'ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಾಂಬ್ ಇಟ್ಟವರಿಂದ ಪಾಕ್ ಪರ ಘೋಷಣೆ' ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಹೇಳಿಕೆ
ಬೆಂಗಳೂರು ಫೆಬ್ರವರಿ 29: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಾಂಬ್ ಇಟ್ಟವರಿಂದ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ 'ಪಾಕಿಸ್ತಾನ ಜಿಂದಾಬಾದ್' (Pakistan Zindabad) ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, '2008ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಾಂಬ್ ಇಟ್ಟ ನಾಜಿ ಜೊತೆಗೆ ಇದ್ದ ಭಯೋತ್ಪಾದಕರು ಇವತ್ತು ಈ ನಾಜಿರ್ ಜೊತೆಗೆ ಇದ್ದಾರೆ. ಇವರೇ ಪಾಕ್ ಜಿಂದಾಬಾದ್ ಎಂದು ಕೂಗಿದ್ದಾರೆ' ಎಂದು ಆರೋಪಿಸಿದ್ದಾರೆ.

2008ರಲ್ಲಿ ನಡೆದ ಘಟನೆ ಮತ್ತೆ ಮರುಕಳಿಸುವುದರಲ್ಲಿ ಅನುಮಾನವೇ ಇಲ್ಲ. 'ವಿಧಾನಸೌಧದ ಒಳಗೆ ಇವರು ಬಾಂಬ್ ಇಡೋದ್ರಲ್ಲಿ ಯಾವುದೇ ಅನುಮಾನವೇ ಇಲ್ಲ' ಎಂದು ಮುನಿರತ್ನ ಹೇಳದ್ದಾರೆ. ಇದಕ್ಕೆ ದಾಖಲಾತಿಗಳು ಇಲ್ಲ. ಆದರೆ ಅವರೇ ಇವರು ಇರಬಹುದು ಎಂದು ಜನ ಹೇಳ್ತಾಯಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ಗೂ ಎಲ್ಲಾ ತಿಳಿಸಿದಿದೆ. ಆದರೆ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.












Click it and Unblock the Notifications