರಿಯ ನ್ಯಾಯವಾದಿ |
| ತಂದೆಯ ಹೆಸರು | ಮಹಾರಾಜ ಕಿಶನ್ ಜೈಟ್ಲಿ |
| ತಾಯಿಯ ಹೆಸರು | ಶ್ರೀಮತಿ ರತನ ಪ್ರಭಾ ಜೈಟ್ಲಿ |
| ಅವಲಂಬಿತರ ಹೆಸರು | ಸಂಗೀತಾ ಡೋಗ್ರಾ |
| ಅವಲಂಬಿತರ ಉದ್ಯೋಗ | N/A |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
| ವೆಬ್‌ಸೈಟ್ | https://www.arunjaitley.com/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.