ಭಾರತದ ಶತ್ರು ಪಾಕಿಸ್ತಾನಕ್ಕೆ ಕೊನೆಗೂ ಸಿಕ್ಕ ಹೊಸ ಪ್ರಧಾನಿ!
ಪಾಕಿಸ್ತಾನದ ರಾಜಕೀಯ ಅದೆಷ್ಟು ದರಿದ್ರ ಸ್ಥಿತಿಗೆ ಬಂದಿದೆ ಅನ್ನೋದು ಮೊನ್ನೆ ಮೊನ್ನೆಯಷ್ಟೇ ನಡೆದ, ಪಾಕಿಸ್ತಾನದ ಲೋಕಸಭೆ ಚುನಾವಣೆ ವೇಳೆ ಗೊತ್ತಾಗಿತ್ತು. ಇನ್ನು, ಪಾಕಿಸ್ತಾನದಲ್ಲಿ ಪರಿಸ್ಥಿತಿ ಸರಿ ಹೋಗಲ್ಲ, ಆ ದೇಶ ಬದಲಾಗಲ್ಲ. ಅಲ್ಲಿನ ರಾಜಕಾರಣಿಗಳು ಸ್ವಂತ ದೇಶಕ್ಕೇ ಕಂಟಕ ಆಗುತ್ತಾರೆ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಭ್ರಷ್ಟಾಚಾರ ಆರೋಪವನ್ನು ಹೊತ್ತರೂ ಚುನಾವಣೆ ಮುಗಿಸಿರುವ ಪಾಕಿಸ್ತಾನದಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದೆ.
ಪಾಕಿಸ್ತಾನದ ಚುನಾವಣೆ ಮಹಾಯುದ್ಧದ ರೀತಿ ಕಗ್ಗಂಟಾಗಿ ಇತ್ತು. ಕೇವಲ ಒಂದು ಚುನಾವಣೆ ನಡೆಸಲು ಕೂಡ ತಾಕತ್ ಇಲ್ಲದ ಈ ದೇಶದಲ್ಲಿ ಇದೀಗ, ಸಾರ್ವತ್ರಿಕ ಚುನಾವಣೆಯ ವೇಳೆ ಭಾರಿ ದೊಡ್ಡ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಆರೋಪ ಬಳಿಕ ಪಾಕಿಸ್ತಾನದ ಮಾನ, ಪ್ರಪಂಚದ ಮೂಲೆ ಮೂಲೆಯಲ್ಲೂ ಹರಾಜು ಆಗಿದೆ. ಇದೇ ಸಮಯದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವನ್ನೂ ಹಿಂದಿಕ್ಕಿದ್ದ, ನವಾಜ್ ಷರೀಫ್ ಪಕ್ಷ ಈಗ ಮೈತ್ರಿ ಆಟ ಆಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆ. ಅರೆರೆ, ಹಾಗಾದರೆ ಭಾರತದ ಶತ್ರು ದೇಶದ ನೂತನ ಪ್ರಧಾನಿ ಯಾರು ಗೊತ್ತೆ?

ನವಾಜ್ ಷರೀಫ್ ತಮ್ಮನಿಗೆ ಪಟ್ಟ!
ಅಂದಹಾಗೆ ಪಾಕಿಸ್ತಾನದ ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿ 2ನೇ ಬಾರಿಗೆ ಶೆಹಬಾಜ್ ಷರೀಫ್ ಆಯ್ಕೆ ಆಗಿದ್ದಾರೆ. ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ರಚನೆಗೆ ನಡೆದ ಬಹುಮತ ಪ್ರಕ್ರಿಯೆ ವೇಳೆ, ಪಾಕಿಸ್ತಾನ ಸಂಸತ್ತಿನಲ್ಲಿ ಷರೀಫ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್), ಪಾಕಿಸ್ತಾನ ಪೀಪಲ್ಸ್ ಪಕ್ಷ (ಪಿಪಿಪಿ) ಪಕ್ಷಗಳ ಒಕ್ಕೂಟದ, ಪ್ರಧಾನಿ ಆಗಿ ಇದೀಗ 72 ವರ್ಷದ ಶೆಹಬಾಜ್ ಷರೀಫ್ ಆಯ್ಕೆ ಆಗಿದ್ದಾರೆ. ಹಾಗಾದರೆ ಇದೀಗ ಶೆಹಬಾಜ್ ಷರೀಫ್ ಪರ ಬಿದ್ದ ಮತಗಳ ಸಂಖ್ಯೆ ಎಷ್ಟು ಗೊತ್ತೆ?
ಇಮ್ರಾನ್ ಖಾನ್ ಪಕ್ಷಕ್ಕೆ ಆಘಾತ
ಇದೀಗ ಪಾಕಿಸ್ತಾನದ ಸಂಸತ್‌ನಲ್ಲಿ ಇರುವ ಒಟ್ಟಾರೆ 336 ಸದಸ್ಯರಲ್ಲಿ, ಶೆಹಬಾಜ್ ಪರ 201 ಮತ ಬಿದ್ದಿವೆ. ಈ ಮೂಲಕ ಅಗತ್ಯ ಇರುವ ಮತಗಳಿಗಿಂತ ಒಟ್ಟು 32 ಮತಗಳು ಹೆಚ್ಚಾಗಿ ಸಿಕ್ಕಿವೆ ಎನ್ನಲಾಗಿದೆ. ಶೆಹಬಾಜ್ ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ ಇ ಇನ್‌ಸಾಫ್ (ಪಿಟಿಐ) ಪಕ್ಷದ ಪ್ರಧಾನಿ ಅಭ್ಯರ್ಥಿ ಓಮರ್ ಅಯೂಬ್ ಖಾನ್‌ಗೆ ಕೇವಲ 92 ಮತ ಬಿದ್ದಿವೆ. ಈ ಮೂಲಕ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಕೂಡ ಇಮ್ರಾನ್ ಖಾನ್ ಪಕ್ಷ ಹೀನಾಯ ಹಿನ್ನಡೆ ಅನುಭವಿಸಿದೆ.

ಪಾಕಿಸ್ತಾನದ 24ನೇ ಪ್ರಧಾನಿ ಷರೀಫ್
ಇನ್ನು ಈ ಗೆಲುವಿನ ಮೂಲಕ ಶೆಹಬಾಜ್ ಷರೀಫ್ ಪಾಕಿಸ್ತಾನದ 24ನೇ ಪ್ರಧಾನಿ ಆಗಿದ್ದಾರೆ. ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಶೆಹಬಾಜ್ ಷರೀಫ್ ಗೆಲುವನ್ನು ಪ್ರಕಟಿಸಿದ್ದು, ನಾಳೆಯೇ ಅಂದ್ರೆ ಸೋಮವಾರ ಶೆಹಬಾಜ್ ಷರೀಫ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಶೆಹಬಾಜ್ ಷರೀಫ್ ಗೆಲುವಿನ ನಂತರ, ಪಾಕಿಸ್ತಾನದ ಪರಿಸ್ಥಿತಿ ಭೀಕರವಾಗಿದೆ. ಇಮ್ರಾನ್ ಖಾನ್‌ರ ಪಕ್ಷ ಪಿಟಿಐ ಬೆಂಬಲಿತ ಸಂಸದರ ಘೋಷಣೆ & ಗದ್ದಲ ನಡುವೆ ಸಂಸತ್ತಿನ ಕಲಾಪ ಮುಕ್ತಾಯವಾಗಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಹಿಂಸಾಚಾರ ಭುಗಿಲೇಳುವ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications