FIFA World Cup 2026: ಚಾಂಪಿಯನ್ ನಿರ್ಣಯಿಸಿದ ಆ ಒಂದೇ ಒಂದು ಗೋಲು ರೋಚಕ; ಲಿಯೋನೆಲ್ ಮೆಸ್ಸಿ ಕನಸು ನುಚ್ಚುನೂರು!

FIFA World Cup 2026: ಪ್ರಪಂಚದಾದ್ಯಂತ ಅತಿ ಹೆಚ್ಚು ಜನಪ್ರಿಯವಾಗಿರುವ ಪುಟ್ಬಾಲ್ ಕ್ರೀಡೆಯ ವಿಶ್ವಕಪ್ 2026ರಲ್ಲಿ ಸ್ಪೇನ್ ಎರಡನೇ ಬಾರಿ ಚಾಂಪಿಯನ್ ಆಗಿದೆ. ಈ ಮೂಲಕ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದೇ ಖ್ಯಾತಿ ಗಳಿಸಿರುವ ಲಿಯೋನೆಲ್ ಮೆಸ್ಸಿ (Lionel Messi) ಅವರ ಕನಸು ನುಚ್ಚುನೂರಾಗಿದೆ. ಒಂದೇ ಒಂದು ಗೋಲು ಸ್ಪೇನ್ ಹಾಗೂ ಅರ್ಜೆಂಟೀನಾ ನಡುವೆ ಯಾರು ಚಾಂಪಿಯನ್ ಆಗಬೇಕು ಎನ್ನುವುದನ್ನು ನಿರ್ಣಯಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಫಿಫಾ ವಿಶ್ವಕಪ್ 2026ಗೆ ತೆರೆಬಿದ್ದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಫಿಫಾ ವಿಶ್ವಕಪ್ 2026 ಫೈನಲ್ ಟೂರ್ನಿಯಲ್ಲಿ ಈ ಬಾರಿ ಮೊದಲಿನಿಂದಲೂ ಸ್ಪೇನ್ ಪ್ರಬಲ ಪೈಪೋಟಿಯನ್ನು ನೀಡಿತ್ತು. ಎದುರಾಳಿ ತಂಡಗಳು ಗೋಲ್ ಗಳಿಸದಂತೆ ತಡೆಗೋಡೆಯನ್ನೇ ನಿರ್ಮಿಸುವಂತೆ ತಂಡದ ಆಟಗಾರರು ಆಟವಾಡಿದ್ದರು. ಅಮೆರಿಕದ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ (ಜುಲೈ 19ರಂದು ಭಾರತೀಯ ಕಾಲಮಾನದಲ್ಲಿ ತಡರಾತ್ರಿ) ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲು ಅಂತರದಲ್ಲಿ ಮಣಿಸುವಲ್ಲಿ ಸ್ಪೇನ್ ಯಶಸ್ವಿಯಾಗಿದ್ದು, ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

FIFA World Cup 2026 Final

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರು ಈಗಾಗಲೇ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಮತ್ತೊಂದು ಐತಿಹಾಸಿಕ ಅಧ್ಯಾಯವನ್ನು ಸೇರಿಸುವ ಕನಸಿನೊಂದಿಗೆ ನ್ಯೂಜೆರ್ಸಿಗೆ ಅವರು ಆಗಮಿಸಿದ್ದರು. ಆದರೆ, ವಿಶ್ವಕಪ್ ಫೈನಲ್‌ನಲ್ಲಿ ಪ್ರಾರಂಭವಾದ ಕ್ಷಣದಿಂದಲೇ ಸ್ಪೇನ್ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡು, ಮೆಸ್ಸಿಯ ಕನಸಿಗೆ ತೆರೆ ಎಳೆದಿತು.

