ಕರ್ನಾಟಕದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಸ್ತುತ ಸಂಸದರಾಗಿರುವ ಅನಂತಕುಮಾರ ಹೆಗಡೆ ಕೇಂದ್ರದ ಕೌಶಲಾಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಖಾತೆ ರಾಜ್ಯ ದರ್ಜೆ ಸಚಿವರಾಗಿದ್ದಾರೆ. 1996 ರಲ್ಲಿ ಪ್ರಥಮ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ನಂತರ ಒಟ್ಟು 5 ಬಾರಿ ಇವರು ಉತ್ತರ ಕನ್ನಡ ಕ್ಷೇತ್ರದಿಂದ ಸಂಸದರಾಗಿ ಗೆಲುವು ಸಾಧಿಸಿದ್ದಾರೆ. 1999ರಲ್ಲಿ ಮಾತ್ರ ಒಂದು ಬಾರಿ ಕಾಂಗ್ರೆಸ್ಸಿನ ಮಾರ್ಗರೇಟ್ ಆಳ್ವ ಅವರ ಎದುರು ಪರಾಭವಗೊಂಡಿದ್ದರು. ತದನಂತರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ತಮ್ಮ ಪಾರಮ್ಯ ಸಾಧಿಸುತ್ತಲೇ ಬಂದಿದ್ದಾರೆ. ಆಗಾಗ ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಾರಣ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಹಿಂದುತ್ವ ವಿಚಾರಧಾರೆಯ ಪ್ರಬಲ ಪ್ರತಿಪಾದಕರಾಗಿರುವ ಅನಂತಕುಮಾರ, ಬಲ ಪಂಥೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸದಸ್ಯರಾಗಿದ್ದಾರೆ. ಶಿರಸಿಯ ಎಂಎಂ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಕಾಲೇಜಿನ ಆರಂಭದ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದ ಇವರು ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರ್ಪಡೆಯಾದರು.
| ಪೂರ್ಣ ಹೆಸರು | ಅನಂತಕುಮಾರ ಹೆಗಡೆ |
| ಜನ್ಮ ದಿನಾಂಕ | 20 May 1968 (ವಯಸ್ಸು 57) |
| ಹುಟ್ಟಿದ ಸ್ಥಳ | ಶಿರಸಿ, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | 12th Pass |
| ಉದ್ಯೋಗ | ಕೃಷಿಕ, ತೋಟಗಾರಿಕೆ, ವ್ಯಾಪಾರೋದ್ಯಮಿ, ಸಾಮಾಜಿಕ ಕಾರ್ಯಕರ್ತ |
| ತಂದೆಯ ಹೆಸರು | ಶ್ರೀ ದತ್ತಾತ್ರೆಯ ಹೆಗಡೆ |
| ತಾಯಿಯ ಹೆಸರು | ಶ್ರೀಮತಿ ಲಲಿತಾ ಹೆಗಡೆ |
| ಅವಲಂಬಿತರ ಹೆಸರು | ಶ್ರೀಮತಿ ಶ್ರೀರೂಪಾ ಹೆಗಡೆ |
| ಅವಲಂಬಿತರ ಉದ್ಯೋಗ | ಹೌಸ್ ವೈಫ್, ಕೃಷಿಕ, ವ್ಯಾಪಾರ |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.