Get Updates
Get notified of breaking news, exclusive insights, and must-see stories!

ಆನಂದಿಬೆನ್ ಎಂ. ಪಟೇಲ್

ಆನಂದಿಬೆನ್ ಎಂ. ಪಟೇಲ್
ಆನಂದಿಬೆನ್ ಪಟೇಲ್ 1941ರಲ್ಲಿ ಗುಜರಾತ ರಾಜ್ಯದ ಮೆಹಸಾನಾ ಜಿಲ್ಲೆಯ ವಿಜಾಪುರ ತಾಲೂಕ, ಖಾರೋಡ ಗ್ರಾಮದಲ್ಲಿ ಜನಿಸಿದರು. ಅಲ್ಲಿ ಅವರ ತಂದೆ ಜಿತನ್ ಬಾಯಿ ಪಟೇಲ್ ಶಿಕ್ಷಕರಾಗಿದ್ದು, ಅವರು ಲಕ್ಷ್ಮೀ (ಸಂಪತ್ತಿನ ದೇವತೆ) ಅಂದರೆ ಹಣಕ್ಕಿಂತ ವಿದ್ಯೆಗೆ (ಜ್ಞಾನದ ದೇವತೆ) ಹೆಚ್ಚು ಆದ್ಯತೆ ನೀಡುತ್ತಿದ್ದರು.
By Rashmi | Monday, February 8, 2021, 12:45:19 PM [IST]

ಆನಂದಿಬೆನ್ ಎಂ. ಪಟೇಲ್ ಜೀವನ ಚರಿತ್ರೆ

ಆನಂದಿಬೆನ್ ಪಟೇಲ್ 1941ರಲ್ಲಿ ಗುಜರಾತ ರಾಜ್ಯದ ಮೆಹಸಾನಾ ಜಿಲ್ಲೆಯ ವಿಜಾಪುರ ತಾಲೂಕ, ಖಾರೋಡ ಗ್ರಾಮದಲ್ಲಿ ಜನಿಸಿದರು. ಅಲ್ಲಿ ಅವರ ತಂದೆ ಜಿತನ್ ಬಾಯಿ ಪಟೇಲ್ ಶಿಕ್ಷಕರಾಗಿದ್ದು, ಅವರು ಲಕ್ಷ್ಮೀ (ಸಂಪತ್ತಿನ ದೇವತೆ) ಅಂದರೆ ಹಣಕ್ಕಿಂತ ವಿದ್ಯೆಗೆ (ಜ್ಞಾನದ ದೇವತೆ) ಹೆಚ್ಚು ಆದ್ಯತೆ ನೀಡುತ್ತಿದ್ದರು. ಆನಂದಿಬೆನ್ ಪಟೇಲ್ ಶಿಕ್ಷಕಿಯಾಗಿ, ರಾಜಕಾರಣಿಯಾಗಿ, ಗುಜರಾತ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು. 1987ರಿಂದ ಇವರು ಬಿಜೆಪಿ ಸದಸ್ಯರಾಗಿದ್ದು, 2002ರಿಂದ 2007ರವರೆಗೆ ಶಿಕ್ಷಣ ಸಚಿವರಾಗಿದ್ದರು. ಮಧ್ಯಪ್ರದೇಶ, ಛತ್ತಿಸಗಡ ನಂತರ 20 ಜುಲೈ 2019ರಿಂದ ಉತ್ತರ ಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ಓದು

ಆನಂದಿಬೆನ್ ಎಂ. ಪಟೇಲ್ ವಯಕ್ತಿಕ ಜೀವನ

ಪೂರ್ಣ ಹೆಸರು ಆನಂದಿಬೆನ್ ಎಂ. ಪಟೇಲ್
ಜನ್ಮ ದಿನಾಂಕ 21 Nov 1941 (ವಯಸ್ಸು 84)
ಹುಟ್ಟಿದ ಸ್ಥಳ ಖಾರೋಡ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ಶಿಕ್ಷಕಿ, ರಾಜಕಾರಣಿ
ತಂದೆಯ ಹೆಸರು ಜೀತನ್ ಬಾಯಿ ಪಟೇಲ್
ತಾಯಿಯ ಹೆಸರು ಮೆನಾಬೆನ್ ಪಟೇಲ್
ಅವಲಂಬಿತರ ಹೆಸರು ಮಫತ್ ಲಾಲ್ ಪಟೇಲ್
ಅವಲಂಬಿತರ ಉದ್ಯೋಗ ಉದ್ಯಮಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು

