ಕರ್ನಾಟಕದ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೊಂದಿಗೆ ಸಮಕಾಲೀನವಾಗಿ ರಾಜಕಾರಣದ ಒಡನಾಡಿಯಾಗಿ ಬೆಳೆದವರು ಆರಗ ಜ್ಞಾನೇಂದ್ರ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಶಾಸಕರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಭಾವಿ ಗೃಹ ಖಾತೆ ಸಚಿವರು.
ಸುಮಾರು 45 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ ಶಿಸ್ತಿನ ಸಿಪಾಯಿ. ರಾಜಕೀಯ ಏಳುಬೀಳು ಕಂಡರೂ ಎಂದೂ ಸಹ ಪಕ್ಷ ಹಾಕಿದ ಗೆರೆ ದಾಟದ ನಾಯಕ. 9 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 5 ಬಾರಿ ಸೋತವರು ಆರಗ ಜ್ಞಾನೇಂದ್ರ.
ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂಬುದನ್ನು ಸುಳ್ಳಾಗಿಸಿದ ಸರಳ ವ್ಯಕ್ತಿತ್ವದ ನಾಯಕ. 2013ರ ವಿಧಾನಸಭೆ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಸೋತಿದ್ದರು. ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಕಿಮ್ಮನೆ ಸೋಲಿಸಿ ಆರಗ ಜ್ಞಾನೇಂದ್ರ 4ನೇ ಬಾರಿಗೆ ಶಾಸಕರಾದರು.
ವಿದ್ಯಾರ್ಥಿಯಾಗಿದ್ದಾಗಲೇ ಆರ್‌ಎಸ್‌ಎಸ್ ಸಂಪರ್ಕಕ್ಕೆ ಬಂದ ಆರಗ ಜ್ಞಾನೇಂದ್ರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 6 ತಿಂಗಳು ಸೆರೆವಾಸವನ್ನು ಸಹ ಜ್ಞಾನೇಂದ್ರ ಅನುಭವಿಸಿದ್ದಾರೆ. ಆಗ ಜೈಲುವಾಸ ಅನುಭವಿಸಿದರು ಈಗ ಗೃಹ ಖಾತೆಯ ಸಚಿವರು.
Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.