Daily Horoscope June 3: ಈ ರಾಶಿಯವರಿಗೆ ಆದಾಯ ಹೆಚ್ಚಳ, ಹೊಸ ಉದ್ಯೋಗದ ಶುಭ ಸುದ್ದಿ: 12 ರಾಶಿಗಳ ದಿನ ಭವಿಷ್ಯ
Daily Horoscope June 3: ಜೂನ್ 3ರ ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದಿರುವ ದಿನ ಭವಿಷ್ಯವಾಗಿದೆ. ಬುಧವಾರ 12 ರಾಶಿಗಳ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ವಿವರ ಈ ಲೇಖನದಲ್ಲಿ ನೋಡೋಣ.
ಮೇಷ ರಾಶಿ
ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯ ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಹೊಸ ಉದ್ಯೋಗ ಸಿಗುವುದು.ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ವೃಷಭ ರಾಶಿ
ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುವುದು. ಕುಟುಂಬದಲ್ಲಿ ಶುಭ ಚಟುವಟಿಕೆಗಳ ಯೋಜನೆಗಳು ಪ್ರಾರಂಭವಾಗುತ್ತವೆ. ಕೆಲಸದಲ್ಲಿ ತಾತ್ಕಾಲಿಕ ಅಡೆತಡೆಗಳು ಎದುರಾಗುವುದು. ಆತ್ಮವಿಶ್ವಾಸದಿಂದ ಮುಂದುವರಿದರೆ ಪರಿಹಾರವೂ ಸಿಗುವುದು.

ಮಿಥುನ ರಾಶಿ
ಗೌರವ ಮತ್ತು ಮನ್ನಣೆ ಸಿಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವುದು. ತಾಳ್ಮೆ ಅಗತ್ಯ. ತಾಳ್ಮೆ ಇಲ್ಲದಿದ್ದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಕಟಕ ರಾಶಿ
ಹೆಚ್ಚಿನ ಖರ್ಚುಗಳು ಆರ್ಥಿಕ ಸಮತೋಲನವನ್ನು ಹಾಳುಮಾಡಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಹಗುರವಾಗಿ ಪರಿಗಣಿಸುವುದರಿಂದ ವಾತಾವರಣ ಹಾಳಾಗಬಹುದು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ ದೊರೆಯುತ್ತದೆ.
ಸಿಂಹ ರಾಶಿ
ಉತ್ತಮ ಲಾಭವಾಗುವುದು. ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯುತ್ತದೆ.ಆಸ್ತಿ ವಿಷಯಗಳಲ್ಲಿನ ಅಡೆತಡೆಗಳು ದೂರವಾಗುವುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಉದ್ಭವಿಸಬಹುದು.
ಕನ್ಯಾರಾಶಿ
ಇಂದು ಈ ರಾಶಿಯವರಿಗೆ ಏರಿಳಿತಗಳ ದಿನ. ಹಣಕಾಸಿನ ಸಮಸ್ಯೆ ಎದುರಾಗಬಹುದು. ಸಂಗಾತಿಯಿಂದ ಆರ್ಥಿಕ ನೆರವು ಸಿಗಬಹುದು. ಕಚೇರಿ ವಾತಾವರಣ ಉತ್ತಮವಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮ ಗುರುತಿಸಲ್ಪಡುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.
ತುಲಾ ರಾಶಿ
ಇಂದು ಯಶಸ್ಸು ತರುವ ದಿನ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಹೊಸ ಆದಾಯದ ಮೂಲಗಳು ಕಾಣಿಸಿಕೊಳ್ಳುತ್ತವೆ. ವ್ಯವಹಾರದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನ ಅಗತ್ಯ.
ವೃಶ್ಚಿಕ ರಾಶಿ
ಇಂದು ಲಾಭದಾಯಕ ದಿನ. ಆತುರದ ನಿರ್ಧಾರಗಳು ಬೇಡ. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂಭ್ರಮ ಇರುತ್ತದೆ. ಪ್ರೇಮ ಜೀವನದಲ್ಲಿ ಪರಸ್ಪರ ಸಹಕಾರ ಹೆಚ್ಚಾಗುತ್ತದೆ. ಆರೋಗ್ಯದತ್ತ ಕಾಳಜಿ ಇರಲಿ.
ಧನು ರಾಶಿ
ಕಠಿಣ ಪರಿಶ್ರಮಕ್ಕೆ ಫಲ ಸಿಗುವುದು. ಆರ್ಥಿಕ ಒತ್ತಡ ಕ್ರಮೇಣ ಕಡಿಮೆಯಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.
ಮಕರ ರಾಶಿ
ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಮತೋಲನ ಕಾಯ್ದುಕೊಂಡರೆ ಯಶಸ್ಸು ನಿಮ್ಮದಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ. ಕೆಲಸದಲ್ಲಿನ ಹೊಸ ಆಲೋಚನೆಗಳು ಮೆಚ್ಚುಗೆ ಪಡೆಯುತ್ತವೆ. ಹೂಡಿಕೆಗಳಿಂದ ಆರ್ಥಿಕ ಲಾಭಗಳು ಬರುತ್ತವೆ.
ಕುಂಭ ರಾಶಿ
ತೆಗೆದುಕೊಳ್ಳುವ ನಿರ್ಧಾರದಿಂದ ಸಮ್ಯೆ ಉಂಟಾಗಬಹುದು. ಆಸ್ತಿ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸುವುದು ಉತ್ತಮ. ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಆದಾಯ ಹೆಚ್ಚಾಗುವುದು. ಹೊಸ ಜೀವನಶೈಲಿಯನ್ನು ಪ್ರಾರಂಭಿಸಲು ಇದು ಒಳ್ಳೆಯ ದಿನ.
ಮೀನ ರಾಶಿ
ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗಬಹುದು. ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಸಂಗಾತಿಯ ಜೊತೆ ಮನಸ್ತಾಪ ಮೂಡಬಹುದು. ಮಾನಸಿಕ ನೆಮ್ಮದಿ ಹಾಳಾಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications