ಮುತ್ತುವೇಲು ಕರುಣಾನಿಧಿ ಅಳಗಿರಿ ಇವರು ಎಂ.ಕೆ. ಅಳಗಿರಿ ಎಂದೇ ಪ್ರಸಿದ್ಧರಾಗಿದ್ದಾರೆ. ಭಾರತದ ಖ್ಯಾತ ರಾಜಕಾರಣಿಯಾದ ಇವರು ತಮಿಳುನಾಡು ರಾಜ್ಯದವರಾಗಿದ್ದಾರೆ. ಜೂನ್ 13, 2009 ರಿಂದ ಮಾರ್ಚ್ 20, 2013 ರವರೆಗೆ ಅಳಗಿರಿ, ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಕೆ. ಅಳಗಿರಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಅವರ ಎರಡನೇ ಪತ್ನಿ ದಯಾಳು ಅಮ್ಮಾಳ್ ದಂಪತಿಯ ದ್ವಿತೀಯ ಸುಪುತ್ರರು. ಕರುಣಾನಿಧಿಯವರು 2014 ರವರೆಗೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಮುಖ್ಯಸ್ಥರೂ ಆಗಿದ್ದರು. ತನ್ನ ತಂದೆಯ ಮಾರ್ಗದರ್ಶನದಲ್ಲಿ ಬಹು ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯ ರಂಗಕ್ಕೆ ಕಾಲಿಟ್ಟ ಅಳಗಿರಿ, ರಾಜಕೀಯ ಜೀವನದಲ್ಲಿ ಮಾತ್ರ ಬಹಳಷ್ಟು ಸಮಸ್ಯೆ, ನೋವುಗಳನ್ನು ಅನುಭವಿಸಿದರು.
| ಪೂರ್ಣ ಹೆಸರು | ಅಳಗಿರಿ ಎಂ.ಕೆ. |
| ಜನ್ಮ ದಿನಾಂಕ | 30 Jan 1951 (ವಯಸ್ಸು 75) |
| ಹುಟ್ಟಿದ ಸ್ಥಳ | ಚೆನ್ನೈ |
| ಪಕ್ಷದ ಹೆಸರು | Dravida Munetra Kazhagam |
| ವಿದ್ಯಾರ್ಹತೆ | Graduate |
| ಉದ್ಯೋಗ | ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ |
| ತಂದೆಯ ಹೆಸರು | ಎಂ. ಕರುಣಾನಿಧಿ |
| ತಾಯಿಯ ಹೆಸರು | ದಯಾಳು ಅಮ್ಮಾಳ್ |
| ಅವಲಂಬಿತರ ಹೆಸರು | ಕಾಂತಿ ಅಳಗಿರಿ |
| ಅವಲಂಬಿತರ ಉದ್ಯೋಗ | ಹೌಸ್ ವೈಫ್ ಹಾಗೂ ಸಾಮಾಜಿಕ ಕಾರ್ಯಕರ್ತೆ |
| ಮಕ್ಕಳು | 1 ಪುತ್ರ(ರು) 2 ಪುತ್ರಿ(ಯರು) |
| ವೆಬ್‌ಸೈಟ್ | http://www.mkalagiri.com/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.