ಎ. ಟಿ. ರಾಮಸ್ವಾಮಿ

ಎ. ಟಿ. ರಾಮಸ್ವಾಮಿ
ಎ. ಟಿ.
By Moumi Majumdar | Tuesday, September 27, 2022, 04:41:05 PM [IST]

ಎ. ಟಿ. ರಾಮಸ್ವಾಮಿ ಜೀವನ ಚರಿತ್ರೆ

ಎ. ಟಿ. ರಾಮಸ್ವಾಮಿ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕರು. 2018ರ ಚುನಾವಣೆಯಲ್ಲಿ 85,064 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

2013ರ ಚುನಾವಣೆಯಲ್ಲಿಯೂ ಅರಕಲಗೂಡು ಕ್ಷೇತ್ರದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. 52,575 ಮತಗಳನ್ನು ಪಡೆದು ಕಾಂಗ್ರೆಸ್‌ನ ಎ. ಮಂಜು ವಿರುದ್ಧ ಸೋಲು ಕಂಡಿದ್ದರು.

ಎಂಎಸ್‌ಸಿ (ಎಜಿ) ವ್ಯಾಸಂಗ ಮಾಡಿರುವ ಎ. ಟಿ. ರಾಮಸ್ವಾಮಿ ಕೃಷಿಕರಾಗಿದ್ದರು. 1999ರಲ್ಲಿ ಅರಕಲಗೂಡು ಕ್ಷೇತ್ರದಲ್ಲಿ ಎ. ಮಂಜು ಬಿಜೆಪಿಯಿಂದ ಗೆದ್ದು ಶಾಸಕರಾದರು. ಕಾಂಗ್ರೆಸ್‌ನ ಎ. ಟಿ. ರಾಮಸ್ವಾಮಿ ಸೋಲುಕಂಡರು.

2004ರಲ್ಲಿ ರಾಮಸ್ವಾಮಿ ಜೆಡಿಎಸ್‌ನಿಂದ ಗೆದ್ದು ಬಂದರು. 2006ರಲ್ಲಿ ಸರ್ಕಾರ ಬೆಂಗಳೂರು ನಗರದ ಸುತ್ತಲೂ ಸರ್ಕಾರಿ ಭೂಮಿ ಒತ್ತುವರಿ ಪತ್ತೆ ಹಚ್ಚಲು ಎ. ಟಿ. ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಿತು.

ರಾಮಸ್ವಾಮಿ ಅವರು ಪ್ರಾಮಾಣಿಕತೆಯಿಂದ ತನಿಖೆ ನಡೆಸಿ 2007ರಲ್ಲಿ ವರದಿ ತಯಾರು ಮಾಡಿದರು. ಸುಮಾರು 40 ಸಾವಿರ ಕೋಟಿ ರೂ. ಮೌಲ್ಯದ ಭೂಮಿ ಒತ್ತುವರಿಯಾಗಿದೆ ಎಂದು ವರದಿ ಕೊಟ್ಟರು.

2008ರಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಎ. ಟಿ. ರಾಮಸ್ವಾಮಿ ಹೇಳಿದರು. ಆದರೆ, ಪಕ್ಷ, ಕಾರ್ಯಕರ್ತರ ಒತ್ತಡದಿಂದ ಕಣಕ್ಕಿಳಿದು ಸೋತರು. ಬಳಿಕ 2013ರ ಚುನಾವಣೆಯಲ್ಲಿಯೂ ಸೋತರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎ. ಟಿ. ರಾಮಸ್ವಾಮಿ ಬೆಂಗಳೂರಿನ ಟೌನ್‌ಹಾಲ್ ಮುಂದೆ ಭೂ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 39 ದಿನಗಳ ಧರಣಿ ನಡೆಸಿದರು. 2018ರ ಚುನಾವಣೆಯಲ್ಲಿ ಮತ್ತೆ ಗೆದ್ದು ಶಾಸಕರಾದರು.

ಮತ್ತಷ್ಟು ಓದು

ಎ. ಟಿ. ರಾಮಸ್ವಾಮಿ ವಯಕ್ತಿಕ ಜೀವನ

ಪೂರ್ಣ ಹೆಸರು ಎ. ಟಿ. ರಾಮಸ್ವಾಮಿ
ಜನ್ಮ ದಿನಾಂಕ 26 Nov 1951 (ವಯಸ್ಸು 74)
ಹುಟ್ಟಿದ ಸ್ಥಳ ಹಾಸನ
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ B. Sc in Agriculture in 1974
ಉದ್ಯೋಗ ಕೃಷಿಕ, ರಾಜಕಾರಣಿ
ತಂದೆಯ ಹೆಸರು ಎ. ಟಿ. ತಿಮ್ಮೇಗೌಡ
ತಾಯಿಯ ಹೆಸರು NA
ಅವಲಂಬಿತರ ಹೆಸರು Not Known
ಅವಲಂಬಿತರ ಉದ್ಯೋಗ Agriculture, Poultry farm, Horticulture
ಧರ್ಮ ಹಿಂದು
ಜಾತಿ ಒಕ್ಕಲಗ
ವೆಬ್‌ಸೈಟ್ NA

ಎ. ಟಿ. ರಾಮಸ್ವಾಮಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.08 CRORE
ಆಸ್ತಿ
₹4.08 CRORE
ಸಾಲಸೋಲ
N/A

ಎ. ಟಿ. ರಾಮಸ್ವಾಮಿ ಕುರಿತು ಆಸಕ್ತಿದಾಯಕ ಸಂಗತಿಗಳು

ಬೆಂಗಳೂರು ನಗರದ ಸುತ್ತಲೂ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ವಿವರವಾದ ವರದಿಯನ್ನು ತಯಾರು ಮಾಡಿದ್ದಾರೆ. ಎ. ಟಿ. ರಾಮಸ್ವಾಮಿ ವರದಿ ಎಂದೇ ಇದು ಪ್ರಸಿದ್ಧಿ ಪಡೆದಿದೆ.

ಎ. ಟಿ. ರಾಮಸ್ವಾಮಿ ರಾಜಕೀಯ ಟೈಮ್‌ಲೈನ್

  • 19999: ಚುನಾವಣೆಗೆ ಕಾಂಗ್ರೆಸ್‌ನಿಂದ ಕಣಕ್ಕೆ ಸೋಲು
  • 2018: 85,064 ಮತಗಳನ್ನು ಪಡೆದು ಜಯ
  • 2013: ವಿಧಾನಸಭೆ ಚುನಾವಣೆಯಲ್ಲಿ ಸೋಲು
  • 2008: ಚುನಾವಣೆಯಲ್ಲಿ ಸೋಲು
  • 2007: ಬೆಂಗಳೂರು ನಗರದ ಸುತ್ತಲೂ ಸರ್ಕಾರಿ ಭೂಮಿ ಒತ್ತುವರಿ ಕುರಿತು ವರದಿ ತಯಾರು
  • 2004: ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ, ಚುನಾವಣೆಯಲ್ಲಿ ಗೆಲುವು

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+