ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆ

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಒಂದು ವಾರ ಬಾಕಿ ಇರುವಾಗಲೇ ರಷ್ಯಾ ನಮ್ಮ ಮೇಲೆ ಸೈಬರ್ ದಾಳಿ ಮಾಡಿದೆ ಎಂದು ಫೆಡರಲ್ ಅಧಿಕಾರಿಗಳು ಆರೋಪಿಸಿದ್ದಾರೆ. ರಷ್ಯಾದ ನುರಿತ ಹ್ಯಾಕರ್‌ಗಳ ತಂಡವು ಅಮೆರಿಕದ ವಿವಿಧ ವಲಯಗಳನ್ನು ಟಾರ್ಗೆಟ್ ಮಾಡಿದೆ ಎಂದು ಅಮೆರಿಕ ಆರೋಪ ಮಾಡಿದೆ. ಈಗಾಗಲೇ ಅಮೆರಿಕದ ಮತದಾರರ ಮಾಹಿತಿ ಕದ್ದಿರುವ ಆರೋಪ ರಷ್ಯಾ ಮೂಲದ ಹ್ಯಾಕರ್‌ಗಳ ಮೇಲಿದೆ. ಈ ನಡುವೆ ಅಮೆರಿಕದ ನೀರು ಸರಬರಾಜು ಕೇಂದ್ರಗಳು, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನ ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗಿದೆ.

ಅಮೆರಿಕ ಹೇಳುವಂತೆ ಈಗಾಗಲೇ ಹತ್ತಾರು ರಾಜ್ಯಗಳಲ್ಲಿ ಸರ್ಕಾರಿ ಕಂಪ್ಯೂಟರ್‌ಗಳು ಹ್ಯಾಕ್ ಆಗಿವೆ. ಅದರಲ್ಲಿ ಬಹುತೇಕ ಕೃತ್ಯ ನಡೆದಿರುವುದು ಮತದಾರರ ಮಾಹಿತಿ ಕದಿಯಲು ಹಾಗೂ ಅಮೆರಿಕದ ಮೂಲ ಸೌಕರ್ಯ ಕ್ಷೇತ್ರ ಹಾಳು ಮಾಡಲು. 2016ರ ಚುನಾವಣೆಯಲ್ಲೂ ಇಂತಹದ್ದೇ ಆರೋಪ ಕೇಳಿಬಂದು ಟ್ರಂಪ್ ಮತ್ತು ರಷ್ಯಾ ಮಧ್ಯೆ ಸಂಬಂಧವಿದೆ ಎನ್ನಲಾಗಿತ್ತು. ಈಗ 2020ರ ಚುನಾವಣೆ ಸಂದರ್ಭದಲ್ಲೂ ಇಂತಹದ್ದೇ ಆರೋಪ ಮಾಡುತ್ತಿರುವುದು ರಷ್ಯಾ ಹಾಗೂ ಅಮೆರಿಕ ಸಂಬಂಧ ಮತ್ತಷ್ಟು ಹಳಸುವುದಕ್ಕೆ ಕಾರಣವಾಗಿದೆ.

ರಷ್ಯಾ ನಿರೀಕ್ಷೆ ಹುಸಿ, ಅಮೆರಿಕ ಕಡೆ ವಾಲಿದ ಅರ್ಮೇನಿಯರಷ್ಯಾ ನಿರೀಕ್ಷೆ ಹುಸಿ, ಅಮೆರಿಕ ಕಡೆ ವಾಲಿದ ಅರ್ಮೇನಿಯ

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಅಮೆರಿಕದ ಫೆಡರಲ್ ಅಧಿಕಾರಿಗಳು ರಷ್ಯಾ ವಿರುದ್ಧ ನೀಡಿರುವ ಹ್ಯಾಕಿಂಗ್ ಆರೋಪ ಪಟ್ಟಿಯಲ್ಲಿ ಕೇವಲ ಮೂಲ ಸೌಕರ್ಯ ಹಾಗೂ ಮತದಾರರ ಮಾಹಿತಿ ಟಾರ್ಗೆಟ್ ಮಾಡಿಲ್ಲ. ಇದರ ಜೊತೆಯಲ್ಲೇ ಅಮೆರಿಕದ ಪ್ರತಿಷ್ಠಿತ ಏರ್‌ಪೋರ್ಟ್‌ಗಳ ವೈ-ಫೈ ಕೂಡ ಹ್ಯಾಕ್ ಮಾಡಲಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ವೈ-ಫೈ ಹ್ಯಾಕ್ ಮಾಡಲಾಗಿದ್ದು, ಅಲ್ಲಿಗೆ ಬಂದಿದ್ದ ಅನಾಮಿಕ ವ್ಯಕ್ತಿಯೊಬ್ಬನ ಚಹರ ಪತ್ತೆಗಾಗಿ ಪ್ರಯತ್ನಿಸಲಾಗಿದೆ. ಹೀಗೆ ರಷ್ಯಾ ಹ್ಯಾಕರ್ಸ್ ಟೀಂ ಅಮೆರಿಕದ ಮೇಲೆ ವಿಷಕಾರುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಅಮೆರಿಕ ಚುನಾವಣೆ ಕೆಡಿಸುತ್ತಿದೆಯಾ ರಷ್ಯಾ..?

ಅಮೆರಿಕ ಚುನಾವಣೆ ಕೆಡಿಸುತ್ತಿದೆಯಾ ರಷ್ಯಾ..?

ಅಂದಹಾಗೆ ಹಿಂದಿನ ಆರೋಪಗಳು ಹಾಗೂ ಈಗ ಅಮೆರಿಕ ನೀಡಿರುವ ಆರೋಪ ಪಟ್ಟಿಯನ್ನು ತಾಳೆ ಹಾಕಿ ಹೇಳುವುದಾದರೆ, ರಷ್ಯಾ ನಾಯಕರಿಗೆ ಅಮೆರಿಕನ್ ಎಲೆಕ್ಷನ್ ಟಾರ್ಗೆಟ್ ಆದಂತಿದೆ. ಏಕೆಂದರೆ ಅಮೆರಿಕದ ಅಧಿಕಾರಿಗಳ ದಾಖಲೆಗಳ ಪ್ರಕಾರ ಅಮೆರಿಕದಲ್ಲಿ ಸೈಬರ್ ದಾಳಿ ಆರಂಭವಾಗಿರುವುದು ಕೆಲವೇ ತಿಂಗಳುಗಳ ಹಿಂದೆ. ಹೀಗಾಗಿ ಇದು ಅಮೆರಿಕ ಚುನಾವಣೆಯನ್ನೇ ಟಾರ್ಗೆಟ್ ಮಾಡಿ ಎಸಗಿರುವ ಕೃತ್ಯ ಎನ್ನುತ್ತಿದ್ದಾರೆ. ಈಗಾಗಲೇ ಕೊರೊನಾ ಕೂಪದಲ್ಲಿ ಬಿದ್ದು ನರಳುತ್ತಿರುವ ಅಮೆರಿಕನ್ನರಿಗೆ ಹ್ಯಾಕರ್ಸ್ ಬಿಗ್ ಶಾಕ್ ನೀಡಿದ್ದಾರೆ.

ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್‌ಗೆ ನಾಗರಿಕತ್ವ..!ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್‌ಗೆ ನಾಗರಿಕತ್ವ..!

ಬಿಡೆನ್ ಕೊಟ್ಟ ವಾರ್ನಿಂಗ್ ಏನು..?

