ಲೈಂಗಿಕ ಹಗರಣದ ನಂಟು: ಟಿವಿ ನಿರೂಪಕನ ಕೆನ್ನೆಗೆ ಬಾರಿಸಿದ ಸಚಿವ
ಇಸ್ಲಾಮಾಬಾದ್, ಜನವರಿ 7: ಪಾಕಿಸ್ತಾನದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಟಿಕ್ ಟಾಕ್ ಸ್ಟಾರ್ ಹರೀಮ್ ಶಾ ಲೈಂಗಿಕ ಹಗರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿದ್ದಕ್ಕಾಗಿ ಟಿವಿ ಚಾನೆಲ್‌ನ ನಿರೂಪಕನಿಗೆ ಕಪಾಳಮೋಕ್ಷ ಮಾಡಿದ್ದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಒಪ್ಪಿಕೊಂಡಿದ್ದಾರೆ.
ಮದುವೆ ಸಮಾರಂಭವೊಂದರಲ್ಲಿ ನಿರೂಪಕನ ಕೆನ್ನೆಗೆ ಬಾರಿಸಿದ್ದಾಗಿ ಅವರು ಹೇಳಿದ್ದಾರೆ. ಎಲ್ಲದಕ್ಕಿಂತ ಮೊದಲು ತಾನೊಬ್ಬ ಮನುಷ್ಯ. ಈ ರೀತಿ ಪ್ರತಿಕ್ರಿಯಿಸುವುದು ಸಹಜ ಎಂದು ಅವರು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದಾರೆ.
'ಸಚಿವ ಸ್ಥಾನ ಬರುತ್ತದೆ, ಹೋಗುತ್ತದೆ. ಆದರೆ ನಾನು ವೈಯಕ್ತಿಕ ದಾಳಿಗಳನ್ನು ಸಹಿಸಿಕೊಳ್ಳುವುದಿಲ್ಲ. ನಾವೆಲ್ಲರೂ ಹುಟ್ಟಿನಿಂದ ಮನುಷ್ಯರು. ಯಾರಾದರೂ ಸುಳ್ಳು ಆರೋಪಗಳನ್ನು ಮಾಡಿದಾಗ ಅದಕ್ಕೆ ಪ್ರತಿಕ್ರಿಯಿಸುತ್ತೇವೆ' ಎಂದು ಚೌಧರಿ ಹೇಳಿಕೊಂಡಿದ್ದಾರೆ.
ಫವಾದ್ ಅವರು ಟಿವಿ ನಿರೂಪಕ ಮುಬಾಷರ್ ಲುಕ್ಮನ್ ಕಪಾಳಕ್ಕೆ ಹೊಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬಳಿಕ ಟ್ವೀಟ್ ಮಾಡಿದ್ದ ಫವಾದ್, ಮುಬಾಷರ್ ವಿರುದ್ಧ ಹರಿಹಾಯ್ದಿದ್ದರು. ಮುಬಾಷರ್ ಒಬ್ಬ ನಕಲಿ ಪತ್ರಕರ್ತ ಎಂದು ಆರೋಪಿಸಿದ್ದರು.

ಪತ್ರಿಕೋದ್ಯಮಕ್ಕೆ ಅರ್ಹನಲ್ಲ
ಈ ಜಗಳದ ಕುರಿತಾದ ಪತ್ರಿಕಾ ವರದಿಯೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಫವಾದ್, 'ಮುಬಾಷರ್ ಲುಕ್ಮನ್‌ನಂತಹ ವ್ಯಕ್ತಿ ಪತ್ರಿಕೋದ್ಯಮದಲ್ಲಿ ಇರಲು ಲಾಯಕ್ಕಲ್ಲ. ಆತನ ಬಣ್ಣವನ್ನು ಕಳಚುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ' ಎಂದು ಬರೆದಿದ್ದಾರೆ.

ಜತೆಗಿದ್ದ ಫವಾದ್ ಮತ್ತು ಹರೀಮ್
ಲುಕ್ಮನ್ ಅವರ ಕಾರ್ಯಕ್ರಮದ ಕುರಿತು ಮಾತನಾಡಿರುವ ಸಹ ನಿರೂಪಕ ರೈ ಸಕೀಬ್ ಖರಾಲ್, ಫವಾದ್ ಚೌಧರಿ ಮತ್ತು ಟಿಕ್ ಟಾಕ್ ಸ್ಟಾರ್ ಹರೀಮ್ ಶಾ ಜತೆಗಿರುವ ಅನೇಕ ಅಸಭ್ಯ ವಿಡಿಯೋಗಳನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಫವಾದ್ ಮತ್ತು ಹರೀಮ್ ಶಾ ಒಟ್ಟಿಗಿರುವ ಸಂದರ್ಭಗಳನ್ನು ಸಹ ಖುದ್ದು ನೋಡಿರುವುದಾಗಿ ಹೇಳಿಕೊಂಡಿದ್ದಾರೆ.

ಸಂಸತ್‌ನಲ್ಲಿ ವಾಗ್ವಾದ ಸೃಷ್ಟಿಸಿದ 'ವಿಡಿಯೋ'
ಟಿವಿ ನಿರೂಪಕರ ಜತೆಗೆ ಫವಾದ್ ಚೌಧರಿ ಅನುಚಿತವಾಗಿ ವರ್ತಿಸಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷದ ಜೂನ್‌ನಲ್ಲಿ ಟಿವಿ ನಿರೂಪಕ ಸಮಿ ಇಬ್ರಾಹಿಂ ಅವರಿಗೂ ಮದುವೆ ಸಮಾರಂಭದಲ್ಲಿಯೇ ಕಪಾಳಮೋಕ್ಷ ಮಾಡಿದ್ದರು. ಫವಾದ್ ಅವರ ಅಸಭ್ಯ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನಾಯಕ ಖವಾಜಾ ಆಸಿಫ್ ಮತ್ತು ಫವಾದ್ ನಡುವೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತೀವ್ರ ವಾಗ್ವಾದ ನಡೆಯಿತು.

ವಿವಾದದಲ್ಲಿ ಸಚಿವ ರಶೀದ್
ರೈಲ್ವೆ ಸಚಿವ ಶೇಖ್ ರಶೀದ್ ವಿಡಿಯೋ ಕಾಲ್‌ಗಳಲ್ಲಿ ಹರೀಮ್ ಶಾ ಅವರೊಂದಿಗೆ ಮಾತನಾಡಿದ್ದನ್ನು ಚಿತ್ರೀಕರಿಸಲಾಗಿದೆ. ಅವುಗಳಲ್ಲಿ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹರೀಮ್ ಶಾ ಮತ್ತು ಅವರ ಗೆಳತಿ ಸುಂದಲ್ ಖಟ್ಟಕ್ ಜತೆಗೂಡಿ ಪಾಕಿಸ್ತಾನದ ಪ್ರಮುಖ ರಾಜಕಾರಣಿಗಳನ್ನು ಲೈಂಗಿಕ ಹಗರಣದ ಖೆಡ್ಡಾಕ್ಕೆ ಬೀಳಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಹರೀಮ್ ಶಾ, ತಾವು ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು, ಪಾಕಿಸ್ತಾನ ತ್ಯಜಿಸುವುದಾಗಿ ಹೇಳಿಕೊಂಡಿದ್ದಾರೆ. ಈಗ ಈ ವಿವಾದದಲ್ಲಿ ಫವಾದ್ ಹೆಸರೂ ಕೇಳಿಬಂದಿದೆ.
-
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications