• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್‌ಗೆ ನಾಗರಿಕತ್ವ..!

|

ಅಮೆರಿಕದ ಗುಪ್ತಚರ ಮಾಹಿತಿ ಬಯಲಿಗೆಳೆದಿದ್ದ ಕಾರಣಕ್ಕಾಗಿ ಶಿಕ್ಷೆಯ ಭೀತಿ ಎದುರಿಸುತ್ತಿರುವ ಎಡ್ವರ್ಡ್ ಸ್ನೋಡೆನ್‌ಗೆ ರಷ್ಯಾ ಶಾಶ್ವತ ನಾಗರಿಕತ್ವ ನೀಡಿ ಗೌರವಿಸಿದೆ. ಭದ್ರತೆ ಹೆಸರಲ್ಲಿ ಅಮೆರಿಕನ್ನರ ಖಾಸಗಿ ಮಾಹಿತಿ ಕದಿಯುತ್ತಿದ್ದ ಸರ್ಕಾರದ ಸೀಕ್ರೇಟ್ ವಿಚಾರವನ್ನು ಸ್ನೋಡೆನ್‌ ಬಯಲಿಗೆಳೆದಿದ್ದರು.

ಅಮೆರಿಕದ NSA ಜನರ ಖಾಸಗಿ ಮಾಹಿತಿ ಕದಿಯುತ್ತಿದ್ದ ಬಗ್ಗೆ 2013ರಲ್ಲಿ ಸ್ವತಃ NSA ಉದ್ಯೋಗಿಯಾಗಿದ್ದ ಸ್ನೋಡೆನ್ ಸಂಪೂರ್ಣ ಮಾಹಿತಿ ಹೊರಹಾಕಿದ್ದರು. ಅಂದಿನ ಒಬಾಮಾ ಸರ್ಕಾರ ಎಡ್ವರ್ಡ್ ಸ್ನೋಡೆನ್‌ ಬಂಧನಕ್ಕೆ ಅದೆಷ್ಟು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ತಕ್ಷಣ ಅಮೆರಿಕದಿಂದ ಕಾಲ್ಕಿತ್ತು, ರಷ್ಯಾದಲ್ಲಿ ಸ್ನೋಡೆನ್ ಆಶ್ರಯ ಪಡೆದಿದ್ದರು.

ಬ್ರಾಡ್ ಬ್ಯಾಂಡ್ ಲೋಕಕ್ಕೆ ಜಿಯೋ ಫೈಬರ್ ಸೆಪ್ಟೆಂಬರ್ 05ಕ್ಕೆ ಎಂಟ್ರಿ

ಬಳಿಕ ಅಮೆರಿಕ ಸರ್ಕಾರದಿಂದ ಎಷ್ಟೇ ಒತ್ತಡ ಬಂದರೂ ರಷ್ಯಾ ಕೇರ್ ಮಾಡಿರಲಿಲ್ಲ. ಹಲವು ಬಾರಿ ಸ್ನೋಡೆನ್ ವೀಸಾ ಅವಧಿ ವಿಸ್ತರಣೆ ಮಾಡಿತ್ತು. ಇತ್ತೀಚೆಗೆ ಸ್ನೋಡೆನ್‌ ಪರವಾಗಿ ಅಮೆರಿಕ ಕೋರ್ಟ್ ತೀರ್ಪು ನೀಡಿತ್ತು.

ಭದ್ರತೆ ಹೆಸರಲ್ಲಿ ಜನರ ಖಾಸಗಿ ಮಾಹಿತಿ ಕದಿಯುವುದು ಅಪರಾಧ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ಕೋರ್ಟ್ ಛೀಮಾರಿ ಹಾಕಿತ್ತು. ಈ ಗೆಲುವಿನ ಬೆನ್ನಲ್ಲಿ ಸ್ನೋಡೆನ್‌ಗೆ ಇನ್ನೊಂದು ಸಿಹಿಸುದ್ದಿ ಸಿಕ್ಕಿದ್ದು, ಇನ್ನುಮುಂದೆ ಸ್ನೋಡೆನ್ ರಷ್ಯಾದ ನಾಗರಿಕನಾಗಿ ಅಲ್ಲೇ ಬದುಕಬಹುದಾಗಿದೆ.

ಸ್ನೊಡೆನ್ ಕೇಸ್: ಖಾಸಗಿ ಮಾಹಿತಿ ಕದಿಯುವುದು ಅಪರಾಧ- ಕೋರ್ಟ್

ಆಧಾರ್ ಬಗ್ಗೆಯೂ ಮಾತನಾಡಿದ್ದ ಸ್ನೋಡೆನ್

ಈ ಹಿಂದೆ ಭಾರತದಲ್ಲಿ ನಡೆದಿದ್ದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಸ್ನೋಡೆನ್, ಭಾರತದ ಆಧಾರ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆಧಾರ್ ಯೋಜನೆಯು ಉತ್ತಮ ಧ್ಯೇಯ ಹೊಂದಿದೆ, ಆದರೆ ಆಧಾರ್‌ನಿಂದ ಭಾರತೀಯರ ಖಾಸಗಿತನಕ್ಕೆ ಧಕ್ಕೆಯಾಗಬಾರದು ಎಂದು ಸ್ನೋಡೆನ್ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಆಧಾರ್ ಮೂಲಕ ಭಾರತೀಯರ ಖಾಸಗಿ ಮಾಹಿತಿ ದುರಪಯೋಗ ಮಾಡಿಕೊಂಡರೆ, ಅಂತಹ ವ್ಯಕ್ತಿ ಅಥವಾ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಪ್ಪು ಖಾತೆ ವಿವರ ಲೀಕ್ ಮಾಡಿದ್ದ ಎಲ್ಮಾರ್ ಎಲ್ಲಿ?

ಸ್ನೋಡೆನ್‌ಗೆ 30 ವರ್ಷ ಶಿಕ್ಷೆ ಕಾದಿತ್ತು

2013ರಲ್ಲಿ NSA ಕುರಿತಾದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ತಿಳಿಸಿದ್ದ ಸ್ನೋಡೆನ್‌ಗೆ ಕಠಿಣ ಶಿಕ್ಷೆ ಕಾದಿತ್ತು. ಒಬಾಮಾ ಸರ್ಕಾರ ಸ್ನೋಡೆನ್ ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿತ್ತು. ಅಷ್ಟಕ್ಕೂ ಅಮೆರಿಕದಲ್ಲಿ ಈ ರೀತಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಹೊರಗೆಡವಿದರೆ 30 ವರ್ಷದವರೆಗೆ ಶಿಕ್ಷೆ ನೀಡಬಹುದು. ಆದರೆ 7 ವರ್ಷಗಳ ಹಿಂದೆಯೇ ಅಮೆರಿಕ ಬಿಟ್ಟು ಎಸ್ಕೇಪ್ ಆಗಿರುವ ಸ್ನೋಡೆನ್ ರಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಾಗಿ ಶಿಕ್ಷೆಯಿಂದ ಪಾರಾಗಿದ್ದಾರೆ. ಅಲ್ಲದೆ ಇದೀಗ ರಷ್ಯಾದ ಶಾಶ್ವತ ನಾಗರಿಕತ್ವ ಪಡೆಯುವ ಮೂಲಕ, ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದಿದ್ದಾರೆ.

English summary
Russia granted Snowden a permanent citizenship. He migrated to Russia in 2013, several times Russia extended his visa, Now gifted him permanent citizenship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X