ಸ್ಪೇನ್ ತಂಡವು ಪಂದ್ಯದುದ್ದಕ್ಕೂ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಗೋಲು ಗಳಿಸುವ ಅವಕಾಶಗಳನ್ನು ನಿಯಂತ್ರಿಸಿ, ಪಂದ್ಯದ ಗತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡು, ಅರ್ಜೆಂಟೀನಾಗೆ ಯಾವುದೇ ಆಕ್ರಮಣಕಾರಿ ಲಯ ಸಿಗದಂತೆ ತಡೆಯಿತು. ಅಂತಿಮವಾಗಿ ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ ಗಳಿಸಿದ ಗೋಲಿನ ನೆರವಿನಿಂದ 1-0 ಅಂತರದ ಜಯ ಸಾಧಿಸಿದ ಸ್ಪೇನ್, ತನ್ನ ಎರಡನೇ FIFA ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಹಾಲಿ ಚಾಂಪಿಯನ್ ಆಗಿರುವ ಅರ್ಜೆಂಟೀನಾ ತಂಡವನ್ನು 1-0 ಗೋಲು ಅಂತರದಲ್ಲಿ ಮಣಿಸಿದ ಸ್ಪೇನ್ ನೂತನ ಚಾಂಪಿಯನ್ ಆಗಿ ದಾಖಲೆ ಬರೆದಿದೆ. ಮೊದಲಾರ್ಧದಲ್ಲಿ ಗೋಲೇ ಇಲ್ಲದಂತೆ ಅಥವಾ ಗೋಲು ರಹಿತವಾಗಿ ಪಂದ್ಯವು ಸಾಗಿತ್ತು. ಆದರೆ, ದ್ವಿತೀಯಾರ್ಧಲ್ಲಿ ಪಂದ್ಯವು ರೋಚಕ ತಿರುವು ಪಡೆದುಕೊಳ್ಳುವುದಕ್ಕೆ ಶುರುವಾಯಿತು.

FIFA World Cup 2026: ಕೊನೆಯವರೆಗೂ ಪಟ್ಟು ಬಿಡದ ಅರ್ಜೆಂಟೀನಾ!

ಸ್ಪೇನ್ ಗೆಲ್ಲುವುದರೊಂದಿಗೆ ಫಿಫಾ ವಿಶ್ವಕಪ್ 2026ಗೆ ತೆರೆಬಿದ್ದಂತೆ ಆಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಫಿಫಾ ವಿಶ್ವಕಪ್ 2026 ಫೈನಲ್ ಟೂರ್ನಿಯಲ್ಲಿ ಅರ್ಜೆಂಟೀನಾ ಗೆಲುವು ದಾಖಲಿಸಿತಾದರೂ, ಅರ್ಜೆಂಟೀನಾ ಕೊನೆಯ ಕ್ಷಣದ ವರೆಗೂ ಸರ್ಕಸ್ ನಡೆಸಿತ್ತು. ಸ್ಪೇನ್ ಆಕ್ರಮಣಕಾರಿ ಆಟವನ್ನು ಮುಂದುವರೆಸಿದರೆ, ಅರ್ಜೆಂಟೀನಾ ಸಹ ತನ್ನ ರಕ್ಷಣಾತ್ಮಕ ಆಟವನ್ನೇ ಆಡಿತ್ತು.

ಕೊನೆಯ ಅಥವಾ ಹೆಚ್ಚುವರಿ ಸಮಯದ ವರೆಗೂ ಅರ್ಜೆಂಟೀನಾ ಯಾವುದೇ ಅಪಾಯಕಾರಿ ಸನ್ನಿವೇಶವನ್ನು ಮೈಮೇಲೆ ಎಳೆದುಕೊಂಡಿರಲಿಲ್ಲ. ಆದರೆ ಅಂತಿಮ ಹಂತದಲ್ಲಿ ಪಂದ್ಯದ ಅವಧಿ ಮುಕ್ತಾಯವಾಗಿ ಹೆಚ್ಚುವರಿ ಸಮಯ ಸಿಕ್ಕಾಗ ಸ್ಪೇನ್ ನ ಫೆರಾನ್ ಟೋರ್ಸ್ ಸ್ಪೇನ್ ಪರ ಗೋಲು ದಾಖಲಿಸಿದರು ಇದು ಐತಿಹಾಸಿಕ ಗೆಲುವಿಗೆ ಕಾರಣವಾಯಿತು. ಈ ಒಂದೇ ಒಂದು ಗೋಲು ಸ್ಪೇನ್‌ಗೆ ವಿಶ್ವ ಚಾಂಪಿಯನ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+