Get Updates
Get notified of breaking news, exclusive insights, and must-see stories!

ಅನಂತ ಕುಮಾರ

ಅನಂತ ಕುಮಾರ
ಅನಂತ್ ಕುಮಾರ ದೂರದೃಷ್ಠಿಯ ರಾಜಕೀಯ ನೇತಾರ, ಸಾಮಾಜಿಕ ಕಾರ್ಯಕರ್ತ, ಅತ್ಯುತ್ತಮ ಕೈಗಾರಿಕೋದ್ಯಮಿ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಹಾಗೂ 14ನೇ ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 1996 ರಿಂದ ಆಯ್ಕೆಯಾದ ಸಂಸದ.
By Shalini | Monday, February 8, 2021, 12:48:30 PM [IST]

ಅನಂತ ಕುಮಾರ ಜೀವನ ಚರಿತ್ರೆ

ಅನಂತ್ ಕುಮಾರ ದೂರದೃಷ್ಠಿಯ ರಾಜಕೀಯ ನೇತಾರ, ಸಾಮಾಜಿಕ ಕಾರ್ಯಕರ್ತ, ಅತ್ಯುತ್ತಮ ಕೈಗಾರಿಕೋದ್ಯಮಿ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಹಾಗೂ 14ನೇ ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 1996 ರಿಂದ ಆಯ್ಕೆಯಾದ ಸಂಸದ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಅನಂತ್ ಕುಮಾರ್ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಮೇ 2014ರವರೆಗೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಜುಲೈ 2016ರವರೆಗೆ ಸೇವೆ ಸಲ್ಲಿಸಿದ್ದಾರೆ.

ಮತ್ತಷ್ಟು ಓದು

ಅನಂತ ಕುಮಾರ ವಯಕ್ತಿಕ ಜೀವನ

ಪೂರ್ಣ ಹೆಸರು ಅನಂತ ಕುಮಾರ
ಜನ್ಮ ದಿನಾಂಕ 22 Jul 1959
ಮೃತಪಟ್ಟ ದಿನಾಂಕ 12 Nov 2018 (ವಯಸ್ಸು 59)
ಹುಟ್ಟಿದ ಸ್ಥಳ ಬೆಂಗಳೂರು (ಕರ್ನಾಟಕ)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ಸಾಮಾಜಿಕ ಕಾರ್ಯಕರ್ತ, ರಾಜಕಾರಣಿ
ತಂದೆಯ ಹೆಸರು ಶ್ರೀ ಎಚ್, ಎನ್. ನಾರಾಯಣ ಶಾಸ್ತ್ರೀ
ತಾಯಿಯ ಹೆಸರು ಶ್ರೀಮತಿ ಗಿರಿಜಾ ಎನ್ ಶಾಸ್ತ್ರೀ
ಅವಲಂಬಿತರ ಹೆಸರು ತೇಜಸ್ವಿನಿ ಅನಂತ್ ಕುಮಾರ
ಅವಲಂಬಿತರ ಉದ್ಯೋಗ ಸಾಮಾಜಿಕ ಸೇವೆ
ಮಕ್ಕಳು 2 ಪುತ್ರಿ(ಯರು)
ವೆಬ್‌ಸೈಟ್ http://ananth.org/

ಅನಂತ ಕುಮಾರ ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.23 CRORE
ಆಸ್ತಿ
₹4.52 CRORE
ಸಾಲಸೋಲ
₹28.83 LAKHS

