ಪಾಕಿಸ್ತಾನ ಪರ ಬಿಜೆಪಿ ಕಾರ್ಯಕರ್ತರು & ನಾಯಕರ ಘೋಷಣೆ?
ರಾಜ್ಯದಲ್ಲಿ ಹೊಸ ರಾಜಕೀಯ ಯುದ್ಧ ಶುರುವಾಗಿದ್ದು, ಕರ್ನಾಟಕದ ರಾಜಕೀಯ ಪಾಪಿ ಪಾಕಿಸ್ತಾನದ ವಿಚಾರವಾಗಿ ತಿರುವು ಪಡೆದಿದೆ. ಅದ್ರಲ್ಲೂ ನಿನ್ನೆ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ, ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆಯ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳ ನಡುವೆ ಇದೀಗ ಕಾಂಗ್ರೆಸ್ ಕೂಡ ಹೊಸ ವಿಡಿಯೋ ಒಂದನ್ನ ಹರಿಬಿಟ್ಟಿದ್ದು, ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು & ನಾಯಕರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
ಅಷ್ಟಕ್ಕೂ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಯನ್ನ ವಿಧಾನಸೌಧದ ಪಡಸಾಲೆ ಮೇಲೆ ನಿಂತು ಕೆಲವರು ಕೂಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ನಿನ್ನೆ ಈ ಘಟನೆ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರು ಗೆದ್ದ ನಂತರ ಸಂಭ್ರಮಾಚರಣೆ ವೇಳೆ ಹೀಗೆಲ್ಲಾ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ್ರು ಅಂತಾ ಮಾಧ್ಯಮಗಳು ವರದಿ ಮಾಡಿದ್ದವು. ಈ ಎಲ್ಲಾ ತಿಕ್ಕಾಟದ ನಡುವೆ ಇದೀಗ ಕಾಂಗ್ರೆಸ್ ಕರ್ನಾಟಕ, ಬಿಜೆಪಿ ವಿರುದ್ಧ ವಿಡಿಯೋ ರಿಲೀಸ್ ಮಾಡಿ ಗಂಭೀರ ಆರೋಪ ಮಾಡಿದೆ. ಆ ವಿಡಿಯೋ ಇಲ್ಲಿದೆ ಮುಂದೆ ಓದಿ.

ಬಿಜೆಪಿ ನಾಯಕರಿಂದ 'ಪಾಕಿಸ್ತಾನ್ ಜಿಂದಾಬಾದ್'??
ಇದೀಗ ಕಾಂಗ್ರೆಸ್ ಮಾಡಿರುವ ಟ್ವೀಟ್ ಪ್ರಕಾರ, 'ಬಿಜೆಪಿಗೆ ಸದಾ ಪಾಕಿಸ್ತಾನದ ಪ್ರೀತಿ, ಪ್ರೇಮ ಉಕ್ಕಿ ಹರಿಯುತ್ತದೆ, ಸದಾ ಪಾಕಿಸ್ತಾನದ ಜಪ ಮಾಡುತ್ತಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಇಂದು ನಸೀರ್ ಸಾಬ್ ಜಿಂದಾಬಾದ್ ಎಂದಿದ್ದನ್ನು ತಿರುಚಿ ಬೊಬ್ಬೆ ಹೊಡೆಯುತ್ತಿರುವ
@BJP4Karnataka ತನ್ನ ಆಡಳಿತದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರು,' ಎಂದು ಆರೋಪ ಮಾಡಿದೆ.
'ಅವರನ್ನು ಗಲ್ಲಿಗೆ ಹಾಕಿಲ್ಲವೇಕೆ?'
ಹಾಗೇ ಇದರ ಜೊತೆಗೆ ತನ್ನ ಟ್ವೀಟ್ ಆರೋಪ ಮುಂದುವರಿಸಿದ ಕಾಂಗ್ರೆಸ್, 'ಅವರನ್ನು ಗಲ್ಲಿಗೆ ಹಾಕಿಲ್ಲವೇಕೆ? ಅವರ ಮೇಲೆ ಪ್ರಕರಣ ದಾಖಲಿಸಿಲ್ಲ ಏಕೆ? ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರನ್ನು ಏಕಮೇವ ನಾಯಕನೆಂದು ಕೊಂಡಾಡುವ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ.' ಎಂದು ಗಂಭೀರ ಆರೋಪ ಮಾಡಿ ಇದೀಗ ಟ್ವೀಟ್ ಒಂದನ್ನ ಮಾಡಿದೆ ಕರ್ನಾಟಕ ಕಾಂಗ್ರೆಸ್. ಈ ಮೂಲಕ ಕರ್ನಾಟಕ ಬಿಜೆಪಿ ಪಕ್ಷದ ನಾಯಕರಿಗೆ ಕಾಂಗ್ರೆಸ್ ಸವಾಲು ಹಾಕಿದೆ.
ಬಿಜೆಪಿಗೆ ಸದಾ ಪಾಕಿಸ್ತಾನದ ಪ್ರೀತಿ, ಪ್ರೇಮ ಉಕ್ಕಿ ಹರಿಯುತ್ತದೆ,
— Karnataka Congress (@INCKarnataka) February 28, 2024
ಸದಾ ಪಾಕಿಸ್ತಾನದ ಜಪ ಮಾಡುತ್ತಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
ಇಂದು ನಸೀರ್ ಸಾಬ್ ಜಿಂದಾಬಾದ್ ಎಂದಿದ್ದನ್ನು ತಿರುಚಿ ಬೊಬ್ಬೆ ಹೊಡೆಯುತ್ತಿರುವ @BJP4Karnataka ತನ್ನ ಆಡಳಿತದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರು,… pic.twitter.com/nUwwWc7rpI
ಒಟ್ನಲ್ಲಿ ಕರ್ನಾಟಕದಲ್ಲಿ ಈಗ ಪಾಕಿಸ್ತಾನದ ಮ್ಯಾಟರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅದರಲ್ಲೂ ಬಿಜೆಪಿ & ಕಾಂಗ್ರೆಸ್ ನಾಯಕರು ಇದೇ ವಿಚಾರ ಮುಂದಿಟ್ಟು ಫೈಟಿಂಗ್ ಶುರು ಮಾಡಿದ್ದಾರೆ. ಹೀಗಾಗಿ ಇದೆಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತಪ್ಪಾ? ಅಂತಾ ಜನರು ಕೂಡ ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications