ಮನೆಯಿಂದಲೇ ಮತದಾನ: ಅಳಿಸಲಾಗದ ಶಾಹಿ ಹಾಕಬೇಕೆ?
ಬೆಂಗಳೂರು, ಏಪ್ರಿಲ್ 25: ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ 40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿಕಲಚೇತನ ಮತದಾರರು ಮನೆಯಿಂದ ಮತದಾನ ಮಾಡಬಹುದು.
ಮನೆಯಿಂದಲೇ ಮತದಾನ ಮಾಡುವ ನೋಂದಾಯಿತ ಮತದಾರರಿಗೆ ನಮೂನೆಗಳನ್ನು ತಲುಪಿಸಲಾಗುತ್ತದೆ. ಸಿಬ್ಬಂದಿಗಳು ಅಗತ್ಯ ಸಿದ್ದತೆ ಮಾಡಿಕೊಂಡು, ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸುತ್ತಾ, ಮತದಾನದ ಗೌಪ್ಯತೆ ಕಾಪಾಡಿಕೊಂಡು ಮತವನ್ನು ಪಡೆಯುತ್ತಾರೆ.

ಆದರೆ ಮನೆಯಿಂದಲೇ ಮತದಾನ ಮಾಡುವವರ ಕೈಗೆ ಶಾಹಿ ಹಾಕಬೇಕೇ? ಎಂಬ ಬಗ್ಗೆ ಕೆಲವು ಗೊಂದಲ ಉಂಟಾಗಿತ್ತು. ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಕರ್ನಾಟಕ ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಇವರಿಗೆ ಸ್ಪಷ್ಟನೆಯನ್ನು ನೀಡಿದೆ.
85 ವರ್ಷ ಮೇಲ್ಪಟ್ಟ ಹಾಗೂ ದಿವ್ಯಾಂಗ ಮತದಾರರಿಗೆ Home Votersಗೆ ಹಾಗೂ PVC ಕೇಂದ್ರಗಳಲ್ಲಿ ಮತ ಚಲಾಯಿಸುವ AVES ವರ್ಗದ ಮತದಾರರಿಗೆ ಅಳಿಸಲಾಗದ ಶಾಹಿ (Indelible Ink) ಯನ್ನು ಹಚ್ಚುವ ಬಗ್ಗೆ ಸ್ಪಷ್ಟನೆಯನ್ನು ಕೋರಿರುತ್ತಾರೆ.
ನೀಡಿರುವ ಸ್ಪಷ್ಟನೆ ಏನು?; ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 11/4/2024ರಂದು ವಿಡಿಯೋ ಕಾನ್ಸರೆನ್ಸ್ ಮೂಲಕ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ ಇವರು 85 ವರ್ಷ ಮೇಲ್ಮಟ್ಟ ಹಾಗೂ ದಿವ್ಯಾಂಗ ಮತದಾರರಿಗೆ ಹಾಗೂ PVC ಕೇಂದ್ರಗಳಲ್ಲಿ ಮತ ಚಲಾಯಿಸುವ AVES ವರ್ಗದ ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಹಚ್ಚುವ ಬಗ್ಗೆ ಸೃಷ್ಟಿಕರಣವನ್ನು ನೀಡುವಂತೆ ಕೋರಿದ್ದಾರೆ.
ಚುನಾವಣಾ ಆಯೋಗದ ಉಲ್ಲೇಖಿತ ಪತ್ರದಲ್ಲಿನ ನಿರ್ದೇಶನಗಳ ಅನ್ವಯ 65 ವರ್ಷ ಮೇಲ್ಮಟ್ಟ ಹಾಗೂ ದಿವ್ಯಾಂಗ ಮತದಾರರಿಗೆ Home Votersಗೆ ಹಾಗೂ PVC ಕೇಂದ್ರಗಳಲ್ಲಿ ಮತ ಚಲಾಯಿಸುವ AVES ವರ್ಗದ ಮತದಾರಿಂದ ಸಹಿಯನ್ನು ಪಡೆದುಕೊಳ್ಳಲು ನಿರ್ದೇಶನವನ್ನು ನೀಡಿರುತ್ತದೆ.
ಆದರೆ, ಅಳಿಸಲಾಗದ ಶಾಹಿಯನ್ನು ಹಚ್ಚುವ ಬಗ್ಗೆ ಈ ಕುರಿತು ಯಾವುದೇ ನಿರ್ದೇಶನವನ್ನು ನೀಡಿರುವುದಿಲ್ಲ. ಆದರೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ತಮ್ಮ ಮತದಾನವನ್ನು ಸೌಲಭ್ಯ ಕೇಂದ್ರಗಳಲ್ಲಿ ಚಲಾಯಿಸಿದಾಗ ಅಂತಹ ಮತದಾರರಿಗೆ ಅವರ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಬೇಕೆಂದು ನಿರ್ದೇಶನವಿರುತ್ತದೆ.
ಮುಂದುವರೆದು, Conduct of Election Rules,1961 ರ ನಿಯಮ 37ರಡಿ ಪ್ರತಿ ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಹಚ್ಚುವ ಬಗ್ಗೆ ತಿಳಿಸಲಾಗಿದೆ. ಆದ್ದರಿಂದ, 85 ವರ್ಷ ಮೇಲ್ಪಟ್ಟ ಹಾಗೂ ದಿವ್ಯಾಂಗ ಮತದಾರರಿಗೆ ಹಾಗೂ PVC ಕೇಂದ್ರಗಳಲ್ಲಿ ಮತ ಚಲಾಯಿಸುವ AVES ವರ್ಗದ ಮತದಾರರಿಗೆ ಯಾವುದೇ ಸೋಗು ಹಾಕುವಿಕೆಯನ್ನು (Impersonation ) ತಡೆಯಲು ಉಲ್ಲೇಖಿತ ಪತ್ರದಲ್ಲಿ ಯಾವುದೇ ಸ್ಪಷ್ಟ ನಿರ್ದೇಶನಗಳು ಇಲ್ಲದೇ ಇರುವುದರಿಂದ Conduct of Election Rules, 1961 ರ ನಿಯಮ 37ರಡಿ ಪ್ರತಿ, 85 ವರ್ಷ ಮೇಲ್ಪಟ್ಟ ಹಾಗೂ ದಿವ್ಯಾಂಗ ಮತದಾರರಿಗೆ ಹಾಗೂ PVC ಕೇಂದ್ರಗಳಲ್ಲಿ ಮತ ಚಲಾಯಿಸುವ AVES ವರ್ಗದ ಮತದಾರರಿಗೆ ಅವರ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚುವಂತ ಕ್ರಮವಹಿಸಿ ಈ ಪ್ರಕ್ರಿಯೆಗಳಲ್ಲಿ ಭಾರತ ಚುನಾವಣಾ ಆಯೋಗವು ನೀಡಿರುವ ನಿರ್ದೇಶನಗಳನ್ನು ಪಾಲಿಸಿ ಯಾವುದೇ ಲೋಪಗಳು ಆಗದಂತೆ ಮುನ್ನಚ್ಚರಿಕೆ ವಹಿಸುವಂತೆ ಸ್ಪಷ್ಟನೆ ನೀಡಲಾಗಿದೆ.












Click it and Unblock the Notifications