Get Updates
Get notified of breaking news, exclusive insights, and must-see stories!

ಆನಂದ್ ಸಿಂಗ್

ಆನಂದ್ ಸಿಂಗ್
ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾದವರು ಆನಂದ್ ಸಿಂಗ್. ಹೊಸಪೇಟೆ (ವಿಜಯನಗರ) ಕ್ಷೇತ್ರದ ಶಾಸಕರು.
By Moumi Majumdar | Friday, August 26, 2022, 04:19:14 PM [IST]

ಆನಂದ್ ಸಿಂಗ್ ಜೀವನ ಚರಿತ್ರೆ

ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾದವರು ಆನಂದ್ ಸಿಂಗ್. ಹೊಸಪೇಟೆ (ವಿಜಯನಗರ) ಕ್ಷೇತ್ರದ ಶಾಸಕರು. 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆನಂದ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರವಾಸೋದ್ಯಮ ಖಾತೆ ಸಚಿವರು.

ಉದ್ಯಮಿಯಾಗಿ ಜನರಿಗೆ ಸಹಾಯ ಮಾಡುತ್ತಿದ್ದ ಆನಂದ್ ಸಿಂಗ್ ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. 2008, 2013, 2018 ಮತ್ತು 2019ರ ಉಪ ಚುನಾವಣೆ ಸೇರಿ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಬಳ್ಳಾರಿಯ ರೆಡ್ಡಿ ಸಹೋದರರು ರಾಜ್ಯ ರಾಜಕೀಯದಲ್ಲಿ ಉತ್ತುಂಗದಲ್ಲಿದ್ದ ಕಾಲವದು. ಆನಂದ್ ಸಿಂಗ್ ಸಮಾಜ ಸೇವೆ ಗುರುತಿಸಿದ್ದ ಜನಾರ್ದನ ರೆಡ್ಡಿ ಸೋಮಶೇಖರ ರೆಡ್ಡಿ, ಶ್ರೀರಾಮುಲು ಜೊತೆ ಆನಂದ್ ಸಿಂಗ್ ಮನೆಗೆ ಹೋಗಿ ಬಿಜೆಪಿಗೆ ಆಹ್ವಾನಿಸಿದ್ದರು.

2008ರ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದರು. ಗೆಲುವು ಸಾಧಿಸಿದ ಬಳಿಕ ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.

2013ರ ಚುನಾವಣೆಯಲ್ಲಿ 69,995 ಮತಗಳನ್ನು ಪಡೆದು ಜಯಗಳಿಸಿದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು 83,214 ಮತಗಳನ್ನು ಪಡೆದು ಮತ್ತೆ ಗೆಲುವು ಕಂಡರು.

ವಿಜಯನಗರ ಜಿಲ್ಲೆಯಾಗಬೇಕು ಎಂಬ ಬೇಡಿಕೆ, ಜಿಂದಾಲ್‌ಗೆ ಭೂಮಿ ಪರಭಾರೆ ಬೇಡಿಕೆ ಮುಂದಿಟ್ಟುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಬಿಜೆಪಿ ಸೇರಿ 2019ರ ಉಪ ಚುನಾವಣೆಯಲ್ಲಿ ಗೆದ್ದರು. ಯಡಿಯೂರಪ್ಪ ಸಂಪುಟದಲ್ಲಿ ಮೂಲಭೂತ ಸೌಕರ್ಯ, ಹಜ್ & ವಕ್ಫ್ ಸಚಿವರಾದರು. ಬಳಿಕ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾದರು.

ಮತ್ತಷ್ಟು ಓದು

ಆನಂದ್ ಸಿಂಗ್ ವಯಕ್ತಿಕ ಜೀವನ

ಪೂರ್ಣ ಹೆಸರು ಆನಂದ್ ಸಿಂಗ್
ಜನ್ಮ ದಿನಾಂಕ 03 Oct 1966 (ವಯಸ್ಸು 59)
ಹುಟ್ಟಿದ ಸ್ಥಳ ಹೊಸಪೇಟೆ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Corporation Pre-University College, Magadi Road Bangalore
ಉದ್ಯೋಗ ಉದ್ಯಮಿ, ರಾಜಕಾರಣಿ
ತಂದೆಯ ಹೆಸರು ಬಿ. ಎಸ್. ಪೃಥ್ವಿರಾಜ್ ಸಿಂಗ್
ತಾಯಿಯ ಹೆಸರು ಸುನಿತಾ ಬಾಯಿ
ಅವಲಂಬಿತರ ಹೆಸರು ಲಕ್ಷ್ಮಿ ಸಿಂಗ್
ಅವಲಂಬಿತರ ಉದ್ಯೋಗ ಉದ್ಯಮಿ, ಕೃಷಿಕರು
ಮಕ್ಕಳು 1 ಪುತ್ರ(ರು)
ಧರ್ಮ ಹಿಂದು
ಜಾತಿ ರಜಪೂತ
ವೆಬ್‌ಸೈಟ್ anandsinghbs.in

ಆನಂದ್ ಸಿಂಗ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹90.5 CRORE
ಆಸ್ತಿ
₹117.51 CRORE
ಸಾಲಸೋಲ
₹27.01 CRORE

ಆನಂದ್ ಸಿಂಗ್ ಕುರಿತು ಆಸಕ್ತಿದಾಯಕ ಸಂಗತಿಗಳು

ಪಕ್ಷದ ಚಿನ್ಹೆ ಹೊರತುಪಡಿಸಿ ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆ ಗೆಲ್ಲುವ ನಾಯಕ

ರಾಜ್ಯದ 31ನೇ ಜಿಲ್ಲೆ ವಿಜಯನಗರ ಅಸ್ತಿತ್ವಕ್ಕೆ ಬರಲು ಹೋರಾಡಿದ ನಾಯಕ

ಗಣಿ ಉದ್ಯಮಿಯಾಗಿದ್ದ ಆನಂದ್ ಸಿಂಗ್ ರಾಜಕೀಯಕ್ಕೆ ಕರೆತಂದಿದ್ದು ಜನಾರ್ದನ ರೆಡ್ಡಿ

ಆನಂದ್ ಸಿಂಗ್ ರಾಜಕೀಯ ಟೈಮ್‌ಲೈನ್

  • 2019: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ
  • 2018 : ಕಾಂಗ್ರೆಸ್ ಸೇರಿದ ಆನಂದ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ, ಗೆಲುವು
  • 2013: ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಗೆಲುವು
  • 2008: ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ 52,418 ಮತಗಳನ್ನು ಪಡೆದು ಗೆಲುವು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+