Pakistan Rain: ಪಾಕಿಸ್ತಾನದಲ್ಲಿ ಅಧಿಕ ಮಳೆ, ಪ್ರವಾಹ: 49 ಜನ ಸಾವು- ತುರ್ತು ಪರಿಸ್ಥಿತಿ ಘೋಷಣೆ!

ನೆರೆಯ ದೇಶ ಪಾಕಿಸ್ತಾನದಲ್ಲಿ ಕಳೆದ ಕೆಲ ದಿನಗಳಿಂದ ಅಧಿಕ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಪಾಕಿಸ್ತಾನದಾದ್ಯಂತ ಮೂರು ದಿನಗಳ ನಿರಂತರ ಭಾರೀ ಮಳೆ ಮತ್ತು ಸಿಡಿಲಿನಿಂದಾಗಿ 49 ಜನರು ಸಾವನ್ನಪ್ಪಿದ್ದಾರೆ. ಧಾರಾಕಾರ ಮಳೆಯಿಂದಾಗಿ ದೇಶದ ನೈಋತ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಗೋಧಿ ಕೊಯ್ಲು ಮಾಡುತ್ತಿದ್ದಾಗ ಸಿಡಿಲು ಬಡಿದು ಕೆಲವು ರೈತರು ಸಾವನ್ನಪ್ಪಿರುವುದು ವರದಿಯಾಗಿದೆ. ಅಧಿಕ ಮಳೆಯಿಂದಾಗಿ ವಾಯುವ್ಯ ಮತ್ತು ಪೂರ್ವ ಪ್ರಾಂತ್ಯದಲ್ಲಿ ಹತ್ತಾರು ಮನೆಗಳು ಕುಸಿದಿವೆ. ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಅರ್ಫಾನ್ ಕಥಿಯಾ ಅವರು ಈ ವಾರ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು ಜನ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದಾರೆ.

Dozens killed as storms lash Pakistan and Afghanistan in kannada

ಇಸ್ಲಾಮಾಬಾದ್‌ನಲ್ಲೂ ಧಾರಾಕಾರ ಮಳೆ

ಅಫ್ಘಾನಿಸ್ತಾನದ ಗಡಿಯಲ್ಲಿರುವ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಖುರ್ಷಿದ್ ಅನ್ವರ್, ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ 21 ಜನರು ಸಾವನ್ನಪ್ಪಿದ್ದಾರೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿಯೂ ಸಹ ಧಾರಾಕಾರ ಮಳೆಯಾಗುತ್ತಿದ್ದು, ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ವಾಯುವ್ಯ ನಗರವಾದ ಪೇಶಾವರ ಮತ್ತು ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ರಸ್ತೆಗಳು ಜಲಾವೃತವಾಗಿವೆ ಎಂದಿದ್ದಾರೆ.

ಪ್ರಧಾನಿ ಷರೀಫ್ ಹೇಳಿದ್ದೇನು?

ಈ ಪ್ರಕೃತಿ ವಿಕೋಪದ ಕುರಿತು ದೇಶದ ಪ್ರಧಾನಿ ಶಹಬಾಜ್ ಷರೀಫ್ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಪರಿಹಾರ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಮಳೆಯಿಂದಾಗಿ ಪಾಕಿಸ್ತಾನದ ಜಲಾಶಯಗಳು ಸುಧಾರಿಸುತ್ತವೆ ಎಂದು ಅವರು ಹೇಳಿದರು.

ಪಾಕಿಸ್ತಾನದ ಪರಿಸರ ತಜ್ಞ ರಾಫೆ ಆಲಂ ಅವರು ಏಪ್ರಿಲ್‌ನಲ್ಲಿ ಇಂತಹ ಭಾರೀ ಮಳೆ ಅಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ ಬಿಸಿಗಾಳಿ ಕಾಣಿಸಿಕೊಂಡಿತ್ತು ಮತ್ತು ಈಗ ನಾವು ಮಳೆಯನ್ನು ನೋಡುತ್ತಿದ್ದೇವೆ ಎಂದು ಹೇಳಿದರು. ಇದೆಲ್ಲವೂ ಹವಾಮಾನ ಬದಲಾವಣೆಗೆ ಕಾರಣ ಎಂದು ಅವರು ಹೇಳಿದರು.

Dozens killed as storms lash Pakistan and Afghanistan in kannada

ದೇಶ 2022ರಲ್ಲಿ ದೊಡ್ಡ ಪ್ರವಾಹವನ್ನು ಎದುರಿಸಬೇಕಾಯಿತು. 2022 ರಲ್ಲಿ, ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದವು ಮತ್ತು ಪಾಕಿಸ್ತಾನದ ಮೂರನೇ ಒಂದು ಭಾಗವನ್ನು ಮುಳುಗಿಸಿತು. ಇದರಿಂದಾಗಿ 1,739 ಜನರು ಸಾವನ್ನಪ್ಪಿದರು ಮತ್ತು $ 30 ಶತಕೋಟಿ ಪ್ರವಾಹ ಹಾನಿಯನ್ನು ಉಂಟಾಗಿತ್ತು. ಈಗ ಮತ್ತೆ ಪ್ರವಾಹ ಸ್ಥಳೀಯರಲ್ಲಿ ಆತಂಕ ತಂದಿದೆ.

ಅಫ್ಘಾನಿಸ್ತಾನದಲ್ಲೂ ಭಾರೀ ಮಳೆ

ಪಾಕಿಸ್ತಾನ ಮಾತ್ರವಲ್ಲ, ಅಫ್ಘಾನಿಸ್ತಾನವೂ ಭಾರೀ ಮಳೆ ಮತ್ತು ಪ್ರವಾಹವನ್ನು ಎದುರಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಕಾಲೋಚಿತ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಮೂರು ದಿನಗಳಲ್ಲಿ 33 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಜನರು ಗಾಯಗೊಂಡಿದ್ದಾರೆ. 600 ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, ಸುಮಾರು 200 ಪ್ರಾಣಿಗಳು ಸಹ ಸಾವನ್ನಪ್ಪಿವೆ.

ಪ್ರವಾಹದಿಂದಾಗಿ ಕೃಷಿ ಭೂಮಿ ಮತ್ತು 85 ಕಿಮೀ (53 ಮೈಲುಗಳು) ಗಿಂತ ಹೆಚ್ಚಿನ ರಸ್ತೆಗಳನ್ನು ಹಾನಿಗೊಳಗಾಗಿದೆ. ಅಫ್ಘಾನಿಸ್ತಾನದಲ್ಲಿ ಸುಮಾರು 23,000 ಕುಟುಂಬಗಳಿಗೆ ನೆರವು ನೀಡಲಾಗಿದೆ. ದೇಶದ 34 ಪ್ರಾಂತ್ಯಗಳಲ್ಲಿ 20 ರಲ್ಲಿ ಹಠಾತ್ ಪ್ರವಾಹ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+