ಬಿಡೆನ್ ಕೊಟ್ಟ ವಾರ್ನಿಂಗ್ ಏನು..?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಶತ್ರುದೇಶಗಳು ಹಸ್ತಕ್ಷೇಪ ಮಾಡಲು ಯತ್ನಿಸುತ್ತಿವೆ ಎಂದು ಡಿಬೆಟ್ ವೇಳೆ ಬಿಡೆನ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೆ ಅಮೆರಿಕ ತಂಟೆಗೆ ಬಂದವರಿಗೆ ಮುಂದಿದೆ ಮಾರಿಹಬ್ಬ ಎಂಬ ಮುನ್ಸೂಚನೆ ಕೂಡ ಜೋ ಬಿಡೆನ್‌ರಿಂದ ಸಿಕ್ಕಿತ್ತು. ಬಿಡೆನ್ ಈ ರೀತಿಯ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಷ್ಯಾ ಹ್ಯಾಕರ್ಸ್ ಕೃತ್ಯ ಬಟಾಬಯಲಾಗಿದೆ. ರಷ್ಯಾ ಮೂಲದ ಹ್ಯಾಕರ್‌ಗಳ ಬಗ್ಗೆ ಜೋ ಬಿಡೆನ್ ಸಹಿತವಾಗಿ ಡೆಮಾಕ್ರಟಿಕ್ ಪಕ್ಷದ ನಾಯಕರು ಹಲವು ವರ್ಷಗಳಿಂದ ನಾನಾ ಆರೋಪ ಮಾಡುತ್ತಾ ಬಂದಿದ್ದಾರೆ. ಎಲ್ಲಾ ಆರೋಪಗಳಿಗೂ ಅಮೆರಿಕ ಅಧಿಕಾರಿಗಳೇ ಉತ್ತರ ನೀಡಿದ್ದು, ಅಮೆರಿಕದ ಮೇಲೆ ಸೈಬರ್ ದಾಳಿ ಮಾಡಿರುವ ಬಗ್ಗೆ ಸತ್ಯ ಒಪ್ಪಿಕೊಂಡಿದ್ದಾರೆ. ಆದರೆ ಎಷ್ಟು ಪ್ರಮಾಣದ ನಷ್ಟ ಸಂಭವಿಸಿದೆ ಎಂಬುದನ್ನು ಬಾಯಿಬಿಟ್ಟಿಲ್ಲ.

ಅಂಚೆ ಮತದಾನದ ಹಿಂದೆ ಮಾಸ್ಟರ್ ಪ್ಲಾನ್..?

ಅಂಚೆ ಮತದಾನದ ಹಿಂದೆ ಮಾಸ್ಟರ್ ಪ್ಲಾನ್..?

ಈ ಬಾರಿ ಅಮೆರಿಕದಲ್ಲಿ ಕೊರೊನಾ ಸಂಕಷ್ಟ ಎದುರಾಗಿರುವ ಕಾರಣ ಅಂಚೆ ಮತದಾನಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ 40 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಅಂಚೆ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ ಹೀಗೆ 2020ರ ಅಧ್ಯಕ್ಷೀಯ ಚುನಾವಣೆಗೆ ಅಂಚೆ ಮತದಾನ ಪದ್ಧತಿಯನ್ನೇ ಏಕೆ ಅಳವಡಿಸಿದ್ದು ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಸಿಕ್ಕಿಲ್ಲ.

ಆದರೂ ಹ್ಯಾಕರ್ಸ್ ಈ ಬಾರಿ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ನಿಯಂತ್ರಿಸಲು ಅಂಚೆ ಮತದಾನಕ್ಕೆ ನಿರ್ಧರಿಸಲಾಗಿದೆ ಎನ್ನಲಾಗ್ತಿದೆ. ಚುನಾವಣಾ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರ ಪ್ರಕಾರ ಅಂಚೆ ಮತದಾನದ ಹಿನ್ನೆಲೆ ರಷ್ಯಾ ಹಸ್ತಕ್ಷೇಪ ಸಾಧ್ಯವಿಲ್ಲ. 2016ರ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಇಷ್ಟೆಲ್ಲಾ ಕ್ರಮಗಳನ್ನ ಕೈಗೊಂಡಿದ್ದರೂ ಹ್ಯಾಕರ್‌ಗಳು ಅಮೆರಿಕದಲ್ಲಿ ತಮ್ಮ ಕೈಚಳಕ ತೋರಿದ್ದಾರೆ.

English summary
US officials have made serious allegations against the Russia about hacking in America. The incident took place before the US presidential election is a week away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X