ಆನಂದಿಬೆನ್ ಎಂ. ಪಟೇಲ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹1.82 CRORE
ಆಸ್ತಿ
₹1.82 CRORE
ಸಾಲಸೋಲ
N/A

ಆನಂದಿಬೆನ್ ಎಂ. ಪಟೇಲ್ ಕುರಿತು ಆಸಕ್ತಿದಾಯಕ ಸಂಗತಿಗಳು

ಗುಜರಾತ ರಾಜ್ಯದ ಮೊದಲ ಮಹಿಳಾ ಸಿಎಂ ಎಂಬ ಗೌರವಕ್ಕೆ ಭಾಜನರಾಗಿರುವ ಆನಂದಿಬೆನ್ ಪಟೇಲ್ ಎನ್.ಎಂ. ಹೈಸ್ಕೂಲ್ ನಲ್ಲಿ ಕೇವಲ ಮೂರು ಹೆಣ್ಣುಮಕ್ಕಳು ಶಾಲೆಗೆ ಪ್ರವೇಶ ಪಡೆದಿದ್ದು ಅದರಲ್ಲಿ ಆನಂದಿಬೆನ್ ಕೂಡ ಒಬ್ಬರು. ಕ್ರೀಡೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಇವರು ತಮ್ಮ ಹೈಸ್ಕೂಲ್ ಅಧ್ಯಯನ ವೇಳೆ ಮೂರು ವರ್ಷ ಕಾಲ ಚಾಂಪಿಯನ್ ಪಟ್ಟ ಉಳಿಸಿಕೊಂಡಿದ್ದರು. ಇದಕ್ಕಾಗಿ ಅವರಿಗೆ ಮೆಹ್ಸಾನಾ ಜಿಲ್ಲೆಯ ವೀರ್ ಬಾಲಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಮಹಿಳಾ ಉನ್ನತಿಗಾಗಿ ಸದಾ ಶ್ರಮಿಸುತ್ತಿದ್ದ ಆನಂದಿಬೆನ್ ಮಹಿಳಾ ವಿಕಾಸ ಗ್ರೂಪ್ ಗೆ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ 50ಕ್ಕೂ ಹೆಚ್ಚು ವಿಧವೆಯರಿಗೆ ವಿವಿಧ ಉದ್ಯೋಗಗಳ ಕುರಿತ ಕೌಶಲವನ್ನು ಕಲಿಸಿಕೊಟ್ಟರು.

ಆನಂದಿಬೆನ್ ಎಂ. ಪಟೇಲ್ ಸಾಧನೆಗಳು

1988ರಲ್ಲಿ ಅತ್ಯುತ್ತಮ ಶಿಕ್ಷಕಿ ಎಂಬ ರಾಜ್ಯಪಾಲರ ಪ್ರಶಸ್ತಿ ಪುರಸ್ಕಾರ ಗಳಿಸಿದರು. 1989ರಲ್ಲಿ ಶ್ರೇಷ್ಠ ಶಿಕ್ಷಕಿ ಎಂಬ ರಾಷ್ಟ್ರಪತಿ ಪದಕಕ್ಕೂ ಭಾಜನರಾದರು. 1999ರಲ್ಲಿ ಮುಂಬೈನ ಪಟೇಲ್ ಜಾಗೃತಿ ಮಂಡಳದ ವತಿಯಿಂದ ಸರ್ದಾರ ಪಟೇಲ ಪುರಸ್ಕಾರ, 2000ರಲ್ಲಿ ತಪೋಧನ ಬ್ರಾಹ್ಮಣ ವಿಕಾಸ ಮಂಡಳದಿಂದ ವಿದ್ಯಾ ಗೌರವ, 2005ರಲ್ಲಿ ಪಟೇಲ್ ಸಮುದಾಯದಿಂದ ಪಾಟೀಧಾರ ಶಿರೋಮಣಿ, ನರ್ಮದಾ ನವಗಂ ಜಲಾಶಯದಲ್ಲಿ ಮುಳುಗುತ್ತಿದ್ದ ಇಬ್ಬರು ಶಾಲಾ ಬಾಲಕಿಯರನ್ನು ಜೀವ ಸಹಿತ ಕಾಪಾಡಿದ್ದಕ್ಕಾಗಿ ಶೌರ್ಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+