ಅನಂತ ಕುಮಾರ ಕುರಿತು ಆಸಕ್ತಿದಾಯಕ ಸಂಗತಿಗಳು

ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಅನ್ನಪೂರ್ಣ, ಆಟ-ಪಾಠ ಇತರ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ಸದಾ ವರದಿ ಮಾಡುತ್ತಲೇ ಇರುವ ಮಟ್ಟಿಗೆ ಅವರು ಕ್ರಿಯಾಶೀಲರಾಗಿದ್ದರು.
ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ರಾಜಕಾರಣ ಮತ್ತು ಶಿಕ್ಷಣ ವಿಷಯಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ವಾಕ್ಚಾತುರ್ಯ ಹೊಂದಿದ್ದರು. ಓದು, ಬರಹ, ಕಥೆ-ಕವನ, ಪ್ರವಾಸ ಅವರ ಮೆಚ್ಚಿನ ಹವ್ಯಾಸಗಳಾಗಿದ್ದವು. ಪ್ರವಾಸಿ ತಾಣಗಳಿಗೆ ನಿರಂತರ ಭೇಟಿ, ನಕ್ಷತ್ರಗಳ ವೀಕ್ಷಣೆ ಹಾಗೂ ಮಕ್ಕಳೊಂದಿಗೆ ಕಾಲಕಳೆಯುವ ಮೂಲಕ ಅವರು ಮನರಂಜನೆ ಪಡೆಯುತ್ತಿದ್ದರು. ಕ್ರಿಕೆಟ್, ಬ್ಯಾಡ್ಮಿಂಟನ್, ಚೆಸ್ ಮತ್ತು ಟೇಬಲ್ ಟೆನ್ನಿಸ್ ಆಟಗಳಲ್ಲಿ ಆಸಕ್ತಿ ಹೊಂದಿದ್ದರು.

ಅನಂತ ಕುಮಾರ ಸಾಧನೆಗಳು

ಶೇ.100ರಷ್ಟು ಬೇವಿನ ಹೊದಿಕೆಯ ರಸಗೊಬ್ಬರ ಉತ್ಪಾದನೆ ಹಾಗೂ ಅದನ್ನು ಸಮರ್ಪಕವಾಗಿ ರೈತರಿಗೆ ತಲುಪಿಸುವಲ್ಲಿ ಅವರು ಕೈಗೊಂಡ ಕ್ರಮಗಳು ಭಾರತೀಯ ರಸಗೊಬ್ಬರ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿತು. ಪರಿಸರ ಸ್ನೇಹಿಯಾದ ಮಹಿಳಾ ಆರೋಗ್ಯ ಪ್ಯಾಡ್ ಸುವಿಧಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಹಿಳಾ ಆರೊಗ್ಯಕ್ಕೆ ಒತ್ತು ನೀಡಿದರು. ೫ ಜೂನ್ ೨೦೧೮ ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಅಲ್ಲದೇ ಬಿಜೆಪಿಗೆ ಬಹುಮತ ಇಲ್ಲದ ಸಂದರ್ಭದಲ್ಲಿ ಜಿಎಸ್ಟಿ ಮಸೂದೆಗೆ ಅಂಗೀಕಾರ ಪಡೆಯುವಲ್ಲಿ ಮಹತ್ತರ ಪಾತ್ರ ವಹಿಸಿದರು. ಜೂನ್ 1, 2018ರಂದು ದೇಶಾದ್ಯಂತ 99 ಇದ್ದ ಜನೌಷಧಿ ಕೇಂಧ್ರಗಳ ಸಂಖ್ಯೆಯನ್ನು 3600ಕ್ಕೆ ಹೆಚ್ಚಿಸಿದರು. ಇದರಿಂದಾಗಿ ಸಾಮಾನ್ಯ ಜನರು ಔಷಧಿಗಾರಿ ವೆಚ್ಚ ಮಾಡುತ್ತಿದ್ದ ಸುಮಾರು 500 ಕೋಟಿ ಹಣ ಜನರಲ್ಲೇ ಉಳಿಯುವಂತಾಯಿತು. ಹೃದಯ ಚಿಕಿತ್ಸೆಗಾಗಿ ಅಳವಡಿಸುತ್ತಿದ್ದ ಸ್ಟಂಟ್ ಗಳ ಬೆಲೆಯಲ್ಲಿ ಇಳಿಮುಖ ಮಾಡಿ ಜನಾರೋಗ್ಯ ಮಹತ್ವದ ಕೊಡುಗೆ ನೀಡಿದರು. ನರೇಂದ್ರ ಮೋದಿ ಸರ್ಕಾರದ ಪ್ರತಿನಿಧಿಯಾಗಿ ಅಮೆರಿಕಕ್ಕೆ ಭೇಟಿ, 2008-10 ಲ್ಲಿ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಸೂಚಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+